ತುಮಕೂರು
ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಭವಿಷ್ಯದ ಭಾರತ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಪ್ರಧಾನಿ ನೆಹರು ಅವರ 134 ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತಿದ್ದ ಅವರು,ಸ್ವಾತಂತ್ರ ಬಂದಾಗ ದೇಶದಲ್ಲಿ ತಿನ್ನಲು ಅನ್ನವಿಲ್ಲದೆ, ಪ್ರತಿಯೊಂದಕ್ಕೂ ಪರಾವಲಂಭಿಯಾಗಿದ್ದ ಭಾರತವನ್ನು ಪಂಚವಾರ್ಷಿಕ ಯೋಜನೆಗಳ ಮೂಲಕ ಹಂತ ಹಂತವಾಗಿ ಕಟ್ಟಿ, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಿದ್ದು ನೆಹರು ಅವರು, ಆದರೆ ಇಂದಿನ ಪ್ರಧಾನಿ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಿ, ದೇಶವನ್ನು ಮತ್ತೊಮ್ಮೆ ಅದೋಗತಿಗೆ ತಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಭಾರತ ಮತ್ತೊಮ್ಮೆ ನೆರೆ ಹೊರೆ ರಾಷ್ಟ್ರಗಳಲ್ಲಿ ತಿನ್ನುವ ಅನ್ನಕ್ಕೂ ಭೀಕ್ಷೆ ಬೇಡುವಂತಹ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದರು.
ನೆಹರು ಅವರಿಗೆ ಮಕ್ಕಳೆಂದರೆ ಪಂಚಪ್ರಾಣ.ಹಾಗಾಗಿ ತಮ್ಮ ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸಲು ಕೋರಿಕೊಂಡರು. ಸಂಕಷ್ಟದ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದು,ಆಹಾರ,ಕೈಗಾರಿಕೆ,ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ದೇಶ ಅಭಿವೃದ್ದಿ ಶೀಲ ರಾಷ್ಟ್ರವಾಗಲು ದುಡಿದವರಲ್ಲಿ ನೆಹರು ಮೊದಲಿಗರು. ಇಂತಹ ವ್ಯಕ್ತಿ ಕಾಂಗ್ರೆಸ್ ಪಕ್ಷದ ಮುಖಂಡರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಆರ್.ರಾಮಕೃಷ್ಣ ನುಡಿದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ನಾಡಿನಾದ್ಯಂತ ಚಾಚು ನೆಹರು ಅವರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ ದೊರೆತಾಗ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹಳ ಹಿಂದುಳಿದಿತ್ತು. ಜಾತ್ಯಾತೀತ ರಾಷ್ಟ್ರದ ಪರಿಕಲ್ಪನೆಯಲ್ಲಿ ಹೊಸ ಹೊಸ ಯೋಜನೆ ತಂದು ದೇಶವನ್ನು ಅಭಿವೃದ್ದಿ ಪಥಕ್ಕೆ ತಂದರು. 1947 ನಿಂದ 1964ರವರೆಗೆ ತಂದ ಹಲವಾರು ಯೋಜನೆಗಳ
ಫಲವಾಗಿ,ಶೈಕ್ಷಣಿಕವಾಗಿ,ಕೈಗಾರಿಕಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಕೃಷಿಗೂ ಒತ್ತು ನೀಡಿ ದೇಶವನ್ನು ಅಭಿವೃದ್ದಿಯತ್ತ ಸಾಗುವಂತೆ ಮಾಡಿದರು. ಆದರೆ ಇದರ ಅರಿವಿಲ್ಲದ ಬಿಜೆಪಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಕೊಡುಗೆಯನ್ನು ಜನರ ಮುಂದಿಡುವ ಪ್ರಯತ್ನವನ್ನು ಕಾರ್ಯಕರ್ತರು ಮಾಡಬೇಕಿದೆ.ದೇಶದಲ್ಲಿ ಅಲ್ಪಸಂಖ್ಯಾತರು, ಇತರೆ ಸಮುದಾಯದವರು ನೆಮ್ಮದಿಯಿಂದ ಬದುಕಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ, ಮಕ್ಕಳ ಅಚ್ಚುಮೆಚ್ಚಿನ ಚಾಚಾ ಆಗಿದ್ದ ನೆಹರು, ಶ್ರೀಮಂತ ಮನೆತನದಲ್ಲಿ ಹುಟ್ಟಿ, ದೇಶದ ಸ್ವಾತಂತ್ರಕ್ಕಾಗಿ ಸಾಮಾನ್ಯರಂತೆ ಹೋರಾಟ ಮಾಡಿ,ತನ್ನ ಆಸ್ತಿ ಪಾಸ್ತಿಯನ್ನು ದೇಶಕ್ಕೆ ತ್ಯಾಗ ಮಾಡಿದವರು. ತಾಯ್ನಾಡಿಗಾಗಿ 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ನೆಹರು,ಅನೇಕ ತ್ಯಾಗ ಬಲಿದಾನ ಮಾಡಿದವರು.ಇವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಯ ಯಾವ ಮುಖಂಡರಿಗೂ ಇಲ್ಲ.ಸಾಕ್ಷರತೆ ಇಲ್ಲದ ನಾಡಿನ ದೇಶದ ಅರ್ಥಿಕ,ಸಾಮಾಜಿಕ,ಶೈಕ್ಷಣಿಕ ಯೋಜನೆಗಳನ್ನು ಜಾರಿ ಮಾಡಿ ದೇಶವನ್ನು ಅಭಿವೃದ್ದಿಯತ್ತ ಮುನ್ನೆಡೆಸಿದವರು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿಅಹಮದ್ ಮಾತನಾಡಿ,ಆಧುನಿಕ ಭಾರತದ ನಿಮಾತೃ ಎಂದು ಯಾರನ್ನಾದರೂ ಕರೆಯುವಂತಿದ್ದರೆ,
ಅದಕ್ಕೆ ನೆಹರು ಮಾತ್ರ ಆರ್ಹರು.ಮಹಾತ್ಮಗಾಂಧಿಗೆ ಸಲ್ಲುವ ಎಲ್ಲಾ ಗೌರವಗಳು ನೆಹರುಗೆ ಸಲ್ಲಸಬೇಕು.ಆದರೆ ಇಂದಿನ ಪ್ರಧಾನಿ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ನೆಹರು ಅವರನ್ನು ಅವಮಾನಿಸುವ ಮೂಲಕ ಜನತೆಯ ಮುಂದೆ ತಾವೇ ಬೆತ್ತಲೆಯಾಗುತ್ತಿದ್ದಾರೆ.
ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಒಂದಾಗಿ ದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕಿದೆ
ಎಂದರು.
ಕಾರ್ಯಕ್ರಮದಲ್ಲಿ ಕೆಂಪಣ್ಣ,ಮರಿಚನ್ನಮ್ಮ,ಮಂಜಣ್ಣï ರಾಜಣ್ಣ,ಮೆಹಬೂಬ್ ಪಾಷ, ಸಂಜೀವಕುಮಾರ್, ಸೇವಾದಳದ ಶಿವಪ್ರಸಾದ್,ಗೀತಾ,ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)