ಪಾವಗಡ
ಕೇಂದ್ರ ಸರಕಾರದ ಒಪ್ಪಿಗೆಯ ಮೇರೆಗೆ ರಾಜ್ಯದಲ್ಲಿ 10 ಸಾವಿರ ಕಾಮನ್ ಸರ್ವಿಸ್ ಸೆಂಟರ್ ತೆರೆಯಲಾಗಿದೆ ಎಂದು ತಾ.ಯೋಜನಾಧಿಕಾರಿ ನಂಜುಂಡಿರವರು ತಿಳಿಸಿದರು.
ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ 41 ನೇ ಕಾಮನ್ ಸೆಂಟರ್‍ಗೆ ಚಾಲನೇ ನೀಡಿ ಮಾತನಾಡಿ ನಮ್ಮ ಈ ಯೋಜನೆ ಜಾರಿಯಾದ ನಂತರ ತಾಲೂಕಿನ 5 ಸಾವಿರ ಜನ ರೈತರ ಮನೆ ಬಾಗಿಲಿಗೆ ತೆರಳಿ ಈಕೆವೈಸಿ ಮಾಡಿಕೊಡಲಾಗಿದ್ದು, ಆಯುಷ್‍ಮಾನ್ ಕಾರ್ಡ್, ಪಾನ್‍ಕಾರ್ಡ್, ಪಹಣಿ, ಹಣ ಜಮೇ ಮಾಡುವುದು, ಅನ್‍ಲೈನ್ ಅರ್ಜಿಗಳನ್ನ ಸಲ್ಲಿಸುವುದು ಸೇರಿದಂತೆ ನಾನಾ ಯೋಜನೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜನತೆಗೆ ತಾಲೂಕಿನಲ್ಲಿ ಸೇವೆಯನ್ನ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಆರಂಭವಾದ ಕಾಮನ್ ಸರ್ವಿಸ್ ಸೆಂಟರ್‍ಗಳಿಂದ ಇದುವರೆಗೂ 1 ಕೋಟಿ ಜನತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸೌಲಭ್ಯಗಳನ್ನ ಕಲ್ಪಿಲಾಗಿದೆ ಎಂದಾ ಅವರು ಇದೇ ಗ್ರಾಮದಲ್ಲಿ ನಿತ್ಯ ಬೆಳಿಗ್ಗೆ 8 ರಿಂದ 12 ಹಾಗೂ ಮದ್ಯಾಹ್ನ 3 ರಿಂದ 7ರವರೆಗೆ ಕಚೇರಿ ತೆರೆಯಲಾಗಿದ್ದು ಯೋಜನೆಯ ಸದ್ಬಳಕೆಯನ್ನ ರೈತರು, ಸಾರ್ವಜನಿಕರು ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಚಿಕ್ಕಹಳ್ಳಿ ಗ್ರಾಪಂ ಅಧ್ಯಕ್ಷರಾದ ವೆಂಕಟರಮಣಪ್ಪ, ಮಾಜಿ ಅಧ್ಯಕ್ಷರಾದ ಲಕ್ಷ್ಮಿವಿರೇಶ್, ಗ್ರಾಪಂ ಸದಸ್ಯರಾದ ಎ.ಗೋಪಿ, ಯೋಜನೆಯ ಪದಾಧಿಕಾರಿಗಳಾದ ಪುಷ್ಪಾವತಿ, ಇತರರು ಉಪಸ್ಥಿತರಿದ್ದರು.