ತುಮಕೂರು
ಕಾರ್ಮಿಕರಿಗೆ ತ್ವರಿತವಾಗಿ ಪರಿಹಾರಗಳನ್ನು ಬಿಡುಗಡೆ ಮಾಡಬೇಕು.ಕಾರ್ಮಿಕರ ಕಾರ್ಡುಗಳನ್ನು ಅರ್ಜಿ ನೀಡಿದ ಒಂದು ತಿಂಗಳೊಳಗೆ ನೀಡಬೇಕು ಮತ್ತಿತರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದವತಿಯಿಂದ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಡಾ.ವಿ.ಎಸ್.ಸೈಯದ್ ದಾದಾಪೀರ್ ಅವರ ನೇತೃತ್ವದಲ್ಲಿ ಕಾರ್ಮಿಕ ಘಟಕದ ಹತ್ತಾರು ಸದಸ್ಯರು ಕೋರ್ಟು ಆವರಣದಲ್ಲಿರುವ ಕಾರ್ಮಿಕರ ಇಲಾಖೆಯ ಕಚೇರಿ ಮುಂಭಾಗದಲ್ಲಿ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿ.ಎಸ್.ಸೈಯದ್ ದಾದಾಪೀರ್,ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮೂರು ವರ್ಷದಿಂದಲೂ ಕಾರ್ಮಿಕರ ಕಾರ್ಡು ಮಾಡಿಕೊಡುತ್ತಿಲ್ಲ.2019ರಲ್ಲಿ ಸುಮಾರು 21 ಅರ್ಜಿಗಳನ್ನು ಎಲ್ಲಾ ದಾಖಲೆಗಳೊಂದಿಗೆ ಕಾರ್ಮಿಕರ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಅವರಿಗೆ ಕಾರ್ಡು ನೀಡಿಲ್ಲ.ಪ್ರಶ್ನಿಸಿದರೆ ಇಲ್ಲಸಲ್ಲದ ನೆಪ ಹೇಳಿ ಜಾರಿ ಕೊಳ್ಳುತ್ತಿದ್ದಾರೆ.ಅಲ್ಲದೆ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ, ಮದುವೆ ಪ್ರೋತ್ಸಾಹಧನ,ಮನೆ ನಿರ್ಮಾಣಕ್ಕೆ ಪ್ರೋತ್ಸಾಹಧನ ಸೇರಿದಂತೆ ಹಲವು ಪ್ರಯೋಜನಗಳಿಗೆ ಸಾವಿರಾರು ಅರ್ಜಿಗಳು ಬಂದಿದ್ದರೂ ಇದುವರೆಗೂ ಅವರಿಗೆ ಸಹಾಯಧನ ಮಂಜೂರು ಮಾಡಿಲ್ಲ.ಬದಲಾಗಿ ಕಾರ್ಮಿಕರ ಹೆಸರಿನಲ್ಲಿ ಕಾರ್ಮಿಕರಲ್ಲದವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದು,ಈ ಸಂಬಂಧ ಈಗಾಗಲೇ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ ಎಂದು ದೂರಿದರು. ಕಾರ್ಮಿಕರಿಗೆ ಕಾರ್ಮಿಕರ ಕಲ್ಯಾಣ ನಿಧಿಯಿಂದ ಟೂಲ್ ಕಿಟ್ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದಿದೆ.144 ವಿವಿಧ ರೀತಿಯ ಕಾರ್ಮಿಕರಿಗೆ ನೀಡಬೇಕಿರುವ ಸೌಲಭ್ಯಗಳು ದೊರೆಯುತ್ತಿಲ್ಲ.ಬದಲಾಗಿ ಕಾರ್ಮಿಕ ಮಂತ್ರಿಗಳ ಹಿಂಬಾಲಕರಿಗೆ ಸರಕಾರದ ಸವಲತ್ತುಗಳು ಸೇರುತ್ತಿವೆ.ಕೂಡಲೇ ಇದರ ಹೊಣೆ ಹೊತ್ತು ಕಾರ್ಮಿಕ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ.ಕಾರ್ಮಿಕರ ಬೆವರಿನ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿ,ಕಾರ್ಮಿಕ ಕಲ್ಯಾಣ ಮಂಡಳಿಯ ಆಸ್ವಿತ್ವದ ಉದ್ದೇಶವನ್ನೇ ಹಾಳು ಗೆಡುವುತಿದ್ದಾರೆ.ಸರಕಾರ ಇದೇ ರೀತಿಯ ಧೋರಣೆ ಮುಂದುವರೆಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸೈಯದ್ ದಾದಾಪೀರ್ ತಿಳಿಸಿದರು. ಈ ಸಂಬಂಧ ಮನವಿಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲಾಯಿತು.ಪÀ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ರಹೀಂ,ಪದಾಧಿಕಾರಿಗಳಾದ ಆದಿಲ್‍ಷಾಷ, ಹನುಮಂತು,ನಿಂಗರಾಜು,ವೆಂಕಟೇಶ್,ಗುಬ್ಬಿ ಗಿರಿಜಮ್ಮ,Àಯಾಜ್ ಕೊರಟಗೆರೆ,ಜಮೀರ್‍ಖಾನ್,ಭವ್ಯ,ಮಹೆಬೂಬ್,ಅರುಣ್ ಕುಮಾರ್,ಲಕ್ಷ್ಮಿದೇವಮ್ಮ, ಭಾಗ್ಯ, ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.