ತುಮಕೂರು
ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಕಾಂಗ್ರೆಸ್ ಪ್ರಬಲ ಅಕಾಂಕ್ಷಿ ಸಾಸಲು ಸತೀಶ್ ಗೆ ಈ ಭಾರಿ ಟಿಕೇಟ್ ಸಿಗುವುದು ಸಾಧ್ಯವಿಲ್ಲ ಎಂಬುದು ನಿಶ್ಚಿತವಾಗಿದೆ.
ಹಳೆಯ ಹುಲಿ ಮಾಜಿ ಸಚಿವ ಟಿಬಿ ಜಯಚಂದ್ರ ರವರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಶಿರಾ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ.ಈಗಾಗಲೇ ಹೈಕಮಾಂಡ್ ಅಸ್ತು ಎಂದು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಮಾಡಲು ಆದೇಶಿಸಿರುವ ಬಗ್ಗೆ ಮಾಹಿತಿ ಹೊರಬಂದಿದೆ.
ಪಕ್ಷದ ಆಂತರಿಕ ಸಭೆಯಲ್ಲಿ ಬಹಿರಂಗವಾಗಿಯೇ ಜಯಚಂದ್ರ ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗಿದೆಯಂತೆ. ಹಾಗೇಯೇ ಸತೀಶ್ ಗೆ ಪಕ್ಷದ ನಾಯಕರು ಎಚ್ಚರಿಕೆ ನೀಡಿದ್ದರೆನ್ನಲಾಗುತ್ತಿದೆ ಆ ಕ್ಷೇತ್ರದಲ್ಲಿ ಗೊಂದಲಕ್ಕೆ ನೀನು ಕಾರಣವಾಗಬಾರದು ಎನ್ನುವ ಮಾತು ಸಭೆಯಲ್ಲಿ ಹೊರಬಿದ್ದಿದೆ ಎನ್ನಲಾಗುತ್ತಿದೆ, ಕಳೆದ ಭಾರಿ ತನಗೆ ಟಿಕೇಟ್ ಕೈ ತಪ್ಪಿಸಿದರು ಎನ್ನುವ ಕಾರಣದಿಂದ ಮಾಜಿ ಸಚಿವ ಜಯಚಂದ್ರರವರಿಗೆ ಬುದ್ದಿ ಕಲಿಸಲು ತನ್ನ ಸ್ವ ಕ್ಷೇತ್ರ ಬಿಟ್ಟು ಶಿರಾ ತಾಲ್ಲೂಕಿನ ಅಹಿಂದ ಮಾತದಾರನ್ನು ಸಂಘಟನೆ ಮಾಡಲು ಕೋಟಿ ಕೋಟಿ ಹಣ ಸುರಿದು ತನ್ನ ಸಮುದಾಯದಲ್ಲಿ ಬಹುತೇಕ ಹಿಡಿತ ಸಾದಿಸಿದ್ದ ಸತೀಶ್ ಇತರೆ ಸಮುದಾಯ ಸಂಘಟಿಸುವಲ್ಲಿ ವಿಫಲರಾಗಿದ್ದರು ಎನ್ನುವ ಮಾತು ಕೇಳಿಬರುತ್ತಿತ್ತು, ತನ್ನ ಸಮುದಾಯ ಹೊರತು ಪಡಿಸಿ ಬೇರೆ ಸಮುದಾಯಗಳು ಸತೀಶ್ ನಾಯಕತ್ವ ಒಪ್ಪರಲಿಲ್ಲ ಎನ್ನುವ ಮಾತು ಕೇಳಿಬರುತ್ತಿತ್ತು. ಕುಂಚಿಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಯಾವುದೇ ರೀತಿಯ ಮಾಹಿತಿ ಕೊಡದೇ ಮೌನವಾಗಿದ್ದ ಮಾಜಿ ಸಚಿವ ಜಯಚಂದ್ರ
ತನ್ನ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.
ಮಾಜಿ ಸಚಿವ ಅನಿಲ್ ಲಾಡ್ ಕೃಪೆಯಿಂದ ಶಿರಾ ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದ ಸಾಸಲು ಸತೀಶ್ ಅನಿಲ್ ಲಾಡ್ ಆತ್ಮೀಯರು ಎಂದು ಹೆಳಲಾಗುತ್ತಿತ್ತು, ಮಾಜಿ ಮುಖ್ಯಮಂತ್ರಿ ಅಹಿಂದ ನಾಯಕ ಸಿದ್ದರಾಮಯ್ಯ ಆಪ್ತರಾದ ಅನಿಲ್ ಲಾಡ್ ಫಂಡಿಗ್ ಮಾಡಿದ್ದರು ಪಕ್ಷ ಸಂಘಟನೆಗೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು. ಕಳೆದ ಭಾರಿ ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ
ಆಕಾಂಕ್ಷಿಯಾಗಿ ಸಂಘಟಿಸಿ
ಕೊನೆ ಗಳಿಗೆಯಲ್ಲಿ ವಂಚನೆಗೊಳಗಾಗಿದ್ದರು,,, ಮಾಜಿ ಸಚಿವ ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ರವರಿಗೆ ಹೈಕಮಾಂಡ್ ಟಿಕೇಟ್ ನೀಡಿತ್ತು ಸಾಸಲು ಸತೀಶ್ ಗೆ ಟಿಕೆಟ್ ವಂಚನೆಯಾಗಿ ಮೌನಕ್ಕೆ ಶರಣಾಗಿದ್ದರು.
ಅದರ ಪರಿಣಾಮ ಶಿರಾ ಕ್ಷೇತ್ರದ ಮೇಲೆ ಸತೀಶ್ ಕೆಂಗಣ್ಣು ಬಿದ್ದಿತ್ತು ಮತ್ತೆ ಸತೀಶ್ ಟಿಕೇಟ್ ವಂಚನೆಗೆ ಒಳಗಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ ಸತೀಶ್ ಹಣೆ ಬರಹ ಚೆನ್ನಾಗಿಲ್ಲ ಎಲ್ಲಿ ಹೋದರು ಸೋಲಿನ ಕಹಿ ಇವರ ಜೊತೆಗಿರುತ್ತದೆ. ,ಕೊನೆಗಳಿಗೆಯಲ್ಲಿ ಮತ್ತೆ ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರಾ ಎನ್ನುವ ಅನುಮಾನ ಜನತೆ ವ್ಯಕ್ತ ಪಡಿಸುತ್ತಿದ್ದಾರೆ.