ತುಮಕೂರು


ವಾಯು ಮಾಲಿನ್ಯ ನಿಯಂತ್ರಣವೆಂಬುದು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗದೆ, ಪ್ರತಿ ದಿನ ಈ ನಿಟ್ಟಿನಲ್ಲಿ ವಾಹನ ಸವಾರರು ಮತ್ತು ಮಾಲೀಕರು
ಗಮನಹರಿಸಬೇಕಾಗಿದೆ. ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸು ವಂತೆ ಹಿರಿಯ ಸಾರಿಗೆ ಇಲಾಖೆ ಇನ್ಸ್‍ಪೆಕ್ಟರ್ ಸದರುಲ್ಲಾ ಷರೀಫ್ ತಿಳಿಸಿದ್ದಾರೆ.
ನಗರದ ಆರ್.ಟಿ.ಓ. ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು,ಪ್ರತಿವರ್ಷ ನವೆಂಬರ್ ತಿಂಗಳನ್ನು ಇಲಾಖೆಯ ವತಿಯಿಂದ ವಾಯು ಮಾಲಿನ್ಯ ತಡೆ ಮಾಸಾಚರಣೆ ನಡೆಸುತ್ತೇವೆ.ಈ ವೇಳೆ ಸಭೆ, ಸಮಾರಂಭ,ಕಾರ್ಯಾಗಾರಗಳ ಮೂಲಕ ವಾಹನಗಳ ಮಾಲೀಕರು, ಚಾಲಕರು ಹಾಗೂ ವಾಹನಗಳ ನಿರ್ಮಾಣ ಕಂಪನಿಗಳ ಜನರಿಗೆ ದೇಶದಲ್ಲಿ ವಾಹನಗಳ ಹೊಗೆಯಿಂದ ಹೆಚ್ಚುತ್ತಿರುವ ವಾಯು ಮಾಲೀನ್ಯ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳೇನು ಎಂಬುದನ್ನು ತಿಳಿಸಿಕೊಡುವುದರ ಜೊತೆಗೆ,ಪರಿಸರಕ್ಕೆ ಮಾರಕವಾದ ಹೊಗೆಯನ್ನು ಉಗುಳದಂತೆ ತಮ್ಮ ವಾಹನವನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂಬುದನ್ನು ತಜ್ಞರಿಂದ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಇಂದು ಆರ್.ಟಿ.ಓ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ವಾಯುಮಾಲಿನ್ಯ ತಡೆ ಮಾಸಾಚರಣೆಗೆ ಚಾಲನೆ ನೀಡಲಾಗಿದೆ. ಕರ್ನಾಟಕದ ಅತಿ ದೊಡ್ಡ ಜಿಲ್ಲೆ, ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಜೊತೆಗೆ ವಾಹನ ಚಾಲನಾ ತರಬೇತಿ ಸಂಸ್ಥೆಗಳ ಸಂಖ್ಯೆಯೂ ಏರುಮುಖದಲ್ಲಿದೆ.ವಾಹನ ತರಬೇತಿ ಶಾಲೆಗಳ ಅನುಕೂಲಕ್ಕಾಗಿ ಹಲವಾರು ಕ್ರಮಗಳ ಇಲಾಖೆ ತೆಗೆದುಕೊಂಡಿದೆ.ಅಲ್ಲದೆ ಪ್ರಯೋಗಿಕ ತರಬೇತಿಗೂ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ವಾಯು ಮಾಲಿನ್ಯವನ್ನು ಜನತೆ ಲಘುವಾಗಿ ಪರಿಗಣಿಸದೆ, ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಗಾಳಿ ಸಿಗುವಂತಹ ವಾತಾವರಣವನ್ನು ನಾವೆಲ್ಲರೂ ಬಿಟ್ಟು ಹೋಗಬೇಕಿದೆ ಎಂದು ಸದರುಲ್ಲಾ ಷರೀಫ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ರಾಜೇಶ್, ಜಿಲ್ಲಾ ವಾಹನ ತರಬೇತಿ ಶಾಲೆಗಳ ಮಾಲೀಕರ ಸಂಘದ ಗೌರವ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ,ಅಧ್ಯಕ್ಷ ಅಣ್ಣೇನಹಳ್ಳಿ ಶಿವಕುಮಾರ್,ಕಾರ್ಯದರ್ಶಿ ಬಸವರಾಜು, ಖಜಾಂಚಿ ನಾಗೇಶ್ ಹಾಗೂ ಲಾರಿ ಮತ್ತು ಆಟೋ ಚಾಲಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

(Visited 3 times, 1 visits today)