ತುಮಕೂರು

ಛಲವಾದಿ ಕಲಾ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ನವೆಂಬರ್ 20ರ ಭಾನುವಾರದಂದು ವೀರ ವಿನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ನಗರದ ಡಾ.ಗುಬ್ವಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಹರ್ತಿ ಪತ್ತಿನ ಸಹಕಾರ ಸಂಘದಲ್ಲಿ ಸೇರಿದ್ದ ಛಲವಾದಿ ಸಮುದಾಯದ ಮುಖಂಡರ ಸಭೆಯಲ್ಲಿ ಈ ನಿರ್ಣಯ
ಕೈಗೊಂಡಿದ್ದು, ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕ ಡಾ.ಜಿ.ಪರಮೇಶ್ವರ್,ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ರಾಜ್ಯ ಆಯೋಗದ ಅಧ್ಯಕ್ಷ ಹಾಗೂ ಶಾಸಕರಾದ ಚ.ನೆಹರು ಓಲೆಕಾರ್,ಮಾಜಿ ಸಚಿವ ಹಾಗೂ ಶಾಸಕ ಹೆಚ್.ಕೆ.ಕುಮಾರಸ್ವಾಮಿ,ನೆಲಮಂಗಲ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ, ತುಮಕೂರು ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಸೇರಿದಂತೆ ಸಮುದಾಯದ ಗಣ್ಯರುಗಳನ್ನು ಒನಕೆ ಓಬವ್ವ ಜಯಂತಿಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.
ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಂಗವಾಗಿ ಜನಾಂಗದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಕಲಾ,ಜನಪದ ಕ್ಷೇತ್ರದಲ್ಲಿ ದುಡಿದ ಹಿರಿಯರನ್ನು ಈ ವೇಳೆ ಗೌರವಿಸಲಾಗುವುದು.ಅಲ್ಲದೆ ಛಲವಾದಿ ಕಲಾ ಮತ್ತು ಸಾಂಸ್ಕøತಿಕ ವೇದಿಕೆಯಿಂದ ಕುರುಕ್ಷೇತ್ರ ನಾಟಕದ ಪ್ರದರ್ಶನವನ್ನು ಸಹ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ದಲಿತ ಛಲವಾದಿ ಮಹಾಸಭಾ, ಶ್ರೀಹರ್ತಿ ಪತ್ತಿನ ಸಹಕಾರ ಸಂಘ, ತುಮಕೂರು ಗ್ರಾಮಾಂತರ ಗ್ರಾಮೀಣಾಭಿವೃದ್ದಿ ಸಂಘ ಹಾಗೂ ತಾಲೂಕು ಛಲವಾದಿ ಮಹಾಸಭಾ ಘಟಕಗಳ ಸಹಕಾರದೊಂದಿಗೆ ಜಯಂತಿಯನ್ನು ಆಚರಿಸಲು ತೀರ್ಮಾನಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಛಲವಾದಿ ಸಮುದಾಯದ ಮುಖಂಡರಾದ ಡಾ.ಪಿ.ಚಂದ್ರಪ್ಪ,ಪುಟ್ಟಬೊರಯ್ಯ, ಟಿ.ಆರ್.ನಾಗೇಶ್, ಶಿವಶೈಕ್ಷಣಿಕ ಆಶ್ರಮದ ಲೇಪಾಕ್ಷಯ್ಯ,ಕೆ.ಕುಮಾರ್,ಮುಖಂಡರಾದ ಎನ್.ಜಗನ್ನಾಥ್,ಎಸ್.ರಾಜಣ್ಣ, ಹೆಚ್.ಎಸ್.ಪರಮೇಶ್, ಶಿವಶಂಕರ್,ಐ.ಆರ್.ವಿಶ್ವನಾಥ್,ಹೆಬ್ಬೂರು ನಾಗೇಂದ್ರ,ಗಿರಿಯಪ್ಪ, ಶ್ರೀನಿವಾಸ್ ನಿನಾಸಂ,ನರಸಿಂಹಮೂರ್ತಿ ಬಿ.ಆರ್.,ಟಿ.ಗಿರಿಯಣ್ಣ, ಎಸ್. ನರಸಿಂಹರಾಜು, ಆರ್.ಶಿವಣ್ಣ, ಗುರುರಾಜು ಮತ್ತಿತರರು ಹಾಜರಿದ್ದು, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

(Visited 1 times, 1 visits today)