ತುಮಕೂರು


ಬಿಜೆಪಿಯ ಪದಾಧಿಕಾರಿಗಳು, ಪ್ರಮುಖರು ಜಾತಿ, ವರ್ಗ ಎಂಬ ಭಾವನೆ ಬಿಟ್ಟು ದೇಶ, ಪಕ್ಷ ಎನ್ನೋಣ. ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿ, ವಿವಿಧ ವಿಚಾರ ವಿಷಯಗಳ ಬಗ್ಗೆ ತಿಳಿದರೆ, ಜಾತಿ-ಅಧಿಕಾರದ ಅಮಲಿನಿಂದ ದೂರವಾಗಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಹೇಳಿದರು.
ಇವರು ಬಿಜೆಪಿ ತುಮಕೂರು-ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಪ್ರಶಿಕ್ಷಣ ವರ್ಗ ಕೊರಟಗೆರೆ ತಾಲ್ಲೂಕು ಚಿಕ್ಕತೊಟ್ಲುಕೆರೆ ಅಟವಿ ಮಠದಲ್ಲಿ (ನಿನ್ನೆ ಸಂಜೆ) ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಾರ್ಯಕರ್ತರು ತಮ್ಮ ನಡೆ,ನುಡಿ,ಆಚಾರ, ವಿಚಾರಗಳ ಮೂಲಕ ಜನತೆಯ ಕಷ್ಟ-ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕು. ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಬೇಕು. ಪಕ್ಷದ ಹಿರಿಯರು, ಸಾಮಾನ್ಯರ ಕಾಳಜಿ ಬಗ್ಗೆ ಗೌರವಿಸಬೇಕಾಗಿದ್ದು, ಕಾರ್ಯಕರ್ತರು ಜನರು ಬಯಸುವ ವ್ಯಕ್ತಿಗಳಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ
ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದ್ದು, ವಿಚಾರ-ವಿಷಯ ಆಧಾರಿತದಲ್ಲಿ ಪಕ್ಷ ಸಂಘಟನೆ, ಬಲವರ್ದನೆಗೆ ಪ್ರತಿವರ್ಷ ನಡೆಯುವ ಪ್ರಶಿಕ್ಷಣದಲ್ಲಿ ಎಲ್ಲಾ ಮೋರ್ಚಾದ ಪ್ರಮುಖರು ಭಾಗವಹಿಸಬೇಕೆಂದು ಎಂ.ಬಿ.ನಂದೀಶ್ ವಿನಂತಿಸಿದರು.
ಭಾರತ ಸರ್ವಧರ್ಮಗಳ ಸಮ್ಮೀಳಿನದÀ ದೇಶವಾಗಿದ್ದು, ಹಿಂದೂ, ಯೋಗ, ಗುರುವರ್ಯರ ಆಚಾರ-ವಿಚಾರ- ಗೌರವಿಸುವ ಪದ್ದತಿಗಳಿಗೆ ವಿಶ್ವದಲ್ಲೇ ಅಗ್ರಗಣ್ಯ ಮಾನ್ಯತೆ ಪಡೆದಿದೆ. ಪ್ರಧಾನಿ ನರೇಂದ್ರಮೋದಿಯವರ ಜನಪರ ಯೋಜನೆ, ಯೋಚನೆಗಳಿಂದ ವಿಶ್ವದ ದೊಡ್ಡಣ್ಣ ಅಮೇರಿಕಾ ಮುಂತಾದ ದೇಶಗಳನ್ನೂ ಮೀರಿ ಬೆಳೆದು, ವಿಶ್ವಗುರುವಾಗುವ ಹತ್ತಿರವಿದ್ದೇವೆಂದರು.
ಬಿಜೆಪಿ ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಾವಣಗೆರೆ ವಿಭಾಗ ಪ್ರಭಾರಿ ಕೆ.ಎಸ್.ನವೀನ್, ಈ ಪ್ರಶಿಕ್ಷಣ ವರ್ಗದ ಅಧ್ಯಕ್ಷತೆಯನ್ನು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ವೇದಿಕೆಯಲ್ಲಿ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿ ಹಾಗೂ ತುಮಕೂರು ವಿಭಾಗ ಪ್ರಭಾರಿ ಮಂಜುಳಾ, ತುಮಕೂರು ಜಿಲ್ಲಾ ಪ್ರಭಾರಿ ಟಿ.ಜೆ.ನರೇಂದ್ರನಾಥ್, ತುಮಕೂರು ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್‍ಹೆಬ್ಬಾಕ, ರೈತಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್‍ಬಾಬು, ಮಧುಗಿರಿ ಜಿಲ್ಲಾ ರೈತಮೋರ್ಚಾ ಜಿಲ್ಲಾಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ, ಮಧುಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರೈತಮೋರ್ಚಾ ಪ್ರಭಾರಿ ಟಿ.ಡಿ.ತಿಮ್ಮಜ್ಜ ಉಪಸ್ಥಿತರಿದ್ದರು.

(Visited 6 times, 1 visits today)