ಕೊರಟಗೆರೆ
ನನ್ನ 35ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕಹಿ ಘಟನೆ ನಡೆದಿಲ್ಲ.. ರಾತ್ರೋರಾತ್ರಿ ಹಿರಿಯ ಅಧಿಕಾರಿಗಳಿಗೆ ಕಾಮಗಾರಿಯ ಶಂಕುಸ್ಥಾಪನೆಗೆ ಆದೇಶ ಮಾಡಿಸ್ತಾರೇ. ತುಮಕೂರು ಕೆಪಿಟಿಸಿಎಲ್ ಇಲಾಖೆ ಅಧಿಕಾರಿಗಳ ವೈಫಲ್ಯ ಮತ್ತು ಕೊರಟಗೆರೆ ಬಿಜೆಪಿ ರಾಜಕೀಯ ಕುತಂತ್ರದ ಬಗ್ಗೆ ರಾಜ್ಯ ಸರಕಾರ ಮತ್ತು ಇಂಧನ ಸಚಿವರ ಗಮನಕ್ಕೆ ತರುತ್ತೇನೆ ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ತಾಲೂಕಿನ ಐ.ಕೆ.ಕಾಲೋನಿ(ಸಂಕೇನಹಳ್ಳಿ)ಯಲ್ಲಿ 11ಕೋಟಿ 68ಲಕ್ಷ ಮತ್ತು ತುಂಬಾಡಿ ಗ್ರಾಮದಲ್ಲಿ 10ಕೋಟಿ 19ಲಕ್ಷ ಸೇರಿ ಒಟ್ಟು 21ಕೋಟಿ 85ಲಕ್ಷ ವೆಚ್ಚದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಎರಡು ಕಡೆಯಲ್ಲಿ ವಿದ್ಯುತ್ ಉಪ ಸ್ಥಾವರ ಘಟಕಗಳ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೇರವೆರಿಸಿದ ವೇಳೆ ಮಾತನಾಡಿದರು.
21ಕೋಟಿ ವೆಚ್ಚದ ಕಾಮಗಾರಿಯ ಶಂಕುಸ್ಥಾಪನೆ ಆಯೋಜನೆಗೆ ಕಾರಣ ತುಮಕೂರು ಕೆಪಿಟಿಸಿಎಲ್ ಇಲಾಖೆ. ರಾತ್ರೋರಾತ್ರಿ ಶಂಕುಸ್ಥಾಪನೆ ಕಾಮಗಾರಿಯನ್ನು ಮುಂದೂಡಲು ಕಾರಣವೇನು. ಕೆಪಿಟಿಸಿಎಲ್ ಇಇ ಕಾರ್ಯಕ್ರಮಕ್ಕೆ ಗೈರಾಗಿ ಮೊಬೈಲ್ ಸ್ವೀಚ್ ಆಫ್ ಮಾಡಿದ್ದಾರೆ. ಶಂಕುಸ್ಥಾಪನೆಯ ನಾಮಫಲಕವೇ ಇಲ್ಲದೇ ಗುದ್ದಲಿಪೂಜೆ ಮಾಡಲಾಗಿದೆ. ಸ್ಥಳೀಯ ಗ್ರಾಪಂಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಕಾರ್ಯಕ್ರಮದ ಮಾಹಿತಿಯನ್ನೇ ನೀಡಿಲ್ಲ ಎಂದು ಆರೋಪ ಮಾಡಿದರು.
ಕೊರಟಗೆರೆ ಬ್ಲಾಕ್ ಕಾಂಗ್ರೇಸ್ ಯುವ ಅಧ್ಯಕ್ಷ ವಿನಯ್‍ಕುಮಾರ್ ಮಾತನಾಡಿ ಕೊರಟಗೆರೆ ಕ್ಷೇತ್ರಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಅನಿಲ್‍ಕುಮಾರ್ ಕೊಡುಗೆ ಶೂನ್ಯ. ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಕಾಮಗಾರಿ ನಿಲ್ಲಿಸುವಂತೆ ರಾತ್ರೋರಾತ್ರಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುವುದು ತಪ್ಪು. ನಿವೃತ್ತ ಐಎಎಸ್ ಅಧಿಕಾರಿಯ ವಿರುದ್ದ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.
ನಾಮಫಲಕ ಇಲ್ಲದೇ ಗುದ್ದಲಿಪೂಜೆ..
21ಕೋಟಿ ವೆಚ್ಚದ ಎರಡು ವಿದ್ಯುತ್ ಉಪಸ್ಥಾಪರದ ಗುದ್ದಲಿಪೂಜೆ ವೇಳೆ ನಾಮಫಲಕವೇ ಅಳವಡಿಸಿಲ್ಲ. ಗುದ್ದಲಿಪೂಜೆಗೆ ತುಮಕೂರು ಕೆಪಿಟಿಸಿಎಲ್(ಬೃಹತ್ ಕಾಮಗಾರಿ)ಇಇ ಸೈಯದ್ ನೇಹಬೂಬ್ ಗೈರು ಆಗಿದ್ದಾರೆ. ಕೊರಟಗೆರೆಯ ಅಭಿವೃದ್ದಿಯ ವಿಚಾರದಲ್ಲಿ ಅಧಿಕಾರಿವರ್ಗ ರಾಜಕೀಯ ಮಾಡುವುದು ತಪ್ಪು ಎಂದು ಕೆಪಿಟಿಸಿಎಲ್ ಇಇ ವಿರುದ್ದ ಶಾಸಕ ಡಾ.ಜಿ.ಪರಮೇಶ್ವರ್ ಮತ್ತು ಕಾಂಗ್ರೇಸ್ ಮುಖಂಡರು ಆರೋಪ ಮಾಡಿದ್ದಾರೆ.
ಕೆಪಿಟಿಸಿಎಲ್ ಎಇಇ ರವಿಗೆ ಎಚ್ಚರಿಕೆ..
ಕೊರಟಗೆರೆ ಶಾಸಕರ ಅನುಮತಿ ಇಲ್ಲದೇ ಯಾವ ಕೆಲಸ ಮಾಡ್ತೀರಾ ನಾವು ನೋಡ್ತೀವಿ. ನೀವು ನಿಗಧಿ ಪಡಿಸಿದ ದಿನಾಂಕವೇ ಕಾರ್ಯಕ್ರಮ ಆಯೋಜನೆ ಆಗಿದೆ. ರಾಜಕೀಯ ಉದ್ದೇಶದಿಂದ ಶಂಕುಸ್ಥಾಪನೆ ನಿಲ್ಲಿಸ್ತೀರಾ ಎಂದು ಕಾಂಗ್ರೇಸ್ ಮುಖಂಡರು ಎಇಇ ವಿರುದ್ದ ಮುಗಿಬಿದ್ದರೇ ಮುಂದಿನ ವಾರ ನಾನೇ ಖುದ್ದಾಗಿ ದಿನಾಂಕ ಕೋಡ್ತಿನಿ ನೀವು ಆಯೋಜನೆ ಮಾಡಿಕೊಳ್ಳಿ ಎಂದು ಕೆಪಿಟಿಸಿಎಲ್ ಎಇಇ ರವಿಗೆ ಶಾಸಕ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಮಾಜಿ ತಾಪಂ ಅಧ್ಯಕ್ಷ ಕೆಂಪಣ್ಣ, ತುಂಬಾಡಿ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ತಹಶೀಲ್ದಾರ್ ನಾಹೀದಾ, ಬೆಸ್ಕಾಂ ಎಇಇ ನರಸರಾಜು, ಪ್ರಸನ್ನಕುಮಾರ್, ಮುಖಂಡರಾದ ರಾಮಚಂದ್ರಯ್ಯ, ಕಾರುಮಹೇಶ್, ನಾಗಭೂಷನ್, ಬಲರಾಮಯ್ಯ, ಚಂದ್ರಶೇಖರಗೌಡ ಸೇರಿದಂತೆ ಇತರರು ಇದ್ದರು.