ತುಮಕೂರು

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತಿದ್ದದನ್ನು ಪ್ರಶ್ನಿಸಿದಕ್ಕೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ವರದರಾಜು ಹಲ್ಲೆಗೊಳಗಾದ ಫಾರೆಸ್ಟ್ ಗಾರ್ಡ್ ಎಂದು ತಿಳಿದು ಬಂದಿದೆ. ಡಿ.ಕೊರಟಗೆರೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸುತಿದ್ದ ಗೌರಿಶಂಕರ ಸಹಚರರು ಇದನ್ನು ಪ್ರಶ್ನಿಸಿದ ಅಧಿಕಾರಿಯನ್ನು ತಳ್ಳಿ ನಾವು ಎಂಎಲ್‌ಎ ಕಡೆಯವರು ಎಂದು ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 3ಶಫಿ, ಕುಮಾರ್, ಕೆಆರ್ ಬಸವರಾಜು, ಲಾಯರ್ ಗಂಗರಾಜು, ಸಿರಾಜ್, ಕೆಂಪರಾಜು, ಆಚಾರ್ ಹೊನ್ನಪ್ಪ ರಮೇಶ್ ,ಮಂಜುನಾಥ್ ಕೆಂಪ ಹನುಮಯ್ಯ ಫಾರೆಸ್ಟ್ ಗಾರ್ಡ್ ಮೇಲೆ ಹಲ್ಲೆ ನಡೆಸಿರುವವರು ಎಂದು ತಿಳಿದು ಬಂದಿದೆ. ಸದ್ಯ ಹೆಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
(Visited 1 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp