ತುಮಕೂರು
ನಗರದ ಜನಚಳುವಳಿ ಕೇಂದ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತೀಯ ಸಾಮಾಜಿಕ ಕಾರ್ಯಕರ್ತೆ ಗುಜರಾತ್ ನ ಇಳಾಭಟ್ ರವರ ಶ್ರದ್ದಾಂಜಲಿ ಸಭೆಯನ್ನು ಜನಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನುದ್ದೇಶಿಸಿ ಚಿಂತಕ ಸಿ.ಯತಿರಾಜ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಮತ್ತು ಮಹಿಳಾ ವ್ಯಾಪಾರಿಗಳು ಗುಜರಾತ್‍ನ ಇಳಾಭಟ್ ರವರನ್ನು ಸ್ಮರಿಸಲೇಬೇಕು, ದೇಶಕ್ಕೆ ಮಾದರಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಮಹಿಳೆ ಅಂದಿನ ಜಾಗತೀಕರಣವನ್ನು ಬಹಳ ಹತ್ತಿರದಿಂದ ಕನಸು ಕಂಡವರು. ವೃತ್ತಿಯಲ್ಲಿ ವಕೀಲರಾಗಿ ಸಮಾಜಿಕ ಬದ್ದತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಗೆ ಸಮಯ ಕೊಟ್ಟವರು. ಇವರು ಭಾರತದ ಬಡಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ಮಹಿಳಾ ಸಂಘವನ್ನು (ಸೇವಾ) ಸಂಸ್ಥೆಯನ್ನು 1972 ರಲ್ಲಿ ಸ್ಥಾಪಿಸಿ ಮಹಿಳೆಯರಿಗಾಗಿ ಟ್ರೇಡ್ ಯೂನಿಯನ್’ ಸಂಸ್ಥೆಯಾಗಿ 1.2 ಮಿಲಿಯನ್‍ಗೂ ಹೆಚ್ಚು ಸದಸ್ಯರನ್ನು ಹೊಂದಿದೆ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು ಸುಮಾರು 3 ಮಿಲಿಯನ್ (30ಲಕ್ಷ) ಹೆಣ್ಣು ಮಕ್ಕಳ ಜೀವನವನ್ನು ರೂಪಿಸಿ ಸಹಾಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಇವತ್ತಿನ ಬೀದಿಬದಿ ವ್ಯಾಪಾರಿಗಳು ಮಹಿಳಾ ವ್ಯಾಪಾರಿಗಳು ಇಂತಹ ಹೋರಾಟಗಾರರನ್ನು ನಿಜಕ್ಕೂ ನೆನಪಿಸಿಕೊಳ್ಳಬೇಕು ಇಂತಹ ಹೋರಾಟಗಾರರ ವಿಚಾರವನ್ನು ಓದುವ ಮೂಲಕ ಅಥವಾ ವಿಚಾರ ಅರಿವನ್ನು ಪುಸ್ತಕಗಳ ಮೂಲಕ ತಿಳಿದುಕೊಳ್ಳಬೇಕು.
ನಂತರ ಮಾತನಾಡಿದ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾಬಸವರಾಜ್ ಇಳಾಭಟ್ ರವರ ಹೋರಾಟ ಮತ್ತು ಅವರ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಅಂದಿನ ಸಮಾನತೆ ಸ್ವಾತಂತ್ರ್ಯ ಮಹಿಳಾ ನಾಯಕತ್ವಕ್ಕಾಗಿ ದುಡಿದ ದಿಟ್ಟ ಮಹಿಳೆ ಅಂತಹ ಹೋರಾಟಗಾರ್ತಿಯ ಶ್ರದ್ದಾಂಜಲಿ ಸಭೆ ಹಮ್ಮಿಕೊಂಡಿರುವುದು ನಿಜಕ್ಕೂ ಹೆಮ್ಮೆ ಪಡಬೇಕಿದೆ ಇವತ್ತಿನ ವ್ಯವಸ್ಥೆ ಮಹಿಳೆಯರ ಘನತೆಯನ್ನು ಗಾಳಿಗೆ ತೂರದ ಕೈಗೆ ಕೈ ಜೋಡಿಸುವ ಕಾರ್ಯವಾಗಬೇಕಿದೆ. ಸಮಾಜದ ಓರೆ ಕೋರೆಗಳಲ್ಲಿ ಮಹಿಳೆ ಸಿಲುಕಿ ಇವತ್ತಿನ ಹೋರಜಗತ್ತಿನಿಂದ ವಂಚಿಸಲಾಗುತ್ತಿದೆ ಅಂತಹ ಮಹಿಳೆಯರಿಗೆ ಇಳಾಭಟ್ ಮಾದರಿಯಾಗುತ್ತಾರೆ ಸಾಂಸರಿಕ ಜೀವನವನ್ನು ಬದಿಗಿಟ್ಟು ಸಮಾಜಮುಖಿ ಕಾರ್ಯದಲ್ಲಿ ಇಡೀ ದೇಶದ ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಇಳಾಭಟ್ ನಮಗೆಲ್ಲರಿಗೂ ಮಾದರಿಯಾಗಲಿ ಎಂದರು.
ಈ ಸಭೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ವೆಂಡಿಂಗ್ ಕಮಿಟಿಯ ಸದಸ್ಯ ವಸೀಂ ಸ್ವಾಗತಿಸಿ, ರವಿಕುಮಾರ್ ವಂದಿಸಿದರು. ವೇದಿಕೆಯಲ್ಲಿ ಬೀದಿಬದಿ ವ್ಯಾಪಾರಿಗಳ ನಗರ ಅಧ್ಯಕ್ಷ ರಾಜಶೇಖರ್, ಲಕ್ಷ್ಮಮ್ಮ,ಪಾರ್ವತಮ್ಮ ತುಮಕರು ಸ್ಲಂ ಸಮಿತಿಯ ಅರುಣ್, ತಿರುಮಲಯ್ಯ, ಮಂಗಳಮ್ಮ, ಹನುಮಕ್ಕ, ತಿರುಮಲ, ಸುಧಾ ಮುಂತಾದವರು ಹಾಜರಿದ್ದರು.