ತುಮಕೂರು
ಸರ್ಕಾರಗಳು ರೈತರಿಗಾಗಿ ರೂಪಿಸುವ ಅನೇಕ ಯೋಜನೆಗಳು ಜನಪರವಾಗಿದ್ದು ಅನೇಕ ನಿಗಮ ಮಂಡಳಿಗಳ ವಿವಿಧ ಯೋಜನೆಗಳು ಫಲಾನುಭಾವಿಗಳಿಗೆ ಫಲಪ್ರದವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯು ಅರ್ಹತೆಯುಳ್ಳ ಎಲ್ಲಾ ವರ್ಗದ ರೈತರಿಗೆ ಸಿಗುವಂತಾಗಬೇಕು ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಗುಬ್ಬಿ ಶ್ರೀನಿವಾಸ್ (ವಾಸಣ್ಣ) ಅವರು ತಿಳಿಸಿದರು.
ಗುಬ್ಬಿ ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿ ಬಳಿ 2018-19ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಒಂದು ಫಲಾನುಭವಿಗೆ 4 ಲಕ್ಷ ರೂ. ವೆಚ್ಚದಂತೆ ಕೊರೆಯಲಾಗಿದ್ದ ಕೊಳವೆ ಬಾವಿ ವಿವಿಧ ಫಲಾನುಭವಿಗಳಿಗೆ ಮೊಟಾರ್ ಪಂಪು ಹಾಗೂ ಅಗತ್ಯ ಪರಿಕರ ಪೂರಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಶಾಸಕರು ಗುಬ್ಬಿ ವಿಧಾನಸಭಾದ ಅನೇಕ ರೈತರು ತೋಟಗಾರಿಕಾ ಆಧಾರಿತ ಬೆಳೆ ಪದ್ದತಿ ಅಳವಡಿಸಿಕೊಂಡಿದ್ದು ವಾಣಿಜ್ಯ ಬೆಳೆ ಬೆಳೆದು ಆರ್ಥಿಕ ವಾಗಿ ಸಬಲೀಕರಣರಾಗಲು ಗಂಗಾ ಕಲ್ಯಾಣ ಯೋಜನೆ ಉತ್ತಮವಾಗಿದ್ದು ಕೇವಲ ಶಿಪ್ಪಾರಸು ಮಾಡುವ ರೈತರಿಗೆ ಸೌಲಭ್ಯಗಳು ಸಿಗದೇ ಅರ್ಹತೆಯುಳ್ಳ ಎಲ್ಲಾ ವರ್ಗದ ರೈತರಿಗೆ ಯೋಜನೆಯು ತಲುಪುವಂತಾಗಬೇಕು ಈ ಹಿನ್ನೆಲೆಯಲ್ಲಿ ನಿಗಮ ಮಂಡಳಿಯ ವ್ಯವಸ್ಥಾಪಕರು ಹಾಗೂ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳು ಈ ಕುರಿತು ರೈತರಿಗೆ ಅರಿವು ಮೂಡಿಸುವ ಕಾರ್ಯಗಳಾಗಬೇಕು ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಂಜುನಾಥ್ ಮಾತನಾಡಿ ನಿಗಮ ಮಂಡಳಿಯಲ್ಲಿ ಈ ಹಿಂದೆ ಕೊರೆಯಲಾಗಿದ್ದ ಕೊಳವೆಭಾವಿ ಫಲಾನುಭವಿಗಳಿಗೆ ಪಂಪು ಮೋಟಾರ್ ಇತರೆ ಪರಿಕರಗಳನ್ನು ವಿವರಿಸಲಾಗಿದೆ ನಾನು ಕೆಲ ದಿನಗಳ ಹಿಂದೆಯಷ್ಟೇ ಅಂಬೇಡ್ಕರ್ ನಿಗಮ ಮಂಡಳಿಯ ತುಮಕೂರು ಜಿಲ್ಲಾ ವ್ಯವಸ್ಥಾಪಕನಾಗಿ ಸರ್ಕಾರದಿಂದ ನೇಮಿಸಲ್ಪಟ್ಟಿದು ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಣೆ ಮಾಡಲು ಬಯಸುತ್ತೇನೆ ಜಿಲ್ಲೆಯ ಭೌಗೋಳಿಕ ವ್ಯಾಪ್ತಿಯ ಎಲ್ಲಾ ತಾಲ್ಲೂಕಿನಿಂದ ಅರ್ಜಿ ಸಲ್ಲಿಸಿದ ಅರ್ಹತೆಯುಳ್ಳ ಫಲಾನುಭವಿಗಳಿಗೆ ನ್ಯಾಯ ಸಮ್ಮತವಾಗಿ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸುತ್ತೇನೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಭೋವಿ ಅಭಿವೃದ್ಧಿ ನಿಗಮ ಅಲೆಮಾರಿ ಅಲೆ ಅಲೆಮಾರಿ ಅಭಿವೃದ್ಧಿ ನಿಗಮ ಸಪಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ಅರ್ಜಿಸಲ್ಲಿಸುವ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ಕರ್ತವ್ಯ ಮಾಡುತ್ತೇನೆ ನಮ್ಮ ನಿಗಮ ವ್ಯಾಪಿಗೆ ಬರುವವರಿಗೆ ಅನೇಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದ್ದು ನೇರಸಾಲ ಉದ್ಯಮ ಶೀಲತೆ ಸೇರಿದಂತೆ ಇತರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಗಂಗಾ ಕಲ್ಯಾಣ ಕೊಳವೆ ಬಾವಿ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ವೇಳೆ ಗುಬ್ಬಿ ತಾಲ್ಲೂಕಿನ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ರೂಪ.ವಿ, ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳು ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.