ತುಮಕೂರು
ಸಂಸ್ಕಾರದ ಚೌಕಟ್ಟಿನಲ್ಲಿ ಪ್ರತಿಭೆಯನ್ನು ಪೋಷಿಸಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಪ್ರಶಾಂತ ನಾಯಕ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಕಲ್ಪತರು ಉತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸಂಸ್ಕಾರವಿಲ್ಲದ ಪ್ರತಿಭೆಗೆ ಮೌಲ್ಯವಿಲ್ಲ. ಬೌದ್ಧಿಕತೆಯಿಲ್ಲದ ಸೌಂದರ್ಯಕ್ಕೆ ಬೆಲೆಯಿಲ್ಲ ಎಂದರು.
ಬದುಕಿನಲ್ಲಿ ಮನುಷ್ಯ ಸಂಬಂಧಗಳು ತುಂಬ ಮುಖ್ಯ. ಅವುಗಳನ್ನು ಉಳಿಸಿ ಬೆಳೆಸುತ್ತಾ ದೇಶದ ಸಂಸ್ಕøತಿಯನ್ನು ಎತ್ತಿಹಿಡಿಯಬೇಕು. ಭಾರತದ ಯುವ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸುವಂತೆ ನಮ್ಮ ನಾಗರಿಕರನ್ನು ಉತ್ತೇಜಿಸಬೇಕು. ಯುವಕರೇ ಈ ದೇಶದ ಭವಿಷ್ಯ ಎಂದರು.
ಮಕ್ಕಳಲ್ಲಿ ಕೇವಲ ಅಂಕಗಳ ವ್ಯಾಮೋಹವನ್ನು ಹೆಚ್ಚಿಸದೆ ಕುವೆಂಪು ಅವರನ್ನು ವಿಶ್ವಮಾನವರನ್ನಾಗಿಸುವತ್ತ ಬೌದ್ಧಿಕವಾಗಿ ಸಶಕ್ತಗೊಳಿಸಬೇಕು. ಅದಕ್ಕೆ ಕಲ್ಪತರು ಉತ್ಸವದಂತಹ ಕಾರ್ಯಕ್ರಮಗಳು ವೇದಿಕೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿತ್ರನಟಿ ಹರ್ಷಿಕಾ ಪೂಣಚ್ಚ ಅವರು ಕಲಾಪೆÇೀಷಕರು ಹೆಚ್ಚಿರುವ ತುಮಕೂರು ನನಗೆ ತುಂಬಾ ಪ್ರಿಯವಾದ ಸ್ಥಳ ಎಂದರು.
ವಿದ್ಯಾರ್ಥಿಗಳು ಗುರುಗಳನ್ನು ಮನಸಾರೆ ಗೌರವಿಸಬೇಕು. ಅದು ಇಡೀ ಬದುಕಿನ ಯಶಸ್ಸಿಗೆ ದಾರಿದೀಪವಾಗುತ್ತದೆ. ನಾನು ವಿದ್ಯಾರ್ಥಿನಿಯಾಗಿದ್ದಾಗ ಗುರುಗಳು ಪೆÇ್ರೀತ್ಸಾಹ ನೀಡಿದ್ದರಿಂದಲೇ ಶೈಕ್ಷಣಿಕವಾಗಿ ಹಾಗೂ ಕಲಾವಿದೆಯಾಗಿ ಬೆಳವಣಿಗೆ ಹೊಂದಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ವಿದ್ಯಾರ್ಥಿಗಳ ಸಾಂಸ್ಕøತಿಕ ಹಾಗೂ ಸಾಹಿತ್ಯಕ ಬೆಳವಣಿಗೆಗಾಗಿ ಕಲ್ಪತರು ಉತ್ಸವ ಆರಂಭಿಸಲಾಗಿದೆ. ಈ ಹಂತದಿಂದ ರಾಷ್ಟ್ರಮಟ್ಟದ ಸ್ಪರ್ಧೆಗಳವರೆಗೆ ವಿದ್ಯಾರ್ಥಿಗಳು ಬೆಳೆಯಬೇಕು. ಇದು ಪ್ರತಿವರ್ಷ ನಡೆಯಲಿದೆ ಎಂದರು.
ಕಾರ್ಯಕ್ರಮದ ಸಂಯೋಜಕ ಪ್ರೊ. ಬಿ. ರಮೇಶ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಪೆÇ್ರ. ಪಿ. ಪರಮಶಿವಯ್ಯ ವಂದಿಸಿದರು. ಕುಲಸಚಿವ ಪೆÇ್ರ. ಕೆ. ಶಿವಚಿತ್ತಪ್ಪ, ಮೌಲ್ಯಮಾಪನ ಕುಲಸಚಿವ ಪೆÇ್ರ. ನಿರ್ಮಲ್ ರಾಜು, ಸಿಂಡಿಕೇಟ್ ಸದಸ್ಯರಾದ ಭಾಗ್ಯಲಕ್ಷ್ಮಿ ಹಿರೇಂದ್ರ ಷಾ, ರಾಜು, ಸುನಿಲ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ತುಮಕೂರು ವಿವಿ ವ್ಯಾಪ್ತಿಯ 40ಕ್ಕೂ ಹೆಚ್ಚು ಪದವಿ ಕಾಲೇಜುಗಳ ಕಲಾತಂಡಗಳು ಉತ್ಸವದಲ್ಲಿ ಪಾಲ್ಗೊಂಡವು. ಸಂಗೀತ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದ್ಯ (ಚರ್ಮವಾದ್ಯ) ಶಾಸ್ತ್ರೀಯ ತಂತಿವಾದ್ಯ, ಲಘು ಸಂಗೀತ (ಭಾರತೀಯ), ಪಾಶ್ಚಾತ್ಯ ಸಂಗೀತ, ಸಮೂಹ ಗಾಯನ (ಭಾರತೀಯ ಮತ್ತು ಪಾಶ್ಚಾತ್ಯ); ನೃತ್ಯ ವಿಭಾಗದಲ್ಲಿ ಜಾನಪದ/ಬುಡಕಟ್ಟು ನೃತ್ಯ ಮತ್ತು ಶಾಸ್ತ್ರೀಯ ನೃತ್ಯ, ಸಾಹಿತ್ಯ ವಿಭಾಗದಲ್ಲಿ ರಸಪ್ರಶ್ನೆ, ಆಶುಭಾಷಣ ಮತ್ತು ಚರ್ಚಾಸ್ಪರ್ಧೆ, ರಂಗಭೂಮಿ ವಿಭಾಗದಲ್ಲಿ ಏಕಾಂಕ ನಾಟಕ, ಕಿರುನಾಟಕ, ಮೂಕಾಭಿನಯ ಮತ್ತು ಅನುಕರಣೆ, ಲಲಿತ ಕಲೆ ವಿಭಾಗದಲ್ಲಿ ಸ್ಥಳದಲ್ಲೇ ಚಿತ್ರ ಬರೆಯುವುದು, ಕೊಲಾಜ್, ಬಿತ್ತಿ ಚಿತ್ರ ತಯಾರಿಸುವುದು, ಜೇಡಿಮಣ್ಣಿನಲ್ಲಿ ಆಕೃತಿ ರಚನೆ, ವ್ಯಂಗ್ಯ ಚಿತ್ರ, ರಂಗೋಲಿ ಮತ್ತು ಛಾಯಾಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.