ತುಮಕೂರು
ನಗರದ ಶ್ರೀಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿ ನಿಯಮಿತದವತಿಯಿಂದ 2022ನೇ ಸಾಲಿನ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕøತರಾದ ಶ್ರೀಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿಯ ಅಧ್ಯಕ್ಷರಾದ ಜಿ.ಮಲ್ಲಿಕಾ ರ್ಜುನಯ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು ಬಿ.ಹೆಚ್.ರಸ್ತೆಯಲ್ಲಿರುವ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿ.ಮಲ್ಲಿಕಾರ್ಜುನಯ್ಯ ಉತ್ತಮ ನಡೆ, ನುಡಿ ಮತ್ತು ದಕ್ಷ ಆಡಳಿತಕ್ಕೆ ಹೆಸರು ವಾಸಿಯಾದವರು. ಹೆಚ್.ಎಂ.ಟಿ.ಯ ನೌಕರರಾಗಿದ್ದ ಕಾಲದಿಂದಲೂ ಅವರನ್ನು ನಾನು ಬಲ್ಲ. ನೇರ ಮತ್ತು ನಿಷ್ಠೂರ ನಡೆ. ಯಾವುದೇ ರಾಜಿಗೆ ಒಳಗಾಗದ ವ್ಯಕ್ತಿ. ಅವರ ಗುರುಕುಲ ಡಿಪಾರ್ಟಮೆಂಟಲ್ ಸ್ಟೋರ್ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸಿತ್ತು.ಗ್ರಾಹಕರ ಮನೆ ಬಾಗಿಲಿಗೆ ಅತ್ಯಂತ ಶುಚಿ ಮತ್ತು ಗುಣಮಟ್ಟದ ಆಹಾರ ಪದಾರ್ಥ ಮತ್ತು ಇತರೆ ಅಗತ್ಯ ವಸ್ತುಗಳನ್ನು ನೀಡುತಿದ್ದಾರೆ.ಇದರ ಬಳಕೆಯನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿ ಆಶೀರ್ವಚನ ನೀಡಿದರು.
ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಜಿ.ಎನ್.ಬಸವರಾಜಪ್ಪ ಮಾತನಾಡಿ,ಸಹಕಾರ ರತ್ನ ಈ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿ.ಎಲೆಮೆರೆಯ ಕಾಯಿಯಂತೆ ಸಹಕಾರಿ ಕ್ಷೇತ್ರದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ದುಡಿದಿದ್ದಾರೆ. ಹಾಗಾಗಿಯೇ ಅವರಿಗೆ ಅರ್ಹವಾಗಿಯೇ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಹಕಾರಿ ಕ್ಷೇತ್ರದ ಜೊತೆಗೆ,ಸಮುದಾಯದ ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ದಿಗೂ ದುಡಿಯುತಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಹಕಾರಿ ರತ್ನ ಪುರಸ್ಕøತ ಜಿ.ಮಲ್ಲಿಕಾರ್ಜುನಯ್ಯ ಮಾತನಾಡಿದರು. ಎಂ.ಬಿ.ನಂದೀಶ್ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕøತ ಜಿ.ಮಲ್ಲಿಕಾರ್ಜುನಯ್ಯ
ಮತ್ತು ಅವರ ಪತ್ನಿ ಉಮಾದೇವಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ವಿವಿದೋದ್ದೇಶ ಸೌಹಾರ್ಧ ಸಹಕಾರಿಯ ಉಪಾಧ್ಯಕ್ಷ ಜೆ.ರಾಜಶೇಖರಯ್ಯ ವಹಿಸಿದ್ದರು.ಸಂಸ್ಥೆಯ ಪ್ರಭಾರ ಸಿಇಓ ಜಿ.ಎಸ್.ಶಶಿಕುಮಾರ್
ಇನ್ನಿತರು ಉಪಸ್ಥಿತರಿದ್ದರು.
(Visited 1 times, 1 visits today)