ತುಮಕೂರು
ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ಒತ್ತಾಯದ ಮೇರೆಗೆ ಮಹಾತ್ಮಗಾಂಧಿ ಕ್ರೀಡಾಂಗಣದ ಸಿಂಥಟಿಕ್ ಟ್ರಾಕ್ ನಿರ್ಮಾಣ ಕಾರ್ಯ ಬರದಿಂದ ಸಾಗಿದ್ದು,ಕ್ರೀಡಾಪಟುಗಳ ಮನವಿಗೆ ಸ್ಪಂದಿಸಿರುವ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.
ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಥಟಿಕ್ ನಿರ್ಮಾಣ ಕಾಮಗಾರಿಯನ್ನು ಕ್ರೀಡಾಪಟುಗಳೊಂದಿಗೆ ವೀಕ್ಷಿಸಿದ ನಂತರ ಮಾತನಾಡಿದ ಅವರು,ಕಳೆದ ನಾಲ್ಕು ವರ್ಷದಿಂದ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಸ್ಥಳ ವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.ಕ್ರೀಡಾಂಗಣ ನಿರ್ಮಾಣಗೊಂಡರು,ಮಳೆಯ ಕಾರಣದಿಂದ ಅಧಿಕಾರಿಗಳು ಸಿಂಥಟಿಕ್ ಟ್ರಾಕ್ ಅಳವಡಿಸಲು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಕ್ರೀಡಾಪುಟುಗಳು ಅಕ್ರೋಶ ವ್ಯಕ್ತಪಡಿಸಿ,ಹೋರಾಟಕ್ಕೆ ಮುಂದಾಗಿದ್ದರು.ವಿಷಯ ಅರಿತ ಶಾಸಕ ಜಿ.ಬಿ.ಜೋತಿಗಣೇಶ್, ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿ,ಟ್ರಾಕ್ ನಿರ್ಮಾಣದ ಜೊತೆಗೆ,ಪೂರಕ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭ ವಾಗಿದೆ. ಶಾಸಕರ ಈ ಪ್ರಯತ್ನಕ್ಕೆ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು ಕೃತ್ಞಜತೆ ಸಲ್ಲಿಸುತ್ತೇವೆ ಎಂದರು.
ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜರ್ಮನಿಯಿಂದ ಅಮದು ಮಾಡಿಕೊಳ್ಳಲಾದ ಸಿಂಥಟಿಕ್ ಟ್ರಾಕ್‍ನ ವಸ್ತುಗಳನ್ನು ಬಳಸಿ ಕೊಂಡು ನುರಿತ ತಂಡ ಈ ಕಾರ್ಯವನ್ನು ಕೈಗೊಂಡಿದೆ.ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಅವರು ಅತ್ಯಂತ ಗುಣಮಟ್ಟದ ವಸ್ತುಗಳನ್ನು ತರಿಸಿ ಟ್ರಾಕ್ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಸ್ಮಾರ್ಟ್‍ಸಿಟಿ ಅಧಿಕಾರಿಗಳನ್ನು ಅಭಿನಂದಿಸುತ್ತೇವೆ. ಕ್ರೀಡಾಂಗಣ ಬೇಗ ಸಿದ್ದಗೊಳ್ಳುವುದರಿಂದ ಮುಬರುವ
ವಿವಿಧ ಅಥ್ಲೇಟಿಕ ಕ್ರೀಡಾಕೂಟಗಳಿಗೆ ಅಭ್ಯಾಸ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಈಗಾಗಲೇ ಶಾಸಕರು ತಿಳಿಸಿರುವಂತೆ ಶೀಘ್ರವೇ ಕ್ರೀಡಾಂಗಣವನ್ನು ಸಾರ್ವಜನಿಕರಿಗೆ ತೆರವುಗೊಳಿಸಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಧನಿಯಕುಮಾರ್ ತಿಳಿಸಿದರು.
ಹಿರಿಯ ಕ್ರೀಡಾಪುಟು
ಟಿ.ಕೆ.ಆನಂದ ಮಾತನಾಡಿ, ಸಾರ್ವಜನಿಕರು ಮತ್ತು ಕ್ರೀಡಾಪಟುಗಳ ಒತ್ತಾಯದ ಮೇರೆಗೆ ಟ್ರಾಕ್ ನಿರ್ಮಾಣ ಕಾರ್ಯ ವೇಗ ಪಡೆದಿರುವುದು
ಸಂತೋಷದ ವಿಚಾರ.ಟ್ರಾಕ್ ನಿರ್ಮಾಣ ಕಾರ್ಯ ಬಹಳ ಸುಂದರವಾಗಿ ಮೂಡಿ ಬರುತ್ತಿದೆ.ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಅಂತರರಾಷ್ಟ್ರೀಯ ಕ್ರೀಡಾಪುಟಗಳನ್ನು ಕಾಣಬಹುದಾಗಿದೆ ಎಂದರು.
ಈ ವೇಳೆ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆಯ ಅನಿಲ್‍ಕುಮಾರ್ ಸೇರಿದಂತೆ ಹಲವು ಕ್ರೀಡಾಪಟುಗಳು ಉಪಸ್ಥಿತರಿದ್ದರು.
(Visited 2 times, 1 visits today)