ಗುಬ್ಬಿ


ಗುಬ್ಬಿಯಲ್ಲಿ ರಾಜಯಕೀಯ ಬೆಳವಣಿಗೆ ದಿನ ಕೊಂದು ತಿರುವು ಪಡೆಯುತ್ತಿದೆ. ಜೆ ಡಿ ಎಸ್ ಉಚ್ಚಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ಜೆಡಿಎಸ್ ನಾಯಕ ಕುಮಾರಸ್ವಾಮಿಯೊಂದಿಗೆ ಮುನಿಸಿ ಕೊಂಡು ಕಾಂಗ್ರೆಸ್ ಸೇರಲು ಕ್ಷಣಗಣನೆ ಸಮೀಪಿಸುತ್ತಿರುವ ಸಮಯದಲ್ಲಿ ಅವರ ಆಗಮನ ಸಹಿಸಲು ಮೂಲ ಕಾಂಗ್ರೇಸಿಗರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಬಹುದು ಎನ್ನುವ ಭಯದಲ್ಲಿ ಅಕಾಂಕ್ಷಿಗಳಿದ್ದಾರೆ.
ಎಸ್ ಆರ್ ಶ್ರೀನಿವಾಸ್ ಪಕ್ಷಕ್ಕೆ ಬಂದರೆ ಹಾಲಿ ಇರುವ ನಾಯಕರಿಗೆ ಉಳಿಗಾಲವಿಲ್ಲ ಎಂಬ ಭಯದ ವಾತಾವರಣ ಗುಬ್ಬಿ ಕಾಂಗ್ರೆಸ್‍ನಲ್ಲಿ ಸೃಷ್ಟಿಯಾಗಿದೆ. ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಲು ಹರಸಾಹಸ ಪಡುತ್ತಿರುವ ಹೊನ್ನಗಿರಿಗೌಡ , ಜಿಎಸ್ ಪ್ರಸನ್ನಕುಮಾರ್ ಇತರರಿಗೆ ವಾಸು ತನ್ನ ಪಕ್ಷದ ಅಭ್ಯರ್ಥಿ ಆಗುವುದು ಇಷ್ಟವಿಲ್ಲ ಕಾರಣ ತಮಗೆ ಕವಡೆಕಾಸಿನ ಕಿಮ್ಮತ್ತು ಇರುವುದಿಲ್ಲ ಎನ್ನವಚಿಂತೆ ಕಾಡುತ್ತಿದೆ.
ಗುಬ್ಬಿ ಕ್ಷೇತ್ರ ಹಾಲಿ ಶಾಸಕ ಶ್ರೀನಿವಾಸ್ ಅವಧಿಯಲ್ಲಿ ಅಭಿವೃದ್ಧಿ ವಂಚಿತವಾಗಿದೆ ಎನ್ನುವುದು ಮತ್ತೋರ್ವ ಆಕಾಂಕ್ಷಿ ಜಿ ,ಎಸ್, ಪ್ರಸನ್ನಕುಮಾರ್ ಮಾತು, ಕೋಟಿಗಟ್ಟಲೆ ಖರ್ಚು ಮಾಡಿರುವ ನಾಯಕರುಗಳಿಗೆ ಅಭ್ಯರ್ಥಿಯ ಪಟ್ಟವಿಲ್ಲ ತಮ್ಮ ಹಣವೂ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇದ್ದಾರೆ.
ಒಟ್ಟರೆ ಕೆಲವರ ಪಾಲಿನ ವಾಸಣ್ಣ ಇನ್ನು ಕೆಲವರ ಪಾಲಿಗೆ ಶಾಸಕರಾಗಿರುವ ಎಸ್ ಆರ್ ಶ್ರೀನಿವಾಸ್ ರವರಿಗೆ ಹೈಕಮಾಂಡ್ ಟಿಕೇಟ್ ನೀಡುವ ಭರವಸೆ ನೀಡಿರುವುದು ಸತ್ಯ. ಕಾಂಗ್ರೆಸ್ ಹೈ ಕಮಾಂಡ್ ರಾಜ್ಯದ ಎಲ್ಲಾ ಆಕಾಂಕ್ಷಿ ಗಳಿಂದ ಅರ್ಜಿ ಆಹ್ವಾನಿಸಿದೆ. ಗುಬ್ಬಿ ಕ್ಷೇತ್ರದಿಂದ ಜಿ ಎಸ್ ಪ್ರಸನ್ನಕುಮಾರ್ ಮತ್ತು ಹೊನ್ನಗಿರಿ ಗೌಡರು ಅರ್ಜಿ ಹಾಕಿದ್ದಾರೆ.
ಹೊನ್ನಗಿರಿಗೌಡರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಕೃಪಾಶಿರ್ವಾದ ಇದೆ ಎನ್ನುವ ಭರವಸೆಯಲ್ಲಿ ಅವರ ಹಿಂಬಾಲಕರಿದ್ದಾರೆ. ಅವರನ್ನ ಭಗವಂತ ಕಾಪಾಡಬೇಕು. ಸತತ ನಾಲ್ಕು ಭಾರಿ ಶಾಸಕರಾಗಿ ಆಯ್ಕೆಯಾದ ಶ್ರೀನಿವಾಸ್ ಒಮ್ಮೆ ಸ್ವತಂತ್ರ ವಾಗಿ ಕಣಕ್ಕಿಳಿದಿದ್ದರು. ಮೂರು ಭಾರಿ ಜೆಡಿ ಎಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಈಭಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಪ್ರತೀ ಭಾರಿಯ ರೀತಿಯಲ್ಲಿ ಈ ಕ್ಷೇತ್ರ ಇಲ್ಲ ಬಹಳಷ್ಟು ಬದಲಾವಣೆಯಲ್ಲಿ ಮತದಾರರಿದ್ದಾರೆ, ಶಾಸಕರ ವಿರೋಧಿ ಅಲೆಯಿದೆ ಎಂದು ವಾಸು ವಿರುದ್ದ ಮಾತನಾಡದ ಮುಖಂಡರು ಮತ್ತು
ಜನತೆ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಸುಳ್ಳಲ್ಲ. ಎಸ್ ಆರ್ ಶ್ರೀನಿವಾಸ್ ಯಾವುದೇ ಪಕ್ಷದಲ್ಲಿದ್ದರೂ ಐವತ್ತು ಸಾವಿರ ಮತಗಳು ಅವರ ಜೊತೆಗಿವೆ ರಾಜಕಾರಣದ ಚಾಣಾಕ್ಷತನ, ಮತದಾರರ ಓಲೈಕೆ ಎಲ್ಲವೂ ಕರಗತವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜೆಡಿಎಸ್ ವರಿಷ್ಠ ಕೆಂಗಣ್ಣು ದೊಡ್ಡಗೌಡರ ಕುಟುಂಬದ ಹಗೆತನ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರೋಧ ಎಲ್ಲವನ್ನೂ ಗಮನಿಸಿದರೆ ಎಸ್ ಆರ್ ಶ್ರೀನಿವಾಸ್ ರವರ ಮುಂದಿನ ಹಾದಿ ಅಷ್ಟು ಸುಲಭವಲ್ಲ ಎನ್ನುವುದು ಗುಬ್ಬಿ ಜನರು ಅಭಿಪ್ರಾಯಪಟ್ಟಿದ್ದಾರೆ.

(Visited 1 times, 1 visits today)