ತುಮಕೂರು
ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಅಫ್‍ನ್ನು ಬಂದ್ ಮಾಡುವ ಮೂಲಕ ಡಿಲೀಟ್ ಆಗಿರುವ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರವನ್ನು ಅಡಳಿತ ಪಕ್ಷ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ಅರೋಪಿಸಿದ್ದಾರೆ.
ನಗರದ ಬಿ.ಜಿ.ಪಾಳ್ಯ ಸರ್ಕಲ್‍ನಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವತಿಯಿಂದ ಆಯೋಜಿಸಿದ್ದ ಮತದಾರರ ಪಟ್ಟಿ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಮತದಾರರ ಪಟ್ಟಿಯಲ್ಲಿ ಆಗಿರುವ ಅವ್ಯವಹಾರ ಗಮನಕ್ಕೆ ಬಂದ ಕೂಡಲೇ, ಆಗಿರುವ ಅನ್ಯಾಯ ಸರಿಪಡಿಸಲು ಅವಕಾಶವಿಲ್ಲದಂತೆ ಅಫ್‍ನ್ನು ಕೆಲಸ ಮಾಡದಂತೆ ಅಮಾನತ್ತು ಪಡಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಪುನಃ ಸೇರಿಸಲು ಅವಕಾಶವಿಲ್ಲದಂತೆ ಮಾಡಿದ್ದಾರೆ. ಮುಂದಿನ ಶನಿವಾರದೊಳಗೆ ಅಫ್‍ನಲ್ಲಿ ಆಗಿರುವ ಲೋಪದೋಷ ಸರಿಪಡಿಸಿ, ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ತುಮಕೂರು ನಗರದಲ್ಲಿ ಫಾರಂ 07 ಸಲ್ಲಿಸದಿದ್ದರೂ ಸುಮಾರು 21 ಸಾವಿರಕ್ಕೂ ಅಧಿಕ ಮತದಾರರು ಕಳೆದ ವರ್ಷಕ್ಕೂ ಈ ವರ್ಷಕ್ಕು ಕಡಿಮೆಯಾಗಿದ್ದಾರೆ. ಇದನ್ನು ಗಮನಿಸಿದರೆ ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ಯೇತರ ಮತಗಳನ್ನು ಸದ್ದಿಲ್ಲದೆ ಡಿಲೀಟ್ ಮಾಡುವ ಕೆಲಸ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡಿದೆ.ಇದನ್ನು ಸರಿಪಡಿಸುವ ಉದ್ದೇಶದಿಂದ ಹತ್ತಾರು ಯುವಕರು ತಯಾರಿದ್ದರೂ ಅಫ್ ವರ್ಕ ಆಗದ ಕಾರಣ.ಮತದಾರರ ಪಟ್ಟಿಯಲ್ಲಿನ ಗೊಂದಲ ಮುಂದುವರೆದಿದೆ.ಇದನ್ನು ಸರಿಪಡಿಸುವ ಜವಾಬ್ದಾರಿ ಜಿಲ್ಲಾ ಚುನಾವಣಾಧಿಕಾರಿಗಳ ಮೇಲಿದೆ ಎಂದು ಆತೀಕ್ ಅಹಮದ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮಾಜಿ ಡಿಸಿಸಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,1952ಕ್ಕಿಂತ ಮೊದಲು ಕೇವಲ ಜಮೀನ್ದಾರರು,ತೆರಿಗೆ ಪಾವತಿಸುವವರು, ಉದ್ದಿಮೆದಾರರಿಗೆ ಮೀಸಲಾಗಿದ್ದ ಮತದಾನದ ಹಕ್ಕನ್ನು ಡಾ.ಬಿ.ಆರ್.ಅಂಬೇಡ್ಕರ್ ಸತತವಾಗಿ ಹೋರಾಟ ನಡೆಸಿ,
ಜನಸಮಾನ್ಯರಿಗೂ ಮತದಾನದ ಹಕ್ಕು ದೊರೆಯುವಂತೆ ಮಾಡಿದರು.ಆದರೆ ವಾಮ ಮಾರ್ಗದಿಂದ ಅದನ್ನು ಕಸಿಯಲು ಬಿಜೆಪಿ ಹವಣಿಸುತ್ತಿದೆ.ಇದರ ವಿರುದ್ದ ನಾವೆಲ್ಲರೂ ಪ್ರತಿಭಟಿಸಬೇಕಿದೆ. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ,ಇಲ್ಲವೋ ಎಂಬುದನ್ನು ಪರಿಶೀಲಿಸಿ,ಸಂಬಂಧಪಟ್ಟವರಿಗೆ ದೂರು ನೀಡಿ,ಸರಿಪಡಿಸಿ ಕೊಳ್ಳಲು ಅವಕಾಶವಿದೆ.ಯಾರೋಬ್ಬರು ಮತದಾನದಿಂದ ವಂಚಿತರಾಗಬಾರದು, ಹಾಗೆಯೇ ಮತವನ್ನು ಮಾರಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಮಾತನಾಡಿ,ಬಿಜೆಪಿಯ ದುರಾಡಳಿತ, ಜನವಿರೋಧಿ ನೀತಿಗಳಿಂದ ಬೆಸತ್ತಿರುವ ಜನ ಬಿಜೆಪಿ ವಿರುದ್ದ ಮತ ಚಲಾಯಿಸುತ್ತಾರೆ ಎಂಬುದನ್ನು ಅರಿತು, ಬಿಬಿಎಂಪಿ,ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಲು ಮತದಾರರ ಪಟ್ಟಿಯಲ್ಲಿ ಸದ್ದಿಲ್ಲದೆ ದಲಿತರು, ಅಲ್ಪಸಂಖ್ಯಾತರು,
ಹಿಂದುಳಿದ ವರ್ಗದವರ ಹೆಸರುಗಳನ್ನು ತೆಗೆದು, ಗೊಂದಲ ಸೃಷ್ಟಿ ಮಾಡುತ್ತಿದೆ.ಬಿಜೆಪಿ ಹೇಳುವಂತೆ ಆಂತಹ ಕೃತ್ಯ ನಡೆದಿಲ್ಲ ಎಂದಾದರೆ ಏಕೆ ನಾಲ್ವರು ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಟ್ಟಿದ್ದಾರೆ ಎಂದು ಪ್ರಶ್ನಿಸಿದರಲ್ಲದೆ,ಆಗಿರುವ ಗೊಂದಲ ಸರಿಪಡಿಸುವುದು ಸರಕಾರದ ಕರ್ತವ್ಯ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೀತಾ ರುದ್ರೇಶ್,ಟೂಡಾ ಮಾಜಿ ಸದಸ್ಯೆ ಗೀತಮ್ಮ,ಮುಖಂಡರಾದ ಶಿವಾಜಿ, ಟಿ.ಆರ್.ಗುರುಪ್ರಸಾದ್ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು. ಜಾಥಾವೂ ಪೂರ್ ಹೌಸ್ ಕಾಲೋನಿ,ಜಯಪುರ, ವಿನೋಬ ನಗರದ ವಿವಿಧ ರಸ್ತೆಗಳಲ್ಲಿ ಚಲಿಸಿ, ಮತದಾರರಿಗೆ ಅರಿವು ಮೂಡಿಸಿದರು.