ಚಿಕ್ಕನಾಯಕನಹಳ್ಳಿ
ವೃದ್ಧಾಪ್ಯ ವೇತನದ ಪಿಂಚಣಿ ಹಣ ಪಡೆಯಲು ಶೆಟ್ಟಿಕೆರೆ ಅಂಚೆ ಕಚೇರಿಗೆ ಪರೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೆಸರಲ್ಲಿ ಗ್ರಾಮದ ಗ್ರಾಪಂ ಸದಸ್ಯ ಗೋಪಾಲಯ್ಯ ಆರೋಪಿಸಿ ಮುಂದಿನ ದಿನಗಳಲ್ಲಿ ಇದೆ ಸ್ಥಿತಿ ನಿರ್ಮಾಣವಾದರೆ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು
ಹೆಸರಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಶೆಟ್ಟಿಕೆರೆಗೆ ಬರಬೇಕಾದರೆ ಎಂಟು ಕಿಲೋಮೀಟರ್ ಬಳಸಿಕೊಂಡು ಬರಬೇಕು ಇಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಸುಮಾರು 65 ರಿಂದ 70 ವರ್ಷದ ವಯೋವೃದ್ದರೂ ಈ ಹಣ ಪಡೆಯಬೇಕಾದರೆ ಕಾಲುನಡಿಗೆ ಬರಬೇಕು ಇಲ್ಲದೇ ಹೋದರೆ ಆಟೋ ಕೆ ಒಂದು ಬಾರಿಗೆ ನೀಡಿ ವಯೋ ವೃದ್ಧ ಪಿಂಚಣಿ ಪಡೆದರೆ ಅವರಿಗೆ ಉಳಿಯುವ ಹಣವೆಷ್ಟು ಎಂಬ ಜಿಜ್ಞಾಸೆಯನ್ನು ತೆರೆದಿಟ್ಟರು
ಹೆಸರಲ್ಲಿ ಗ್ರಾಮದ ಓಬಳಯ್ಯ ಮತ್ತು ಎಂಜಮ್ಮ ಎಂಬ ಇಬ್ಬರು ವಯೋವೃದ್ಧರು ಸೇರಿ ಹೆಸರಳ್ಳಿ ಗ್ರಾಮದಿಂದ ಆಟೋವನ್ನು ಮುನ್ನೂರು ರೂಪಾಯಿ ನೀಡಿ ಪಿಂಚಣಿ ಪಡೆಯಲು ಇಬ್ಬರು ಬಂದಿದ್ದರು. ಸರ್ವರ್ ಇಲ್ಲದೆ ಆಟೋಗೆ ಹಣ ಕೊಡಲು ದುಡ್ಡಿಲ್ಲದೆ ಪರದಾಡುವ ಸ್ಥಿತಿ ಕೂಡ ನಿರ್ಮಾಣವಾಯಿತು
ಅದೇ ಗ್ರಾಮದ ಸದಸ್ಯ ಗೋಪಾಲಯ್ಯ ಈ ಘಟನೆಯನ್ನು ನೋಡಿ ಮಾತನಾಡುತ್ತಾ ಪೆÇೀಸ್ಟ್ ಮಾಸ್ಟರ್ ಬಳಿ
ವಿಚಾರಿಸಿದಾಗ ನೆಟ್ವರ್ಕ್ ಇಲ್ಲ ಎಂದು ಇಲ್ಲಿಗೆ ಬರುವ ಜನರ ವೇಷ ಭೂಷಣದ ಮೇಲೆ ಮಾತನಾಡುವ ಸಂಸ್ಕೃತಿ ಹೊಂದಿದ್ದಾರೆ ಇಲ್ಲಿನ ಅಂಚೆ ಕಚೇರಿಯ ಅಧಿಕಾರಿ ಎಂದು ಆರೋಪಿಸಿದರು
ಅಂಚೆ ಕಚೇರಿಯ ಅಧಿಕಾರಿ ಶುಭ ಮಾತನಾಡುತ್ತಾ ಇಂಡಿಯಾ ಪೆÇೀಸ್ಟ್ ಬ್ಯಾಂಕಿಂಗ್ ಎಂಬ ಕಾರ್ಡನ್ನು ನೀಡಿರುವುದು ನಿಜ ಕಳೆದ ಐದು ಆರು ದಿನಗಳಿಂದ ಸರ್ವರ್ ಇಲ್ಲದೆ ಓಪನ್ ಆಗುತ್ತಿಲ್ಲ ಇದರಿಂದ ಹಣ ಎಷ್ಟಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಹೀಗಾಗಿ ನಾವು ಅಸಹಾಯಕರಾಗಿದ್ದೇವೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿರುವುದರಿಂದ ಕಾನೂನನ್ನು ಬಿಟ್ಟು ಮಾಡುವ ಸ್ಥಿತಿ ನಮಗಿಲ್ಲ ಇಡೀ ಕಚೇರಿಗೆ ಒಬ್ಬರೇ ಅಧಿಕಾರಿಯಾಗಿದ್ದು ಟೆಲಿಗ್ರಾಮು ಅಂಚೆ ಚೀಟಿ ಪ್ರತಿಯೊಂದು ವ್ಯವಹಾರವನ್ನು ನಾನೇ ನೋಡಬೇಕಾಗಿರುವುದರಿಂದ ಆ ಟೆನ್ಶನ್ನಿನಲ್ಲಿ ಸ್ವಲ್ಪ ಗೊಂದಲಗಳು ಆಗಿರಬಹುದು ಮುಂದಿನ ದಿನದಲ್ಲಿ ಬದಲಿಸಿಕೊಳ್ಳುತ್ತೇನೆ ಸರ್ವರ್ ಬಂದರೆ ನಾನು ಒಬ್ಬಳೇ ಎಲ್ಲಾ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಸರ್ವಾರ್ ಬಂದರೆ ಯಾರಿಗೂ ವಾಪಸ್ ಕಳಿಸುವುದಿಲ್ಲ ಸರ್ವರೋ ಗುಣಮಟ್ಟವನ್ನು ಹೆಚ್ಚಿಸಿದರೆ ಮಾತ್ರ ನಾವು ಸಾರ್ವಜನಿಕರಿಗೆ ಸುಗಮವಾಗಿ ಕೆಲಸ ಮಾಡಲು ಸಹಕಾರವಾಗುತ್ತದೆ ಎಂದು ಅಧಿಕಾರಿಯ ಸಮಸ್ಯೆಯನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ತೋಡಿಕೊಂಡರು. ಇದಕ್ಕೆ ಸುಮ್ಮನಾಗದ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲಯ್ಯ ಮುಂದಿನ ದಿನದಲ್ಲಿ ಈ ವ್ಯವಸ್ಥೆ ಸರಿಯಾಗದಿದ್ದರೆ ಎಲ್ಲಾ ಪಿಂಚಣಿದಾರರನ್ನು ಕರೆತಂದು ಕಚೇರಿಯದು ಪ್ರತಿಭಟಿಸುವ ದಾಗಿ ಹೇಳಿದರು.