ತುಮಕೂರು


ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತುಮಕೂರು, ವಿಶ್ವವಿದ್ಯಾನಿಲಯ, ತುಮಕೂರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಂಕಲ್ಪ ಭವನದಲ್ಲಿ “ಭಾರತ ರತ್ನ ಡಾ: ಬಿ.ಆರ್.ಅಂಬೇಡ್ಕರ್ ಓದು” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದ ನಿರ್ದೇಶಕರಾದ ಪ್ರೊ.ಬಸವರಾಜು ನೆರವೇರಿಸಿದರು. ನಂತರ ಮಾತನಾಡಿದ ಅವರು, ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವವನ್ನು ಜಾತಿಯ ಕಾರಣಕ್ಕೆ ಸಂಕುಚಿತಗೊಳಿಸಲಾಗಿದೆ. ಚಿಂತಕರು ಮಾನವ ಹೊಸ ಚಿಂತನೆಗಳಲ್ಲಿ ಭೌದ್ಧಿಕ ವಿಕಸಗೊಳ್ಳಲು ಹೊಸ ಮಾದರಿಯನ್ನು ನೀಡಿದರೆ ಸರ್ವಶ್ರೇಷ್ಠ ರೀತಿಯಲ್ಲಿ ಜಗತ್ತೇ ಒಪ್ಪುವಂತ ಅನೇಕ ಉದಾತ್ತ ಚಿಂತನೆಗಳನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿ ದೇಶದ ಕೀರ್ತಿಯನ್ನು ಭೂತ, ಭವಿಷ್ಯ, ವರ್ತಮಾನಕ್ಕೆ ಒಗ್ಗುವ ರೀತಿಯಲ್ಲಿ ವಿಸ್ತರಿಸಿದ್ದಾರೆ. ಇವರ ಎಲ್ಲಾ ಸಾಧನೆಗಳು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೇಲ್ವಿಚಾರಕರಾದ ಡಿ.ವಿ. ಸುರೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ರಾಜ್ಯ ಸರ್ಕಾರ ನಿರ್ದೇಶನದ ಮೇರೆಗೆ ವಿಶೇಷ ಘಟಕ ಯೋಜನೆಯಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ವಿದ್ಯಾರ್ಥಿಗಳ ಜ್ಞಾನ ವಿಸ್ತಾರಗೊಳ್ಳಲು ಅಂಬೇಡ್ಕರ್ ಓದು ಕಾರ್ಯಕ್ರಮ ಅನುμÁ್ಠನ ಮಾಡಿದ್ದು, ಇದರ ಮೂಲಕ ಸಮ ಸಮಾಜ, ಸಾಮಾಜಿಕ ನ್ಯಾಯ, ಬ್ರಾತೃತ್ವ ಮುಂತಾದ ಪ್ರಜಾಸತ್ತಾತ್ಮಕ, ಜಾತ್ಯಾತೀತ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಿದೆ. ಮಹಾನ್ ಚೇತನ ಡಾ: ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಬೃಹತ್ ಮತ್ತು ಲಿಖಿತ ಸಂವಿಧಾನವಾಗಿದ್ದು, ಜಗತ್ತಿಗೆ ಆದರ್ಶವಾಗಿದೆ. ಈ ಸಂವಿಧಾನದ ರಚನೆಯ ಜವಾಬ್ದಾರಿ ಹೊತ್ತ ಅಂಬೇಡ್ಕರ್ ಅವರ ನೈಜ ಜೀವನ ಚರಿತ್ರೆ ಸಾಮಾಜಿಕ ಸನ್ನಿವೇಶಗಳು ಮತ್ತು ಶಿಕ್ಷಣ ಎಲ್ಲವೂ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾಗಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ಶ್ರೀ
ಸಿದ್ದಾರ್ಥ ಬಿ.ಎಡ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪ್ರೊ: ಎಸ್. ಶಶಿಕುಮಾರ್ ಅವರು ಮಾತನಾಡುತ್ತಾ, ಶೈಕ್ಷಣಿಕ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಯುವತಿಯರ ಸಾಧನೆ ಗಣನೀಯವಾಗಿದೆ. ಆದರೆ, ಔದ್ಯೋಗಿಕ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿರುವುದು ಈ ದೇಶ ಹಿಂದುಳಿಯಲೂ ಸಹ ಕಾರಣವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ರವರು ಮಹಿಳೆಯರ ಸ್ವಾತಂತ್ರ್ಯ, ಸಮಾನತೆ ಮತ್ತು ಹಕ್ಕುಗಳಿಗಾಗಿ ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಿದವರು. ಅಂಬೇಡ್ಕರ್ ರವರದು ತಾಯಿ ಹೃದಯವಾಗಿದ್ದು, ಕರುಣೆ, ಮಮತೆ, ವಾತ್ಸಲ್ಯ ಇಂತಹ ಮಾನವೀಯ ಮೌಲ್ಯಗಳು ಉತ್ಕೃಷ್ಟವಾಗಿ ಇದ್ದ ಕಾರಣ ಈ ದೇಶದ ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವಂತಹ ಜಗತ್ತಿಗೆ ಆದರ್ಶವಾಗುವಂತಹ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಇಂದಿನ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಈಗ ಇರುವ ವಿಫುಲ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಇದರಿಂದ ಆರ್ಥಿಕ ಜೀವನ ಸಬಲೀಕರಣ ಆಗುವಂತೆ, ಇನ್ನೊಬ್ಬರ ಮೇಲೆ ಅವಲಂಬಿತರಾಗದೇ ಸ್ವಾಭಿಮಾನದ ಜೀವನ ನಡೆಸಬೇಕು ಆಗ ಅಂಬೇಡ್ಕರ್ ರವರ ಚಿಂತನೆಗಳಿಗೆ ಬೆಲೆ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇರುದ್ರಪ್ಪ ಅವರು ಮಾತನಾಡುತ್ತಾ, ಅಂಬೇಡ್ಕರ್ ಅವರು ಜ್ಞಾನದ ವಿಷಯದಲ್ಲಿ ಜಗತ್ತಿನ ಗಮನ ಸೆಳೆದಿದ್ದಾರೆ. ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ, ಸಮಾಜ ವಿಜ್ಞಾನಿಯಾಗಿ, ಹೋರಾಟಗಾರರಾಗಿ ಹಲವು ಆಯಾಮಗಳಲ್ಲಿ ಈ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ಜೀವನ ಸಾಧನೆ ಎಲ್ಲರಿಗೂ ಆದರ್ಶವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ರಿಜಿಸ್ಟಾರ್ ಆದ ಡಿ ವೀಣಾ, ಉಪನ್ಯಾಸಕರಾದ ಲತಾ, ಕ್ರೀಡಾ ಕಾರ್ಯದರ್ಶಿಯಾದ ಟಿ.ಎನ್.ಕವಿತಾ, ಎನ್.ಸಿ.ಸಿ. ಅಧಿಕಾರಿಗಳಾದ ಬಿ. ಎಸ್. ಕವಿತಾ ಹಾಗೂ ಹರಿಣಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಜಗದೀಶ್ ನಡೆಸಿಕೊಟ್ಟರು.
ಈ ಸಂದರ್ಭ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕು: ಹಂಸ (ಪ್ರಥಮ ಬಹುಮಾನ), ಕು: ಸ್ಮಿತಾ (ದ್ವಿತೀಯ ಬಹುಮಾನ) ಮತ್ತು ಕು: ಸ್ಪೂರ್ತಿ (ತೃತೀಯ ಬಹುಮಾನ) ಅವರಿಗೆ ಪುಸ್ತಕ ರೂಪದಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

(Visited 5 times, 1 visits today)