ಕಲಬುರಗಿ:
ಇಲ್ಲಿನ ಶಾಲೆ, ಕಾಲೇಜುಗಳಆವರಣದಲ್ಲಿ ಎಗ್ಗಿಲ್ಲದೆ ಹುಕ್ಕಾ ಮಾರಾಟ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹುಕ್ಕಾ ಚಟಕ್ಕೆ ದಾಸರಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಹಬಾದ್ನ ನಿವಾಸಿ ರಜ್ವಾನ್ ಎಂಬಾತ ಆರನೇ ತರಗತಿ ಮಕ್ಕಳಿಗೆ 1 ಸಾವಿರ ರೂ.ದಿಂದ 1,200 ರೂ.ವರೆಗೆ ಹಣ ತೆಗೆದುಕೊಂಡು ಹುಕ್ಕಾ ಮಾರಾಟ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ದಂಧೆ ಬಯಲಾಗಿದೆ.
ಶಹಬಾದ್ನ ಖಾಸಗಿ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿಗಳುಬಿಂದಾಸ್ ಆಗಿ ಹುಕ್ಕಾ ಸೇದುತ್ತಿದ್ದಾರೆ. ಮಕ್ಕಳ ಈ ಚಟ ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳ್ಳತನದಲ್ಲಿ ತೊಡಗಿದ್ದ ಮಕ್ಕಳು:
ತಮ್ಮ ಮನೆಯಲ್ಲಿ ಹಣ ಕಳವು ಆಗುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪಾಲಕರು ಮಗನನ್ನು ಹಿಂಬಾಲಿಸಿದಾಗ ಹುಕ್ಕಾ ತೆಗೆದುಕೊಂಡು ಹಣ ನೀಡುತ್ತಿದ್ದುದನ್ನು ಕಂಡು ಕಂಗಾಲಾಗಿದ್ದಾರೆ. ಕೂಡಲೇ ರಿಜ್ವಾನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಕ್ಕಳಿಗೆ ಹಣ ಕದಿಯುವ ಉಪಾಯವನ್ನೂ ಆತನೇ ಹೇಳಿಕೊಟ್ಟಿದ್ದ ಎನ್ನಲಾಗಿದೆ
(Visited 17 times, 1 visits today)