ತುಮಕೂರು


ವಿದ್ಯಾರ್ಥಿಗಳು ಮಾರಾಟದ ಸರಕಾಗದೆ ಸಮಾಜಕ್ಕೆ ಆಸ್ತಿಯಾಗಬೇಕು. ನಮ್ಮ ಓದು, ಕೆಲಸ ಮಾರಾಟವಾಗದೆ ಸಾಧನೆಯ ಉನ್ನತಸ್ತರಕ್ಕೆ ನಮ್ಮನ್ನು ಕೊಂಡೊಯ್ಯುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಕರೆಕೊಟ್ಟರು
ಶ್ರೀ ಕನಕಶ್ರೀ ಸೇವಾ ಸಮಿತಿಯಿಂದ ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಲ್ಲಿ ಕಳೆದ ಐದು ದಿನಗಳಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ಸಮಾರೋಪ ಉದ್ಘಾಟಿಸಿ ಮಾತನಾಡಿ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆ ಇದೆ. ಐದು ದಿನಗಳಲ್ಲಿ ತಾವೂ ಕಲಿತಿದ್ದನ್ನು ಜೀವನದಲ್ಲಿ ಸ್ವಲ್ವವಾದರೂ ಅಳವಡಿಸಿಕೊಂಡರೆ ಮಾತ್ರ ಈ ಕಾರ್ಯಾಗಾರ ಸಾರ್ಥಕವಾಗುತ್ತದೆ. ಯುವಜನರು ಜಾಗತಿಕ ಸಂಸ್ಥೆಗಳಿಗೆ ಮಾರಾಟದ ವಸ್ತುಗಳಾಗದೆ, ಬೇಡಿಕೆಯ ಸ್ವತ್ತುಗಳಾಗಿ ರೂಪುಗೊಳ್ಳಬೇಕು ಎಂದರು.
ಶ್ರೀದೇವಿ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಜನಾಂಗ ವಿದ್ಯಾವಂತರಾಗಿ ಉನ್ನತ ಅವಕಾಶಗಳನ್ನು ಪಡೆದರೆ ಸಮಾಜ ಸುಂದರ ತೋಟವಾಗುತ್ತದೆ. ಎಲ್ಲಾ ಸ್ಪರ್ದಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸಿ.ಟಿ.ಮುದ್ದುಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ಕಾರ್ಯಗಾರದಲ್ಲಿ ದೊರೆತ ಮಾರ್ಗದರ್ಶನವನ್ನು್ನು ಇಲ್ಲಿಗೆ ಮರೆಯದೆ ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗುವಂತೆ ಸಲಹೆ ನೀಡಿದರು.
ಸಮುದಾಯದ ಮಕ್ಕಳು ಉತ್ತಮ ಭವಿಷ್ಯಕಟ್ಟಿಕೊಡಬೇಕೆಂಬ ನಿಸ್ವಾರ್ಥ ಭಾವದಿಂದ ಕನಕಶ್ರೀ ಸೇವಾಸಮಿತಿ ಹಾಗೂ ಶ್ರೀದೇವಿ ಛಾರಿಟಬಲ್ ಟ್ರಸ್ಟ್ ಇನ್‍ಸೈಟ್ ಐಎಎಸ್ ಅಕಾಡೆಮಿ ಅವರು ನೀಡಿದ ಮಾರ್ಗದರ್ಶನಕ್ಕೆ ನಾವೆಲ್ಲರು ಕೃತಜ್ಞರಾಗಿದ್ದೇವೆ ಎಂದು ಹೇಳಿ ಶಿಬಿರದ ಆಯೋಜನೆಗೆ ಕಾರಣೀಕರ್ತರಾದ ಎಸ್.ನಾಗಣ್ಣ, ಡಾ.ಎಂ.ಆರ್.ಹುಲಿನಾಯ್ಕರ್, ಡಾ.ರಮಣ್ ಹುಲಿನಾಯ್ಕರ್, ಟಿ.ಎನ್.ಮಧುಕರ್, ಡಾ.ಯೋಗೀಶ್, ಪ್ರೊ.ಪರಶುರಾಮ್, ರೇಣುಕಾಪ್ರಸಾದ್, ಡಾ.ಲಾವಣ್ಯ ಸಂಪನ್ಮೂಲ ವ್ಯಕ್ತಿ ಶಶಿಕುಮಾರ್, ಸಂಪ್ರೀತ್ ಇತರರನ್ನು ಸನ್ಮಾನಿಸಿ ಗೌರವಸಲ್ಲಿಸಿದರು.
ಪ್ರೊ.ಪರಶುರಾಮ್ ಸ್ವಾಗತಿಸಿ ಸೇವಾ ಸಮಿತಿ ಕಾರ್ಯಗಳ ಬಗ್ಗೆ ವಿವರಿಸಿದರೆ, ಡಾ.ಯೋಗಿಶ್ 5 ದಿನಗಳ ಶಿಬಿರದ ವರದಿಯನ್ನು ಸಭೆ ಮಂಡಿಸಿದರು.ರೇಣುಕಾಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಿಗೆಲ್ಲ ಪ್ರಮಾಣಪತ್ರ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು, ಕಾರ್ಯಗಾರಕ್ಕೆ ಸಹಕರಿಸಿದವರಿಗೆ ಗೌರವಸಲ್ಲಿಸಲಾಯಿತು.

(Visited 1 times, 1 visits today)