ತುಮಕೂರು


ಹರಳೂರು ಶ್ರೀ ವೀರಭದ್ರ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ಗುರುಮೂರ್ತಿರವರು ಯೋಗ ಶಿಕ್ಷಣ ಶಿಕ್ಷಕರಾಗಿದ್ದು ,ಯೋಗ ಶಿಕ್ಷಣದಲ್ಲಿ ಮಾಸ್ಟರ್ ಡಿಗ್ರಿ ಪದವಿಯನ್ನು ಪಡೆದಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ದೈಹಿಕ ಒತ್ತಡವನ್ನು ನಿಯಂತ್ರಿಸಲು ಧ್ಯಾನ ಮತ್ತು ಯೋಗ ಶಿಕ್ಷಣ ಕಾರ್ಯಕ್ರಮವನ್ನು ನಡೆಸಿ. ಅವರು ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ಯೋಗ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿಗಳಿಗೆ ಕುಳಿತು ಮಾಡುವ ಆಸನಗಳಾದ ಪದ್ಮಾಸನ, ವಜ್ರಾಸನ, ಮಾಲಾಸನ, ಕಕ್ಕುಟಾಸನ, ಮಾಲಾಸನ, ಮತ್ಸ್ಯಾಸನ, ವೀರಾಸನ, ನಿಂತು ಮಾಡುವ ಆಸನಗಳಾದ ನಮಸ್ಕಾರಾಸನ, ವೃಕ್ಷಾಸನ.ಪರ್ವತಾಸನ. ವೀರಭದ್ರಾಸನ, ಹಸ್ತಪಾದಾಸನ, ನಟರಾಜಾಸನ, ಚಕ್ರಾಸನ, ಸರ್ವಗಾಂಸನ ಇತ್ಯಾದಿ ಆಸನಗಳು ಜೊತೆಗೆ ಸೂರ್ಯ ನಮಸ್ಕಾರ, ಪ್ರಾಣಯಾಮ ಇವುಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಯೋಗ ಮತ್ತು ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳನ್ನು, ಮಹತ್ವಗಳನ್ನು ತಿಳಿಸಿದರು.
ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಯೋಗ ಶಿಕ್ಷಣದ ಶಿಬಿರದಲ್ಲಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ನಡೆಸಿದರು.

(Visited 7 times, 1 visits today)