ತುರುವೇಕೆರೆ
ನಿಜವಾದ ಜಾತಿ ಅಸ್ಪೃಶ್ಯ ಜಾತಿ ಜನಾಂಗವನ್ನು ಗುರುತಿಸಲು 75 ವರ್ಷ ಆಡಳಿತ ನೆಡೆಸಿದ ಸರ್ಕಾರಗಳು ವಿಪಲವಾಗಿವೆ ಎಸ್. ಸಿ – ಎಸ್. ಟಿ ಮೀಸಲಾತಿಯಲ್ಲಿ ಮಾದಿಗ ಮತ್ತು ಹೊಲಯ ಜಾತಿಗೆ ಅನ್ಯಾಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾದ್ಯಕ್ಷ ಪಿ.ಎನ್. ರಾಮಯ್ಯ (ಎನ್.ಮೂರ್ತಿ ಬಣ) ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಂಘಟನೆಯನ್ನು ತಾಲ್ಲೂಕುಗಳಲ್ಲಿ ಪುನಶ್ಚೇತನ ಗೊಳಿಸಲು ಕಾರ್ಯೋಮುಖವಾಗಿದ್ದೇವೆ ಅದರಂತೆ ಹೊಸ ಯುವಕರನ್ನು ಬೆಳೆಸುವ ಉದ್ದೇಶದಿಂದ ಸಂಘಟನೆಯಲ್ಲಿ ತೊಡಗಿಸಲು ಹೊಸ ಪದಾದಿಕಾರಿಗಳನ್ನು ನೇಮಿಸಲು ಮುಂದಾಗಿದ್ದೇವೆ ಸಮಾಜದಲ್ಲಿ ಸುದಾರಣೆತರಲು ರಚಿಸಿದ್ದ ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅದಿಕಾರದಲ್ಲಿದ್ದ ಯಾವ ಪಕ್ಷಗಳೂ ಸಹ ಜಾರಿಗೆ ತಂದಿಲ್ಲ ನಮ್ಮ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಾದ ನಾರಾಯಣ ಸ್ವಾಮಿಯವರು ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆಂದು ಆಶ್ವಾಸನೆಯನ್ನು ಕೊಟ್ಟಿದ್ದಾರೆ.
ನಿಜವಾದ ಜಾತಿ ಅಸ್ಪೃಶ್ಯ ಜಾತಿ ಜನಾಂಗವನ್ನು ಗುರುತಿಸಲು 75 ವರ್ಷ ಆಡಳಿತ ನೆಡೆಸಿದ ಸರ್ಕಾರಗಳು ವಿಪಲವಾಗಿವೆ ಎಸ್. ಸಿ -ಎಸ್. ಟಿ ಮೀಸಲಾತಿಯಲ್ಲಿ ಮಾದಿಗ ಮತ್ತು ಹೊಲಯ ಜಾತಿಗೆ ಅನ್ಯಾಯವಾಗಿದೆ ಈ ವಿಚಾರವಾಗಿ ಸರ್ಕಾರಕ್ಕೆ ಮನವಿಯನ್ನು ಮಾಡಿದ್ದೇವೆ ಮುಂದಿನ ಚುನಾವಣೆಯೊಳಗೆ ವರದಿಯನ್ನು ಆನುಸ್ಟಾನಗೊಳಿಸದೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಳಿಸುತ್ತೇವೆ ನಮ್ಮ ಸಮಾಜದ ಜನ ಜಾಗೃತರಾಗಿದ್ದಾರೆ ಎಂದು ಎಚ್ಚರಿಕೆ ನೀಡಿ ಕಾಂಗ್ರೆಸ್, ಜೆ. ಡಿ. ಎಸ್. ಸೇರಿದಂತೆ ಎಲ್ಲ ಪಕ್ಷಗಳು ನಮ್ಮ ಸಮುದಾಯಕ್ಕೆ ಅನ್ಯಾಯ ನೆಡೆಸಿವೆ ದಿನ ನಿತ್ಯ ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿ ಇದೆ ಇದನ್ನು ತಡೆಯುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕು ಎಂದು ಹೇಳಿದರು.
ಸರ್ಕಾರವು ಗೋವುಗಳನ್ನು ಸಾಕಲು ವೇತನ ಕಡಿತ ಮಾಡುವುದಾಗಿ ತಿಳಿಸಿದೆ ಈ ವಿಚಾರವಾಗಿ ಎಸ್. ಸಿ. ಎಸ್. ಟಿ ನೌಕರರ ವಿರೋದವಿದೆ ಶಿಕ್ಷಣ ಸಚಿವರು ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವ ಮಾತನಾಡಿದ್ದಾರೆ ಇದನ್ನು ಬಿಟ್ಟು ಶಾಲೆಗಳಿಗೆ ಮೂಲಬೂತ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕು ಮತ್ತು ಎಲ್ಲ ಜಾತಿಯ ಜನಾಂಗಗಳು ಒಪ್ಪಿಕೊಳ್ಳುವಂತಹ ಕಾನೂನುಗಳನ್ನು ಸರ್ಕಾರಗಳು ಜಾರಿಗೆ ತರಬೇಕು ನಮ್ಮ ಸಮಾಜದಲ್ಲಿ ಮೀಸಲಾತಿ ಉಳ್ಳವರ ಪಾಲಾಗುತ್ತಿದೆ ಇದು ನಮ್ಮ ಜನಾಂಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು ಸಮಾಜದಲ್ಲಿ ಶೋಷಿತರ ಪರವಾದ ಕೆಲಸಗಳು ಆಗಬೇಕಿದೆ ಎಂದರು.
ಈದೇ ಸಂದರ್ಬದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ನೂತನ ಆದ್ಯಕ್ಷರಾಗಿ ಹಟ್ಟಯ್ಯ, ಉಪಾದ್ಯಕ್ಷರಾಗಿ ಚಂದ್ರ ಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ನರಸಯ್ಯ ಲೆಂಕನಹಳ್ಳಿ,ಪ್ರದಾನ ಕಾರ್ಯದರ್ಶಿಯಾಗಿ ರಂಗಸ್ವಾಮಿ, ಕಾರ್ಯದರ್ಶಿಯಾಗಿ ಕುಮಾರ್ ಮತ್ತು ಇತರೆ ಪದಾದಿಕಾರಿಗಳನ್ನು ನೇಮಿಸಲಾಯಿತು.
ಈ ಸಂದರ್ಬದಲ್ಲಿ ವಿಬಾಗೀಯ ಅಧ್ಯಕ್ಷ ಪುಟ್ಟಸ್ವಮಯ್ಯ, ಲಕ್ಷ್ಮಿ ನಾರಾಯಣ, ನವೀನ್, ಬಾಲರಾಜ, ಪ್ರಸನ್ನ ಕುಮಾರ್,ಮಂಜುನಾಥ, ರಾಮಕೃಷ್ಣಯ್ಯ,ಪ್ರಕಾಶ್, ರಘು, ಗಂಗಾಧರ, ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರುಗಳು ಇದ್ದರು.