ಕೊರಟಗೆರೆ


ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಶ್ರೀ ಭಕ್ತಕನಕದಾಸರ ಜಯಂತಿ,ವಾಲ್ಮೀಕಿಜಯಂತಿ, 67ನೇ ಕನ್ನಡ ರಾಜ್ಯೋತ್ಸವ, ಡಾ.ಪುನಿತ್ ರಾಜ್ ಕುಮಾರ್ ರವರ 1ನೇ ಪುಣ್ಯಸ್ಮರಣೆ ಹಾಗೂ ಕರಾಟೆ ಕಿಂಗ್ ದಿ!ಶಂಕರ್ ನಾಗ್ ರವರ ಜನ್ಮದಿನ ಕಾರ್ಯಕ್ರಮಗಳನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ(ರಿ)ದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮಾಜಿ ಸೈನಿಕರು, ಉಚ್ಛ ಮತ್ತು ಸರ್ವೊಚ್ಛ ನ್ಯಾಯಲಯದ ವಕೀಲರಾದ ಸಿಂಹ ಶಿವುಗೌಡ ಭಾರತೀಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ತುಮಕೂರು ಜಿಲ್ಲಾ ಅಧ್ಯಕ್ಷರನ್ನಾಗಿ ಕೊರಟಗೆರೆ ತಾಲೂಕಿನ ಯುವ ನಾಯಕ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹೋರಾಟಗಳಲ್ಲಿ ಸದಾ ಮುಂದಿರುವ ಹೋರಾಟಗಾರರಾದ ಶ್ರೀಯುತ ಪವನ್ ರಾಮಯ್ಯ ಅವರನ್ನು ಇದೇ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರು ಮಾತನಾಡುತ್ತಾ
ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಸಂಘಟನೆಯ ಗುರಿ-ಉದ್ದೇಶಗಳು ಸಂಘಟನೆ ನಡೆದು ಬಂದ ದಾರಿಯನ್ನು ತಿಳಿಸುತ್ತಾ ಸಂಘಟನೆ ವತಿಯಿಂದ ಇದೂವರೆಗೂ ಮಾಡಿರುವ ಅನೇಕ ಸಾಮಾಜಿಕ ಹೋರಾಟಗಳ ಬಗ್ಗೆ ಮಾತನಾಡಿ, ಸಮಸ್ಯೆ…ನಿಮ್ಮದು, ಪರಿಹಾರ… ನಮ್ಮದು ಎಂಬ ಧೈರ್ಯೊದ್ದೇಶದ ಘೋಷಣೆಯಾ ಮೂಲಕ ಸಂಘಟನೆಯ ಸೈನ್ಯವನ್ನು ಗ್ರಾಮ ಮಟ್ಟದಿಂದ್ದ ರಾಜ್ಯ ಮಟ್ಟದಲ್ಲಿ ಬೆಳಸುವ ಬಗ್ಗೆ ಹಾಗೂ ತುಮಕೂರು ಜಿಲ್ಲೆ ಸಂಘದ ವತಿಯಿಂದ ನಡೆಯಬೇಕಾದ ಹೊರಾಟದ ರೂಪು ರೇಷೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರ ಸಲಹಾ ಮಹಾ ಗುರುಗಳಾದ ಸನ್ಮಾನ್ಯ ಶ್ರೀ ಸಂಜೀವ್ ಕುಮಾರ್ ಶರ್ಮ ರವರು ಮಾತನಾಡಿ ನಮ್ಮ ಸಿಂಹ ಶಿವುಗೌಡ ಭಾರತೀಯ ರವರು, ನಮ್ಮ ಮಾರ್ಗದರ್ಶನ ಹಾಗೂ ಅವರ ವೈಯಕ್ತಿಕ ಸಾಮಾಥ್ರ್ಯ ದಿಂದ ಇಡೀ ಕರ್ನಾಟಕ ದಲ್ಲಿ ನಮ್ಮ ಸಂಘಟನೆಯ ರಾಜ್ಯದ್ಯಂತ ಸೈನ್ಯವನ್ನು ಕಟ್ಟಲು ಅಲೆಗ್ಸಾಂಡರ್ ರವರ ರೀತಿಯಲ್ಲಿ ಮುಂದಾಗಿದ್ದು ಅವರ ಜೊತೆಗೆ ನಾವು ಮತ್ತು ನೀವೆಲ್ಲರೂ ಕೈಜೊಡಿಸೋಣ ಸಂಘಟನೆಯನ್ನು ಭದ್ರ ಪಡಿಸೋಣ ಎಂದು ಸಭೆಯಲ್ಲಿ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲ್ಲೂಕಿನ ಮೂಲದ ಮಹಿಳಾ ವಕೀಲರು ಹಾಗೂ ಸಂಘಟನೆಯ ಉಡುಪಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶ್ರೀಮತಿ ರತ್ನ , ಕೊರಟಕೆರೆ ತಾಲೂಕಿನ ಸಂಗೊಳ್ಳಿ
ರಾಯಣ್ಣ ಯುವ ವೇದಿಕೆ ಅಧ್ಯಕ್ಷರಾದ ಲಕ್ಷ್ಮೀಪ್ರಸಾದ್ ಸಿ ಎನ್, ಜಿಲ್ಲಾ ಅಹಿಂದ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಂಜುಂಡಯ್ಯ, ಜಿಲ್ಲಾ ಪ್ರಗತಿಪರ ಹೋರಾಟಗಾರ ಸಂಘದ ಅಧ್ಯಕ್ಷರಾದ ನಟರಾಜ್ ಸಿ.ಎಸ್ . ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ನಾಯಕರುಗಳಾದ ಶ್ರೀ ಕೌಶಿಕ್, ಮನು, ಅಭಿಲಾಶ್ , ಸಂಘಟನೆಯ
ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

(Visited 4 times, 1 visits today)