ತುಮಕೂರು
ಪಡಿತರ ಚೀಟಿದಾರರಿಗೆ 2 ಬಾರಿ ಬಯೋಮೆಟ್ರಿಕ್ ನಿಂದ ಹಾಗೂ ಸರ್ವರ್ ಅಭಾವದಿಂದ ತೊಂದರೆಯಾಗುತ್ತಿದ್ದು ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಕೊರಟಗೆರೆ ಎಪಿಜೆ ಅಬ್ಧುಲ್ ಕಲಾಂ ಯೂತ್ ಕೇರ್ ಹಾಗೂ ಸಾರ್ವಜನಿಕ ರು ಆಗ್ರಹಿಸಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕೊರಟಗೆರೆ ಎಪಿಜೆ ಅಬ್ಧುಲ್ ಕಲಾಂ ಯೂತ್ ಕೇರ್ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಪಡಿತರ ಆಹಾರ ಪದಾರ್ಥವನ್ನು ಪಡೆಯಲು 2 ಬಾರಿ ಬಯೋಮೆಟ್ರಿಕ್ ನಿಯಮ ಮಾಡಿದ್ದು, ಇದರಿಂದ ಬಡವರಿಗೆ ಹಾಗೂ ತೊಂದರೆಯಾಗುತ್ತಿದ್ದು, ಕಾರ್ಮಿಕರಿಗೆ ರೈತರಿಗೆ, ಮಹಿಳೆಯರಿಗೆ, ವೃದ್ಧರಿಗೆ ಮತ್ತು ಅಭಾವದಿಂದ ಕೂಲಿ ಕೆಲಸಗಳನ್ನು ಬಿಟ್ಟು ದಿನವಿಡೀ ತೊಂದರೆಯಾಗುತ್ತಿರುವುದರಿಂದ ಪದಾರ್ಥಗಳನ್ನು ಪಡೆಯಲು 2-3 ದಿನ ನ್ಯಾಯಬೆಲೆ ಅಂಗಡಿಗೆ ಅಲೆಯುವಂತಾಗಿರುತ್ತದೆ. ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪಡೆಯಲು ತಾವು ಸಂಬಂಧಪಟ್ಟ ಆಹಾರ ಇಲಾಖಾಧಿಕಾರಿಗಳಿಗೆ ಆದೇಶಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸುರೇಶ್ ಬಾಬು, ಮಹಮ್ಮದ್ ಫಾರೋಕ್, ಪುಷ್ಪಲತಾ, ಶಭಾನಾ, ಅಮ್ಜದ್ ಖಾನ್ , ಮಹಮ್ಮದ್ ಪಾμÁ ಹಾಗೂ ಸ್ಥಳೀಯರು ಹಾಜರಿದ್ದರು.