ತುಮಕೂರು


ಚದುರಂಗ, ಶತ್‍ರಂಜ್ ಎಂದು ಕರೆಯಲ್ಪಡುವ ಚೆಸ್ ಆಟ ಭಾರತೀಯ ಮೂಲದ್ದು,ಆ ನಂತರ ಅದು ಬ್ರಿಟಿಷರ ಮೂಲಕ ವಿಶ್ವಕ್ಕೆ ಪರಿಚಯವಾಯಿತು ಎಂದು ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದಜೀ ತಿಳಿಸಿದರು.
ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಅಡಿಟೋರಿಯಂನಲ್ಲಿ ನ್ಯೂ ತುಮಕೂರು ಡಿಸ್ಟ್ರಿಕ್ ಚೆಸ್ ಅಸೋಸಿಯೇಷನ್ ಮತ್ತು ಎಂ.ಎಂ.ಚೆಸ್ ಡೆವಲಪ್‍ಮೆಂಟ್ ಟ್ರಸ್ಟ್, ಚೆಸ್ ಫೆಡರೇಷನ್ ಅಫ್ ಪಿಸಿಕಲಿ ಡಿಸೆಬಲ್ಡ್(ಸಿ.ಎಫ್.ಪಿ.ಡಿ.) ಅವರ ಸಹಯೋಗದಲ್ಲಿ ಆಯೋಜಸಿದ್ದ 3ನೇ ರಾಷ್ಟ್ರೀಯ ವಿಶೇಷಚೇತನರ ಚೆಸ್ ಚಾಂಪಿಯನ್‍ಶಿಪ್-2022 ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಗತಿ ಸಂಪಾದಕ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ಸದಸ್ಯ ಎಸ್.ನಾಗಣ್ಣ ಮಾತನಾಡಿ,2018ರಲ್ಲಿ ನಗರದ ಬಂಡಿಮನೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 7 ವರ್ಷದ ಒಳಗಿನ ಚೆಸ್ ಚಾಂಪಿಯನ್ ಕ್ರೀಡಾಕೂಟ ವಿಶೇಷಚೇತನರ ಪಂದ್ಯಾವಳಿ ಆಯೋಜನೆಗೆ ಪ್ರೇರಣೆ. ಮಧುಕರ್ ಮತ್ತು ಅವರ ತಂಡ ಹಾಗೂ ಆನಂದಬಾಬು ಮತ್ತು ತಂಡದ ಅವಿರತ ಶ್ರಮದ ಫಲವಾಗಿ ನಾಲ್ಕು ದಿನಗಳ ಈ ಚಾಂಪಿಯನ್‍ಶಿಫ್ ಆಯೋಜನೆಗೊಂಡಿದೆ. ಜೀವನವೂ ಒಂದು ರೀತಿ ಚೆಸ್ ಆಟವಿದ್ದಂತೆ, ರಣರಂಗದಲ್ಲಿ ಅನುಸರಿಸುವ ತಂತ್ರಗಾರಿಕೆಯನ್ನೇ ಕಡೆಯವರೆಗೂ ಅನುಸರಿಸಬೇಕಾಗುತ್ತದೆ ಎಂದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಚೆಸ್ ತಾಂತ್ರಿಕ ಆಟವಾದರೂ ಹೆಚ್ಚು ತಾಳ್ಮೆಯನ್ನು ಬೇಡುತ್ತದೆ.ಇಂತಹ ಒಂದು ಕ್ರೀಡಾಕೂಟ ನಡೆಯುತ್ತಿರುವುದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಚಾರ. ರಾಷ್ಟ್ರದ ವಿವಿಧೆಡೆಯಿಂದ ಆಗಮಿಸಿರುವ ಆಟಗಾರರು ನಡೆದಾಡುವ ದೇವರೆಂದೆ ಕರೆಯಲ್ಪಡುತ್ತಿದ್ದಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಲಿಂಗೈಕ್ಯ ಸ್ಥಳ ಸಿದ್ಧಗಂಗೆ ಸೇರಿದಂತೆ ತುಮಕೂರು ಸುತ್ತಮುತ್ತಲ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸುವಂತೆ ಸಲಹೆಯಿತ್ತರು.
ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿ,ದೇಶದ 16 ರಾಜ್ಯಗಳಿಂದ ನೂರಾರು ವಿಕಲಚೇತನ ಚೆಸ್ ಆಟಗಾರರು ಇಲ್ಲಿ ಪಾಲ್ಗೊಂಡಿ ದ್ದಾರೆ.ವಿಲ್ಹ್ ಚೇರ್ ಮತ್ತು ಸಾಮಾನ್ಯ ಎಂಬ ಎರಡು ವಿಭಾಗಗಳಿವೆ.ನಿಯಮದಂತೆ 9 ರೌಂಡ್‍ಗಳ ಆಟದ ನಂತರ ಗಳಿಸುವ ಅಂಕಗಳನ್ನು ಆಧರಿಸಿ,ವಿಜೇತರನ್ನು ಘೋಷಿಸಲಾಗುವುದು.ಇಲ್ಲಿನ ವಿಜೇತರು ವಿಶ್ವ ವಿಕಲಚೇತನ ಚೆಸ್ ಚಾಂಪಿಯನ್ ಶಿಫ್‍ನಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿದ್ದಾರೆ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿದರು.
ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ ವಿಶೇಷ ಚೇತನರ ಈ ಪಂದ್ಯಾವಳಿ ತುಮಕೂರಿಗೆ ಹೆಮ್ಮೆಯ ಗರಿ ಮೂಡಿಸಿದೆ ಎಂದರು.
ವೇದಿಕೆಯಲ್ಲಿ ಡಾ.ರಮಣ ಹುಲಿನಾಯ್ಕರ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್‍ಕುಮಾರ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಅರವಿಂದ ಶಾಸ್ತ್ರಿ,ನ್ಯೂ ತುಮಕೂರು ಚೆಸ್ ಅಸೋಸಿಯೇಷನ್‍ನ ಉಪಾಧ್ಯಕ್ಷರಾದ ಕಿರಣ್‍ಮೋರಸ್, ಅಖಿಲಾನಂದ,ಎಸ್., ಕಾರ್ಯದರ್ಶಿ ಮಾಧುರಿ, ಖಜಾಂಚಿ ಶ್ರೀನಿವಾಸ್ ಉಪಸ್ಥಿತರಿದ್ದರು. ತುಮಕೂರಿನ ಎಂ.ಜಿ.ರಸ್ತೆಯ ಮಾನಸ ಬುದ್ದಿಮಾಂದ್ಯ ಶಾಲೆ ಮಕ್ಕಳು ಸಿದ್ಧಗಂಗಾ ಶ್ರೀಗಳ ಕುರಿತಂತೆ ನಡೆಸಿಕೊಟ್ಟ ನೃತ್ಯರೂಪಕ ಸಭಿಕರ ಮೆಚ್ಚುಗೆಗಳಿಸಿತು. ಪದ್ಮಜ ನಿರೂಪಿಸಿದರು.

(Visited 3 times, 1 visits today)