ತುಮಕೂರು
ಕುಣಿಗಲ್ ತಾಲೂಕಿನ ಸ್ಟಡ್ ಫಾರಂನ ಕುದುರೆಗಳು ವಿಶ್ವವಿಖ್ಯಾತ. ಈ ಸ್ಟಡ್ ಫಾರಂ ರಾಜ್ಯದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೊಯ್ದಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.
ಅವರು ಇಂದು ಕುಣಿಗಲ್‍ನ ಕುದುರೆ ಫಾರಂಗೆ ಭೇಟಿ ನೀಡಿ ಸ್ಟಡ್ ಫಾರಂ ವಿವಿಧ ತಳಿಯ ಕುದುರೆಗಳು, ಕುದುರೆಗಳಿಗೆ ನೀಡುವ ಪೌಷ್ಟಿಕ ಆಹಾರ, ಕುಡಿಯಲು ಶುದ್ಧ ನೀರು ವ್ಯವಸ್ಥೆ, ಸಾಕಾಣಿಕೆ ವಿಧಾನಗಳ ಪರಿಶೀಲನೆ ನಡೆಸಿ, ಮಾತನಾಡಿದರು.
ಇದೇ ಮೊದಲ ಬಾರಿಗೆ ಸ್ಟಡ್ ಫಾರಂಗೆ ಆಗಮಿಸಿದ ಸಚಿವರು ಕುದುರೆ ಫಾರಂ ವೀಕ್ಷಿಸಿ ಕುಣಿಗಲ್ ಸ್ಟಡ್ ಫಾರ್ಮ್ 240 ವರ್ಷಗಳಿಂದ ವಿಶ್ವದ ಅತ್ಯಂತ ಹಳೆಯ ಕುದುರೆ ತಳಿ ಕೇಂದ್ರವಾಗಿದ್ದು, ಪುರಾತನವಾದ ನರಸಿಂಹ ದೇವರ ದೇವಾಲಯ ಒಳಗೊಂಡಿದೆ, ಹಿಂದಿನ ಮೈಸೂರು ರಾಜ್ಯದ ಉಸ್ತುವಾರಿಯಲ್ಲಿ ಅಶ್ವ ಸಂವರ್ಧನಾ ಕೇಂದ್ರವಾಗಿ ಮುಂದುವರೆಯಿತು ನಂತರ ಕರ್ನಾಟಕ ಸರ್ಕಾರವು ಅಶ್ವದಳ ಮತ್ತು ಮೌಂಟೆಡ್ ಪೆÇೀಲಿಸ್ಗಾಗಿ ಕುದುರೆಗಳನ್ನು ಸಾಕಲು ಪ್ರಾರಂಭಿಸಿತು. ಸ್ಟಡ್ ಫಾರಂನ ಪರಿಶೀಲನೆಗಾಗಿ ಬಂದಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕುಣಿಗಲ್ ಸ್ಟಡ್ ಫಾರ್ವರ್ಡ್ ಕುದುರೆ ಫಾರಂನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ಕೆಲಸದ ಭದ್ರತೆಯ ಬಗ್ಗೆ ಮನವಿ ಪತ್ರವನ್ನು ಸಚಿವರಿಗೆ ನೀಡಿದರು. ಮನವಿ ಪತ್ರ ಸ್ವೀಕರಿಸಿದ ಸಚಿವರು ಕಾರ್ಮಿಕರು ಆತಂಕಗೊಳ್ಳುವುದು ಬೇಡ, ಕುದುರೆ ಫಾರಂ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ಚರ್ಚಿಸಿಲಾಗುವುದು, ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲಿದೆ ಎಂದರು.
ಅಂತರಾಷ್ಟ್ರೀಯ ಹಾಗೂ ದೇಶಿಯ ವಿವಿಧ ತಳಿಯ ಕುದುರೆಗಳನ್ನು ವೀಕ್ಷಿಸಿದ ಸಚಿವರು ಅಲ್ಲಿನ ಸಿಬ್ಬಂದಿಗಳು ತಂದುಕೊಟ್ಟ ಕುದುರೆಗೆ ಪ್ರಿಯವಾದ ಲೂಸನ್(ಕುದುರೆ ಮಸಾಲೆ ಸೊಪ್ಪು) ತಾವೇ ಕೈಯಾರ ಕುದುರೆಗಳಿಗೆ ತಿನ್ನಿಸಿ ಮೆಚ್ಚುಗೆ ವ್ಯಕ್ತಪಡಿಸಿರು.
ಪತ್ರಕರ್ತದೊಂದಿಗೆ ಮಾತನಾಡುತ್ತಾ 400 ಪಶು ವೈದ್ಯರನ್ನು ಈಗಾಗಲೇ ಆಯ್ಕೆ ಮಾಡಿಕೊಂಡಿದ್ದು, ಆದರೆ ಕೆಲವರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗಿರುವುದರಿಂದ ವೈದ್ಯರ ಕೊರತೆ ಉಂಟಾಗಿದೆ, ನ್ಯಾಯಾಲಯದಲ್ಲಿ ಇತ್ಯರ್ಥವಾದ ತಕ್ಷಣ ಈ ಸಮಸ್ಯೆ ಬಗೆಹರಿಯಲಿದೆ, ಪಶುಗಳಲ್ಲಿ ಕಾಣುತ್ತಿರುವ ಗಂಟು ರೋಗದ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರತಿ ಕ್ಷೇತ್ರದಲ್ಲಿಯೂ ಉಪನಿರ್ದೇಶಕರುಗಳು ಜವಾಬ್ದಾರಿ ಹೊತ್ತಿದ್ದು, ನಾನು ಇಲಾಖೆಯ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ತಕ್ಷಣ ಮುಖ್ಯಮಂತ್ರಿಗಳು 13 ಕೋಟಿ ರೂ. ಬಿಡುಗಡೆ ಮಾಡಿದ್ದರಿಂದ ವ್ಯಾಕ್ಸಿಲೇಷನ್ ಸಮಸ್ಯೆ ಹಾಗೂ ರೈತರ ಪರಿಹಾರದ ಕೊರತೆ ನಿವಾರಣೆಯಾಯಿತು, ಜಾನುವಾರುಗಳಲ್ಲಿ ಚರ್ಮ ಗಂಟು ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದಲ್ಲಿ ಅವುಗಳು ಮರಣ ಹೊಂದುವುದನ್ನು ತಪ್ಪಿಸಬಹುದು ಚರ್ಮ ಗಂಟು ರೋಗದಿಂದ ಮೃತಪಟ್ಟಿರುವ ಪ್ರತಿ ರಾಸುಗಳಿಗೆ ತಲಾ 20,000, ಎತ್ತುಗಳಿಗೆ ತಲಾ 30,000 ಮತ್ತು ಕರುಗಳಿಗೆ ತಲಾ 5,000 ಪರಿಹಾರ ನೀಡಲಾಗುತ್ತಿದ್ದು, ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ, ಗಂಟು ರೋಗ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ, ಇಲಾಖೆಗೆ ಸಂಬಂಧಿಸಿದ ಮಾಹಿತಿ ಮತ್ತು ಜಾನುವಾರು ಆರೋಗ್ಯಕ್ಕೆ ಸಂಬಂಧಿಸಿದಂತೆ ಏನಾದರೂ ಮಾಹಿತಿ ಮತ್ತು ಸೇವೆ ಬೇಕಿದ್ದರೆ ಸಹಾಯವಾಣಿ ಕೇಂದ್ರ 1962 ಅಥವಾ 8277100200 ಗೆ ಸಂಪರ್ಕಿಸಬೇಕು. ಅನಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ತಕ್ಷಣ ನಂಬದೇ ಸಹಾಯವಾಣಿ ಕೇಂದ್ರ ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬೇಕು ಎಲ್ಲಾ ರೈತ ಭಾಂದವರು ಮತ್ತು ಹೈನುಗಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದರು, ಎಲ್ಲಾ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ, ಸಮಸ್ಯೆಯನ್ನು ಚರ್ಚೆ ಮಾಡದೆ ಅಧಿಕಾರವಿದ್ದಾಗ ಪರಿಹಾರದ ಭಾಗವಾಗಿ ನಾವು ಕೆಲಸ ಮಾಡಬೇಕು. ಸಮಸ್ಯೆಗಳನ್ನು ಹಾಗೆಯೇ ಬಿಟ್ಟರೆ ಅದು ಉತ್ತಮ ಆಡಳಿತಗಾರರ ಲಕ್ಷಣವಲ್ಲ. ಬಹಳ ವರ್ಷಗಳಿಂದ ಆಗದೇ ಇರುವಂಥ ಹಲವಾರು ತೀರ್ಮಾನಗಳನ್ನು ಕೈಗೊಂಡಿದ್ದೇನೆ’ ಎಂದು ರಾಜ್ಯ ಪಶು ಸಂಗೋಪನ ಇಲಾಖೆಯ ಸಚಿವ ಪ್ರಭು ಬಿ. ಚೌವ್ಹಾಣ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಶು ಸಂಗೋಪನ ಇಲಾಖೆಯ ಉಪ ನಿರ್ದೇಶಕರಾದ ಡಾ. ಜಯಣ್ಣ, ಕುದುರೆ ಫಾರಂನ ಆಡಳಿತಾಧಿಕಾರಿ ಗಣೇಶ ಹೆಚ್.ವಿ ತಾಲೂಕು ಸಹಾಯಕ ನಿರ್ದೇಶಕ ಡಾ. ಕೃಷ್ಣಮೂರ್ತಿ, ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂತೋಷ ಕುಮಾರ.ಪಿ ಮುಂತಾದವರು ಉಪಸ್ಥಿತರಿದ್ದರು.