ತುಮಕೂರು


ಪ್ರಾಣಾಪಾಯದಲ್ಲಿ ಇರುವ ಯಾವುದೇ ವ್ಯಕ್ತಿಗೆ ಸನಿಹದಲ್ಲಿ ಇರುವ ಇತರೆ ವ್ಯಕ್ತಿಯು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಲು ಸಹಕಾರಿ ಆಗುವುದು ಅತ್ಯಾವಶ್ಯಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಡಿ.ಎನ್. ಅವರು ತಿಳಿಸಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಮಾಗಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ತುಮಕೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಶಿಕ್ಷಣದಲ್ಲೇ ಒಂದು ಭಾಗವಾಗಿ ಪ್ರಥಮ ಚಿಕಿತ್ಸೆ ಬಗ್ಗೆ ತಿಳುವಳಿಕೆ ನೀಡುವುದು ಅನೇಕ ದೇಶಗಳಲ್ಲಿದೆ. ಈ ರೀತಿಯ ತರಬೇತಿಯಿಂದ ಜೀವ ಹಾನಿ ಆಗುವ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗುವುದರ ಹೊರತು ಅPಖ (ಅಚಿಡಿಜioಠಿuಟmoಟಿಚಿಡಿಥಿ ಡಿesusಛಿiಣಚಿಣioಟಿ) ಗೊತ್ತಿದ್ದರೆ ಜೀವ ಉಳಿಸಬಹುದೆಂದು ತಿಳಿಸಿದರು.
ಡಾ.ಚಂದ್ರಶೇಖರ್ ಅವರು ಮಾತನಾಡುತ್ತಾ, ಒಬ್ಬ ವೈದ್ಯರಿಗೆ ಇಂತಹ ಸಂದರ್ಭದಲ್ಲಿ ಕೇವಲ 03 ನಿಮಿಷ ಇರುತ್ತದೆ. ಈ 03 ನಿಮಿಷದಲ್ಲಿ ಸಿ.ಪಿ.ಆರ್ ಮಾಡಿ ಮೆದುಳಿಗೆ ಆಮ್ಲಜನಕ ಸಿಗುವ ಹಾಗೆ ಮಾಡದೆ ಇದ್ದರೆ ರೋಗಿಯ ಮೆದುಳಿಗೆ ಹಾನಿ ಆಗುತ್ತದೆ. ಅತ್ಯಂತ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ ಅPಖ (ಅಚಿಡಿಜioಠಿuಟmoಟಿಚಿಡಿಥಿ ಡಿesusಛಿiಣಚಿಣioಟಿ) ಮಾಡಿದಾಗ ಮಾತ್ರ ಹೃದಯ ಮತ್ತೊಮ್ಮೆ ಬಡಿದುಕೊಂಡು ಮೆದುಳಿಗೆ ಆಮ್ಲಜನಕ ದೊರಕುವಂತೆ ಮಾಡಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ||ರಜನಿ.ಎಂ. ಅವರು ಮಾತನಾಡುತ್ತಾ, ಈ ತರಬೇತಿಗೆ ಆರಕ್ಷಕ, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮತ್ತು ಶಾಲೆಗಳಲ್ಲಿನ ದೈಹಿಕ ಶಿಕ್ಷಕರು, ವಿದ್ಯೋದಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದ ಸಿಬ್ಬಂದಿ ಈ ರೀತಿ ವಿವಿಧ ಇಲಾಖೆಗಳಿಂದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಸ್ವಯಂ ಪ್ರೇರಿತರಾದ ನಾಗರೀಕರೂ ಕೂಡ ಶಿಬಿರಾರ್ಥಿಗಳಾಗಿದ್ದರು ಎಂದು ತಿಳಿಸಿದರು.
ತರಬೇತಿಯಲ್ಲಿ ರಸ್ತೆ ಅಪಘಾತ, ಬೆಂಕಿ ಅನಾಹುತ, ವಿದ್ಯುತ್ ಆಘಾತ, ಹಾವು ಕಡಿದವರು, ನೀರಿನಲ್ಲಿ ಮುಳುಗಿದವರು, ತಲೆಗೆ ಏಟು ಬಿದ್ದವರು, ಮೂಳೆ ಮುರಿತಗಳು ಈ ಸಂದರ್ಭದಲ್ಲಿ ಆಸ್ಪತ್ರೆ ತಲುಪುವ ತನಕ ಹಾನಿಗೊಳಗಾದ ವ್ಯಕ್ತಿಗೆ ನೀಡುವ ಪ್ರಥಮ ಚಿಕಿತ್ಸೆ ಬಗ್ಗೆ ತಿಳಿಸಿಕೊಡಲಾಯಿತು. ಪ್ರಾಣಾಪಾಯ ಉಂಟಾದಾಗ ಸಂದರ್ಭಕ್ಕೆ ತಕ್ಕಂತೆ ಹತ್ತಿರದಲ್ಲಿ ಇರುವವರು ಯಾರೇ ಆದರೂ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದಲ್ಲಿ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದಿಲ್ಲ ಎಂದು ಡಾ: ರಜನಿ ತಿಳಿಸಿದರು.
ಪ್ರಜ್ಞೆ ಇಲ್ಲದವರಿಗೆ ನೀರು ಕುಡಿಸಲು ಪ್ರಯತ್ನಿಸುವುದು ಜೀವಕ್ಕೆ ಅಪಾಯ ತಂದೊಡ್ಡಬಹುದು. ಫಿಟ್ಸ್ ಬರುತ್ತಿರುವವರಿಗೆ ನೀರು ಕುಡಿಸುವುದು, ಕಬ್ಬಿಣದ ಕೀಗಾಗಿ ಹುಡುಕುವುದು ಕೂಡ ತಪ್ಪು ಕಲ್ಪನೆ ಆಗಿದೆ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗುವವರೆಗೂ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕೆಂಬ ಮಾಹಿತಿ ಇದ್ದಲ್ಲಿ ಅನೇಕ ಜೀವಗಳನ್ನು ಉಳಿಸಬಹುದು. ಮನುಷ್ಯಾಕೃತಿ ಗೊಂಬೆ ಆಧಾರಿತವಾಗಿ ಕೌಶಲ್ಯಾಧಾರಿತ ತರಬೇತಿ ನೀಡಲಾಯಿತು ಎಂದು ಅವರು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ತುಮಕೂರು ಮತ್ತು ನಿಪುಣ ಸ್ಕಿಲ್ ಲ್ಯಾಬ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಗೌರಿಬಿದನೂರು ಇಲ್ಲಿನ ನುರಿತ ತರಬೇತುದಾರರು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ತರಬೇತಿ ಪಡೆದವರಿಗೆ “ಪ್ರಥಮ ಪ್ರತಿಕ್ರಿಯರು”(ಈiಡಿsಣ ಖesಠಿoಟಿಜeಡಿ) ಎಂಬ ಗುರುತಿನ ಚೀಟಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ|| ರಘುನಂದನ್, ಬಿ.ಎಲ್.ಎಸ್ ಮತ್ತು ಎ.ಸಿ.ಎಲ್.ಎಸ್, ತರಬೇತುದಾರರು, ಅಮೇರಿಕ ಹಾರ್ಟ್ ಅಸೋಸಿಯೇಷನ್, ಡಾ|| ಚಂದ್ರಶೇಖರ್ ಸಿ.ಎಸ್, ಡಾ|| ಶಿವಲಿಂಗಪ್ಪ.ಎಂ.ಪಿ., ಅರವಳಿಕೆ ತಜ್ಞರು, ಜಿಲ್ಲಾ ಆಸ್ಪತ್ರೆ, ತುಮಕೂರು ಇವರು ಹಾಜರಿದ್ದರು.

(Visited 6 times, 1 visits today)
FacebookTwitterInstagramFacebook MessengerEmailSMSTelegramWhatsapp