ತುಮಕೂರು


ನಾಗರೀಕತೆ ಮತ್ತು ಜ್ಞಾನದ ಬೆಳವಣಿಗೆಯಲ್ಲಿ ಹಾಗೂ ಜನ ಸಾಮಾನ್ಯರ ಮತ್ತು ವಿಧ್ಯಾರ್ಥೀಗಳ ಜ್ಞಾನ ಹೆಚ್ಚಿಸಲು ಸಾರ್ವಜನಿಕ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಇಂದು ತಿಪಟೂರು ನಗರದ ಕಲ್ಪತರು ಕಾಲೇಜು ಕಾಲೇಜು ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತು ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಜ್ಞಾನದ ಮೂಲನೆಲೆಯಾಗಿದ್ದು, ಅಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕರು ಮತ್ತು ಮಕ್ಕಳಲ್ಲಿ ಓದುವಂತಹ ಅಭ್ಯಾಸವನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತಿದೆ, ರಾಜ್ಯದಲ್ಲಿ ಪ್ರಸ್ತುತ 6890 ಕ್ಕೂ ಹೆಚ್ಚು ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದೆ. 1968 ರಿಂದ ಗ್ರಂಥಾಲಯ ಸಪ್ತಾಹ ಪ್ರಪ್ರಥಮವಾಗಿ ಆಚರಣೆಗೆ ಬಂದಿತು. ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ತುಮಕೂರಿನಲ್ಲಿ 19 ಶಾಖಾ ಗ್ರಂಥಾಲಯ, 01 ನಗರ ಕೇಂದ್ರ ಗ್ರಂಥಾಲಯ, 330 ಗ್ರಾಮ ಪಂಚಾಯತಿ ಗ್ರಂಥಾಲಯ, 04, ವಾಚನಾಲಯಗಳು, 04 ಸೇವಾ ಕೇಂದ್ರ ಗ್ರಂಥಾಲಯಗಳು, 01 ಸಂಚಾರಿ ಗ್ರಂಥಾಲಯ, 01 ಸಮುದಾಯ ಮಕ್ಕಳ ಗ್ರಂಥಾಲಯ, ಅಲೆಮಾರಿ 01 ಮತ್ತು ಕೊಳಚೆ ಪ್ರದೇಶದ 03 ಗ್ರಂಥಾಲಯಗಳೊಂದಿಗೆ ಒಟ್ಟು 365 ವಿವಿಧ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದರೂ.29.94ಕೋಟಿ ವೆಚ್ಚದಲ್ಲಿ ಬೃಹತ್ತಾದ ಮತ್ತು ಆಧುನಿಕ ಸ್ಮಾರ್ಟ್ ಸಿಟಿ ಡಿಜಿಟಲ್ ಲೈಬ್ರರಿಗಳ ಕಟ್ಟಡ ನಿರ್ಮಾಣದ ಹಂತದಲ್ಲಿದೆ. ಹಾಗೂ ತಿಪಟೂರಿನಲ್ಲಿ ಆತ್ಯಾಧುನಿಕ ಸೌಲಭ್ಯಗಳುಳ್ಳ ಗ್ರಂಥಾಲಯ ಕಟ್ಟಡವನ್ನು ರೂ.85.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಗುತ್ತಿದ್ದು, ಆರ್.ಆರ್.ಆರ್.ಎಲ್.ಎಫ್ ಅನುದಾನದಿಂದರೂ.45.00 ಲಕ್ಷಗಳನ್ನು ಬಿಡುಗಡೆ ಮಾಡಿದ್ದು, ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ಕರ್ನಾಟಕ ಡಿಜಿಟಲ್ ಗ್ರಂಥಾಲಯ ಯೋಜನೆ ಅಡಿಯಲ್ಲಿ ಪ್ರಥಮ ಹಂತದಲ್ಲಿ, 26 ನಗರಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾಕೇಂದ್ರ ಗ್ರಂಥಾಲಯಗಳು ಮತ್ತು 216 ತಾಲ್ಲೂಕ್ ಗ್ರಂಥಾಲಯಗಳು ಸೇರಿ ಒಟ್ಟು 272 ಗ್ರಂಥಾಲಯಗಳಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ. ಎರಡನೇ ಹಂತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 100 ಶಾಖಾ ಗ್ರಂಥಾಲಯಗಳು ಸೇರಿ ಒಟ್ಟು 372 ಗ್ರಂಥಾಲಯಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ.
1.73 ಕೋಟಿ ಇ-ಪುಸ್ತಕಗಳು ವಿಡಿಯೋ ಮತ್ತು ಆಡಿಯೋಗಳ ಮೂಲಕ ಸೇವೆ ನೀಡಲಾಗುತ್ತಿದೆ. ಇಲ್ಲಿಯವರೆಗೂ 2,92,22,084 ಸದಸ್ಯರು ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿಯಾಗಿದ್ದು, 22,52,679 ಇ-ಕಂಟೆಂಟ್ ಗಳನ್ನು ಸಾರ್ವಜನಿಕರು ಉಪಯೋಗಿಸಿರುವುದು ರಾಜ್ಯದ ಹೆಮ್ಮೆಯ ವಿಷಯವಾಗಿದೆ ಎಂದರು.
ಡಿಜಿಟಲ್ ಗ್ರಂಥಾಲಯದಲ್ಲಿ ಎಲ್ಲ ಪುಸ್ತಕಗಳು ಲಭ್ಯವಿದ್ದು, ಓದುಗರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು
‘ಹಿರಿಯ ಸಾಹಿತಿ ಮತ್ತು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರಾದ ಡಾ. ದೊಡ್ಡರಂಗೇಗೌಡ ಪುಸ್ತಕ ಸಂಸ್ಕøತಿ ಕುರಿತು ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಹಿರಿಯ ಸಾರ್ವಜನಿಕ
ಗ್ರಂಥಾಲಯ ಅಧಿಕಾರಿ ಪರಮೇಶ್ವರ ಎಸ್.ಎಂ ಸೇರಿದಂತೆ ಜಿಲ್ಲಾ ಮಟ್ಟದ
ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಪದಾಧಿಕಾರಿಗಳು ಕಲಾವಿಧರು, ಅಭಿಮಾನಿಗಳು, ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.

(Visited 3 times, 1 visits today)