ತುಮಕೂರು
ನನ್ನ ಕೊಲೆಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಬೊಮ್ಮನಹಳ್ಳಿ ಬಾಬು, ಹೀರೇಹಳ್ಳಿ ಮಹೇಶ್ ಸೇರಿ ಮತ್ತೊಬ್ಬ ಅನಾಮಧೇಯ ವ್ಯಕ್ತಿ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಬಿ.ಸುರೇಶ್‍ಗೌಡ ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಎಫ್ .ಐ ಆರ್ ದಾಖಲಾಗಿದೆ.
ದೂರಿನಲ್ಲಿ ಹೈ ಕೋರ್ಟಿನಲ್ಲಿರುವ ಶಾಸಕರ ವಿರುದ್ಧದ ಚುನಾವಣಾ ತಕರಾರು ಅರ್ಜಿ ಅಂತಿಮ ತೀರ್ಪಿಗೆ
ಕಾಯಿರಿಸಲಾಗಿದ್ದು, ಸದರಿ ತಕರಾರು ಅರ್ಜಿಯಲ್ಲಿ ಹಿರೇಹಳ್ಳಿ ಮಹೇಶ್ ವಿರುದ್ಧ ಸಾಕ್ಷ್ಯಾ ನೀಡಿರುತ್ತೇನೆ. ಅಲ್ಲದೆ ನನ್ನ ಸಹೋದರ ನೀಡಿದ ಕ್ರಿಮಿನಲ್ ದೂರಿನ ಸಂಬಂಧ ಶಾಸಕರ ಮೇಲೆ ಸಿಓಡಿ ತನಿಖೆಯಾಗಿದ್ದು ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಿನ್ನೆಲೆಯಲ್ಲಿ ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಗೌರಿ ಶಂಕರ್ ಮತ್ತು ಅವರ ಸಹಚರರಿಂದ ಜೀವ ಬೆದರಿಕೆ ಇದೆ ಎಂದು ಸುರೇಶ್ ಗೌಡ ಆರೋಪಿಸಿ ನನಗೆ ಸೂಕ್ತ ರಕ್ಷಣೆ ಒದಗಿಸಬೇಕಾಗಿ ಕೋರಿದ್ದಾರೆ.
ಮಾಜಿ ಶಾಸಕರ ಆರೋಪಗಳ ಸಂಭಂದ ಮಂಗಳವಾರ ಅಷ್ಟೇ ಶಾಸಕ ಗೌರಿಶಂಕರ್ ಎಸ್ಪಿ ಕಛೇರಿಗೆ ತಮಗೂ ಸುರೇಶ್ ಗೌಡರಿಂದ ಜೀವ ಬೆದರಿಕೆ ಇದೆ ಎಂದು ಲಿಖಿತವಾಗಿ ದೂರು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ಸೋಮವಾರ ರಾತ್ರಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಸುರೇಶ್ ಗೌಡ ಅವರ ಹೇಳಿಕೆ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ ನನ್ನ ಕೊಲೆ ಮಾಡಿಸೋದಿಕ್ಕೆ, ನೀನು ಸಜ್ಜಾಗಿದಿಯಾ. ಇದೆಲ್ಲಾ ನಡೆಯಲ್ಲಪ್ಪ ಮಿಸ್ಟರ್ ಗೌರಿಶಂಕರ್ ಮತದಾರರು, ನಮ್ಮ ಕಾರ್ಯಕರ್ತರು ಇರೋವರೆಗೂ ನನ್ನ ಒಂದು ಕೂದಲು ಮುಟ್ಟೋಕೆ ಆಗಲ್ಲ, ಜೈಲಲ್ಲಿ ಇರೋರಿಗೆ ನನ್ನ ಕೊಲೆಗೆ ಸುಫಾರಿ ಕೊಡ್ತಿಯಾ, ನಿನಗೆ ದಮ್ ಇದ್ರೆ ಸುಫಾರಿ ಕೊಡು ನೋಡೋಣಾ. ನನ್ನ ಕೊಲೆ ಅಲ್ಲ, ನನ್ನ ಒಂದು ಕೂದಲು ಕಿತ್ತೊಳೊಕೆ ಆಗೋಲ್ಲ ಎಂದು ಸವಾಲೆಸಿದಿದ್ದಾರೆ.
ನಿನ್ನ ನಾಟಕ ಎಲ್ಲಾ ಬಂದ್ ಮಾಡು , ನಮ್ಮ ತಾಕತ್ ಏನು ಅನ್ನೋದನ್ನ ನಮ್ಮ ಕಾರ್ಯಕರ್ತರು ತೋರಿಸ್ತಾರೆ. ಕಳೆದ ಒಂದೂವರೆ ತಿಂಗಳಿಂದ ನಮ್ಮ ಶಕ್ತಿ ಏನು ಅನ್ನೋದನ್ನ ಪ್ರತಿ ಊರಿನಲ್ಲೂ ತೋರಿಸಿದ್ದೀವಿ. ನಿನ್ನ ಒಂದೊಂದು ಆಟನೂ ನನಗೆ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.
ಬೆಳಗುಂಬದಲ್ಲಿ ಸಿದ್ಧರಾಮೇಶ್ವರ ಲಕ್ಷದೀಪೆÇೀತ್ಸವ ಕಾರ್ಯಕ್ರಮದ ವೇಳೆಯೂ ಶಾಸಕರ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಮಾಜಿ ಶಾಸಕ , ಗ್ರಾಮಾಂತರ
ಶಾಸಕರಿಗೆ ವಿದೇಶ ಪ್ರವಾಸ ಅಂದ್ರೆ ಬಹಳ ಪ್ರೀತಿ.
ಶಾಸಕರಿಗೆ ಅಧಿವೇಶನ ಸಮಯದಲ್ಲಿ ಥೈಲ್ಯಾಂಡ್, ಗೋವಾಗೆ ಹೋಗಲು ಸಮಯವಿರುತ್ತದೆ . ಆದರೆ ಅಸೆಂಬ್ಲಿಗೆ ಹೋಗಲು ಸಮಯವಿರುವುದಿಲ್ಲ ಎಂದಿದ್ದಾರೆ. ಶಾಸಕರಾಗಿ ಕಳೆದ ನಾಲ್ಕು ವರ್ಷದಲ್ಲಿ ಎಷ್ಟು ಸರಿ ವಿದೇಶ ಪ್ರವಾಸ ಹೋಗಿದ್ದಾರೆ. ಅವರ ಪಾಸ್ ಪೆÇೀರ್ಟ್, ನನ್ನ ಪಾಸ್ ಪೆÇೀರ್ಟ್ ತೆಗೆದು ನೋಡಿದರೆ ತಿಳಿಯುತ್ತದೆ. ನಾಲ್ಕು ವರ್ಷ ಆದ್ರೂ ದೇವಸ್ಥಾನದ ಕೆಲಸ ಮಾಡಲಿಲ್ಲ ಎಂದರು.
ನಕಲಿ ರಾಜನ ಕತೆ: ಸುರೇಶ ಗೌಡ ವ್ಯಂಗ್ಯ
ನಾನು ಮಾತನಾಡಿದ್ದೇನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿರುವ ಅಡಿಯೊ ರೆಕಾರ್ಡ್ ನಕಲಿ ರಾಜನ ಮತ್ತೊಂದು ನಕಲಿಯಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಪರೋಕ್ಷವಾಗಿ ಶಾಸಕ ಗೌರಿಶಂಕರ್ ಅವರನ್ನು ಗೇಲಿ ಮಾಡಿದ್ದಾರೆ.
ನನ್ನ ದ್ವನಿಯನ್ನು ಮಿಮಿಕ್ರಿ ಮಾಡಿಸಿ ಅಡಿಯೊ
ಹರಿಯಬಿಡಲಾಗಿದೆ. ಆ ಅಡಿಯೊಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮಹಿಳೆಯರ ಬಗ್ಗೆ ನನಗೆ ಗೌರವವಿದೆ. ಮಹಿಳಾ ಮತದಾರರಿಗೆ ನನ್ನ ಬಗ್ಗೆ ವಿಶೇಷ ಪ್ರೀತಿ ಇದೆ. ಇದನ್ನು ಸಹಿಸದೇ ನನ್ನ ಹೆಸರು ಕೆಡಿಸಲು ಈ ಅಡಿಯೊ ಮಿಮಿಕ್ರಿ ಮಾಡಿಸಲಾಗಿದೆ. ಈ ಬಗ್ಗೆಯೂ ದೂರು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.