ತುಮಕೂರು
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಪ್ಲೇಸ್‍ಮೆಂಟ್ ವಿಭಾಗದಿಂದ ಇತ್ತೀಚೆಗೆ ಎರಡು ದಿನಗಳ ಕಾಲ “ಎಕ್ಸ್‍ಪ್ಲಿಯೋ” ಕಂಪನಿಯಿಂದ ಪೂಲ್ ಕ್ಯಾಂಪಸ್ ಡ್ರೈವ್ ಅನ್ನು (ಕ್ಯಾಂಪಸ್ ನೇಮಕಾತಿ) ನಗರದ ಎಸ್‍ಎಸ್‍ಐಟಿ ಕ್ಯಾಂಪಸ್‍ನಲ್ಲಿ ಆಯೋಜಿಸಿತ್ತು.
ತುಮಕೂರು ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂಲ್ ಕ್ಯಾಂಪಸ್ ಡ್ರೈವ್‍ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ತಿಪಟೂರಿನ ಕಲ್ಪತರು, ಗುಬ್ಬಿಯ ಸಿಐಟಿ, ಅಕ್ಷಯ, ಎಚ್‍ಎಂಎಸ್, ಶ್ರೀದೇವಿ ಮತ್ತು ಎಸ್‍ಎಸ್‍ಐಟಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಒಟ್ಟು ಏಳು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಸುಮಾರು 254ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಎಕ್ಸ್‍ಪ್ಲಿಯೋ ಕಂಪನಿಯು ಭಾರತದಲ್ಲಿ ಬೆಂಗಳೂರು, ಪುಣೆ ಮತ್ತು ಚೆನ್ನೈ ಶಾಖೆಗಳು ಹೊಂದಿದ್ದು, ಬೆಂಗಳೂರಿನ ಶಾಖೆಗೆ ನೇಮಕಾತಿ ನಡೆದಿದೆ. ಎಕ್ಸ್‍ಪ್ಲಿಯೋ ಕಂಪನಿಯ ವ್ಯವಸ್ಥಪಕರಾದ ವೆಂಕಟೇಶ್ ಸಿ, ಕಾಂಚನ್ ಸೈನಿಕ್ ನೇತೃತ್ವದ 8 ಮಂದಿಯ ತಂಡ ಪೂಲ್ ಕ್ಯಾಂಪಸ್ ಡ್ರೈವ್ ನಡೆಸಿಕೊಟ್ಟರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್.ರವಿಪ್ರಕಾಶ, ಎಸ್‍ಎಸ್‍ಐಟಿಯ ಪ್ಲೇಸ್‍ಮೆಂಟ್ ಅಧಿಕಾರಿ ಮತ್ತು ಪ್ರಾಧ್ಯಾಪಕರಾದ ಡಾ.ಅಶೋಕ್ ಮೆಹ್ತಾ, ಸಹಾಯಕ ಪ್ಲೇಸ್‍ಮೆಂಟ್ ಅಧಿಕಾರಿ ಡಾ. ರೇಣುಕಾಲತಾ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಭಾವಹಿಸಿದ್ದರು.