ತುಮಕೂರು
ಮುಂಜಾನೆಯ ಮಂಜಿಗೆ ನೇಸರನ ಕಿರಣಗಳು ತಾಕಿದಾಗ ಹೊಳಪಿನಂದ ಹೆಚ್ಚಿದಂತೆ, ಸಾಂಸ್ಕøತಿಕ ಉಡುಗೆ ತೊಡುಗೆ ತೊಟ್ಟು ಸಿಂಗಾರಗೊಂಡ ಹಸಿರಿನ ಕ್ಯಾಂಪಸ್‍ನಲ್ಲಿ ಕನ್ನಡದ ಭಾವುಟಗಳ ಹಾರಾಟ- ಹಾಡು ಮತ್ತು ನೃತ್ಯ ದಿಂದ ಇಡಿ ವಾತಾವರಣ ಕನ್ನಡ ಹಬ್ಬದಿಂದ ಕೂಡಿತ್ತು. ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೂ ಕಲಾ ವೈಭವದ ಮೆರುಗು ಜಿನುಗುತ್ತಿತ್ತು, ಸಂಜೆಗತ್ತಲ ಸರದಿಗೆ ಇಂಬು ತಂದ ಕೃತಕ ಬೆಳಕಿನ ವಿದ್ಯುತ್ ದೀಪಗಳ ಭವ್ಯ ರಂಗಸಜ್ಜಿಕೆಯಲ್ಲಿ ಕಲಾವಿದರ ಸಮುಖದಲ್ಲಿ ವಿವಿಧ ನೃತ್ಯ ಪ್ರದರ್ಶನಗಳು ನೆರದ ಪ್ರೇಕ್ಷಕರ ಮನ ತಣಿಸಿದವು. ಈ ದೃಶ್ಯ ಕಂಡು ಬಂದಿದ್ದು, ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಹಬ್ಬ ‘ರಾಜ್ಯೋತ್ಸವ-2022’ ಸಂಭ್ರಮದ ಕ್ಯಾಂಪಸ್ ಝಲಕ್.
ಇಂದು ಬೆಳಿಗ್ಗೆ (ನವೆಂಬರ್19)ಕ್ಯಾಂಪಸ್‍ನ ಡಾ.ಎಚ್.ಎಂ.ಗಂಗಾಧರಯ್ಯ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಮಾತನಾಡಿದರು.
ವಿದ್ಯಾರ್ಥಿಗಳು ದೇಶಿಯ ಕ್ರೀಡೆ ಸಂಸ್ಕøತಿಗಳನ್ನು ಮರೆಯಬಾರದು. ನಮ್ಮ ನಾಡಿನ ಕವಿಗಳನ್ನು ಸಾಹಿತಿಗಳ ಸೇವೆಯನ್ನು ಎಲ್ಲರೂ ಸ್ಮರಿಸೋಣ. ಆ ಮೂಲಕ ಕನ್ನಡವನ್ನು ಬೆಳೆಸುವ-ಉಳಿಸುವ ಮನಸ್ಥಿತಿ ಬರಲಿ ಎಂದು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಕಿವಿ ಮಾತು ಹೇಳಿದರು.
ಕನ್ನಡೇತರರಿಗೆ ಕನ್ನಡ ಕಲಿಸಲು ಕನ್ನಡ ನುಡಿ, ಸಂಸ್ಕøತಿ, ಪರಂಪರೆ ಉಳಿಸಲು ಸದಾ ಬದ್ಧರಾಗಬೇಕು ಮತ್ತು ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡಬೇಕು.ಅತ್ಯಂತ ಸಡಗರ-ಸಂಭ್ರಮ ದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಅವರು ಹೇಳಿದರು.
ನಾಡು ನುಡಿ ಸಂಸ್ಕøತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ತಾಯ್ನಾಡನ್ನು ಯಾವತ್ತೂ ಯಾರು ಮರೆಯಬಾರದು ಎಂದು ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ, ಸಾಹೇ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಂ.ಝಡ್.ಕುರಿಯನ್, ಡೀನ್ ಡಾ.ಎಂ ಸಿದ್ದಪ್ಪ, ಪರೀಕ್ಷಾಂಗ ಕುಲಸಚಿವರಾದ ಡಾ.ಕೆ. ಕರುಣಾಕರ್, ರಾಜ್ಯೋತ್ಸವ ಆಚರಣೆಯ ಸಂಯೋಜಕರಾದ ಡಾ. ಎಲ್.ಸಂಜೀವ್ ಕುಮಾರ್ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡರು ಉಪಸ್ಥಿತಿತರಿದ್ದರು.
ವಿವಿಧ ಸ್ಪರ್ಧೆಗಳು:
ಕ್ಯಾಂಪಸ್‍ನಲ್ಲಿ ಮೆರಗಿನ ಸಿದ್ಧತೆಯೊಂದಿಗೆ ನಡೆದ ‘ರಾಜ್ಯೊತ್ಸವ-2022’ ಕಾಲೇಜಿನ ವಿದ್ಯಾರ್ಥಿಗಳಿಗೆಂದೇ ನೃತ್ಯ ಪ್ರದರ್ಶನ, ರಂಗೋಲಿ, ಚಿತ್ರಕಲೆ, ನಾಟಕ ಪ್ರದರ್ಶನ, ದೇಶಿ ಕಲೆಗಳಾದ ಬುಗರಿ, ಗೋಲಿ, ಕುಂಟೆ ಬಿಲ್ಲೆ, ಚೌಕೋಬಾg, ವೀರಗಾಸೆ ಸೇರಿದಂತೆ 15ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಸಿನ ಉದ್ಯಾನವನದಲ್ಲಿ ನಡೆದ ಬೆಳಕಿನ ವೈಭವದ ನಡುವೆ ರಾಜ್ಯೋತ್ಸವಕ್ಕೆ ತೆರೆ ಎಳೆದರು.