ತುಮಕೂರು


ಸರ್ಕಾರಿ ಅನುದಾನಿತ ವಸತಿ ಶಾಲೆಯ ಮಕ್ಕಳ ಮೇಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ಪುತ್ರ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಮಲ್ಲಸಂದ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಮಲ್ಲಸಂದ್ರದಲ್ಲಿರುವ ವಿಶ್ವಭಾರತಿ ಸರ್ಕಾರಿ ಅನುದಾನಿತ ವಸತಿ ಶಾಲೆಯಲ್ಲಿ ಈ ಘಟನೆ ಸೋಮವಾರ ರಾತ್ರಿ 10 ಗಂಟೆಯಲ್ಲಿ ನಡೆದಿದ್ದರೂ ಸಹ ಮಾಹಿತಿ ಮಾತ್ರ ಬಹಿರಂಗಗೊಂಡಿರಲಿಲ್ಲ.
ವಿಶ್ವಭಾರತಿ ವಸತಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್. ಮೂರ್ತಿ ಎಂಬುವರ ಪುತ್ರ ಭರತ್ ಎಂಬಾತ ವಸತಿ ಶಾಲೆಗೆ ಸೋಮವಾರ ರಾತ್ರಿ 10 ಗಂಟೆ ಸಮಯದಲ್ಲಿ ಹೋಗಿ ಇಷ್ಟು ಬೇಗ ಮಲಗಿದ್ದೀರಾ, ಓದಿಕೊಳ್ಳುವುದಿಲ್ವಾ ಎಂದು ಹೇಳಿ ಕುಡಿದ ಅಮಲಿನಲ್ಲ ಸುಮಾರು 40 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ್ ಮತ್ತು ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಘಟನೆ ನಡೆದು 4 ದಿನ ಕಳೆದಿದ್ದರೂ ಸಹ ಶಾಲಾ ಆಡಳಿತ ಮಂಡಳಿ ಈ ವಿಚಾರವನ್ನು ಯಾವುದೇ ಅಧಿಕಾರಿಗಳಿಗಾಗಲೀ, ಪೆÇೀಷಕರಿಗಾಗಲೀ ತಿಳಿಸದೆ ಮುಚ್ಚಿಟ್ಟಿದ್ದರು.
ಮಕ್ಕಳು ದಮ್ಮಯ ಅಂದ್ರೂ ಬಿಟ್ಟಿಲ್ಲ, ಕಾಲಿಗೆ ಬಿದ್ರೂ ಬಿಟ್ಟಿಲ್ಲ ಎಣ್ಣೆ ನಷೆ ಕಡಿಮೆ ಆಗುವವರೆಗೂ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಹಲ್ಲೆಗೊಳಗಾದ ಮಕ್ಕಳು ಮೂರು ದಿನವಾದರೂ ನೋವು ಕಡಿಮೆಯಾಗದಿದ್ದರಿಂದ ತಮ್ಮ ತಮ್ಮ ಪೆÇೀಷಕರಿಗೆ ಈ ವಿಚಾರ ತಿಳಿಸಿದ್ದಾರೆ. ತಕ್ಷಣ ರಾತ್ರೋರಾತ್ರಿಯೇ ಓಡಿ ಬಂದಿರುವ ಪೆÇೀಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಸುದ್ದಿ ಬಹಿರಂಗಗೊಳ್ಳುತ್ತಿದ್ದೆಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ನಂಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ಅವರು ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಚಿಕಿತ್ಸೆ ಕೊಡಿಸಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿ ಪೆÇೀಷಕರೊಂದಿಗೆ ಭರತ್ ವಿರುದ್ಧ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿಯ ವರೆಗೂ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಎಸ್ಸಿ, ಎಸ್ಟಿ ಮಕ್ಕಳಿಗೆ ಈ ಶಾಲೆಯಲ್ಲಿ ಸಂಪೂರ್ಣ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ವಸತಿ ಸೇರಿದಂತೆ ಎಲ್ಲಾ ಮೂಲ ಸೌಕರ್ಯವನ್ನು ಶಾಲಾ ಆಡಳಿತ ಮಂಡಳಿ ಒದಗಿಸಿದ್ದು, ಒಟ್ಟು 110 ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಭರತ ಹೇಳಿದ ಕೆಲಸವನ್ನು ಮಕ್ಕಳ ಮಾಡಬೇಕು. ಇಲ್ಲದಿದ್ದರೆ ಮಕ್ಕಳಿಗೆ ರಾತ್ರಿ ವೇಳೆ ನರಕದರ್ಶನ. ಕಾಯಿ ಕೀಳಿಸುವುದು, ಕಾರು ತೊಳೆಸುವುದು, ತೋಟದಲ್ಲಿ ಕೆಲಸವನ್ನು ಈ ಭರತ್ ಮಾಡಿಸುತ್ತಾನೆ ಎಂದು ವಿದ್ಯಾರ್ಥಿಗಳು ಪೆÇೀಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಭರತ್ ತಲೆಮರೆಸಿಕೊಂಡಿದ್ದು, ಈತ ಪತ್ತೆಗಾಗಿ ಗ್ರಾಮಾಂತರ ಪೆÇಲೀಸರು ತೀವ್ರ ಶೋಧನಡೆಸಿದ್ದಾರೆ.

(Visited 2 times, 1 visits today)