ತುಮಕೂರು


ಕ್ರೀಡೆಗಳು ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ತಂದುಕೊಡುತ್ತವೆ ಎಂದು ಹಿರಿಯ ಸಾಹಿತಿ ಹಾಗೂ ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಕುಮಾರಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಸ್.ಐ.ಟಿ. ಬಡಾವಣೆಯ ವಾಸವಿ ಶಾಲೆಯ ಆವರಣದಲ್ಲಿ ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ 26ನೇ ವಾರ್ಡಿನ ಕನ್ನಡ ರಾಜೋತ್ಸವ ಆಚರಣಾ ಸಮಿತಿ ಜಂಟಿಯಾಗಿ 67ನೇ ಕನ್ನಡ ರಾಜೋತ್ಸವದ ಅಂಗವಾಗಿ ವಾರ್ಡಿನ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಆಯೋಜಿಸಿದ್ದ ವಿವಿಧ ಅಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಾಹಿತಿ ಡಾ.ಶೈಲಾನಾಗರಾಜು ಮಾತನಾಡಿ,26ನೇ ವಾರ್ಡಿನ ಕೌನಿಲರ್ಸ್ ಆದ ಮಲ್ಲಿಕಾರ್ಜುನಯ್ಯ ಅವರು ತಮ್ಮ ವಾರ್ಡಿನ ಸಮಗ್ರ ಅಭಿವೃದ್ದಿಯ ಜೊತೆಗೆ, ವಾರ್ಡಿನ ಜನರಿಗೆ ಉತ್ತಮ ಮನರಂಜನೆಯ ಜೊತೆಗೆ, ಅವರ ಬೌದ್ದಿಕ ವಿಕಾಸಕ್ಕೂ ವೇದಿಕೆ ಕಲ್ಪಿಸುವ ಮೂಲಕ ಇತರೆ ವಾರ್ಡುಗಳಿಗೆ ಮಾದರಿಯಾಗಿದ್ದಾರೆ.ಕನ್ನಡ ರಾಜೋತ್ಸವವನ್ನು ನಿತ್ಸೋತ್ಸವವಾಗಿ ಆಚರಿಸುತಿದ್ದಾರೆ.ಇಂತಹ ಆಚರಣೆಗಳು ಪ್ರತಿ ಮನೆಗಳಲ್ಲಿಯೂ ನಡೆಯುವಂತಾಗಲಿ ಎಂದರು.
ವರದಕ್ಷಿಣೆ ವಿರೋಧಿ ವೇದಿಕೆಯ ಮಹಿಳಾ ಸಾಂತ್ವಾನ ಕೇಂದ್ರದ ಶ್ರೀಮತಿ ಪಾವರ್ತಮ್ಮ ಮಾತನಾಡಿ,ವರದಕ್ಷಿಣೆ ವಿರೋಧಿ ವೇದಿಕೆ ಕೌಟುಂಬಿಕ ಕಲಹಗಳ ಅಪ್ತ ಸಮಾಲೋಚನ ಕೇಂದ್ರವಾಗಿ ಕೆಲಸ ಮಾಡುತಿದ್ದು, ಆ ಮೂಲಕ ಮಹಿಳೆಯರಿಗೆ ಉತ್ತಮ ಮಾರ್ಗದರ್ಶನ ನೀಡಿ,
ಅವರನ್ನು ಸರಿದಾರಿಗೆ ತರುವ ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಂದ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದರು.
ರಾಕ್‍ಲೈನ್ ರವಿಕುಮಾರ್ ಮಾತನಾಡಿ,ಅಭಿವೃದ್ದಿಯ ಜೊತೆಗೆ, ಕಲೆ, ಸಾಹಿತ್ಯ, ಸಂಸ್ಕøತಿಯ ಕಾರ್ಯಕ್ರಮಗಳ ಮೂಲಕ ಒಂದು ಉತ್ತಮ ವಾತಾವರಣ ನಿರ್ಮಾಣ ಮಾಡಿರುವ ಕೌನ್ಸಿಲರ್ ಮಲ್ಲಿಕಾರ್ಜುನಯ್ಯ ಅಭಿನಂದನಾರ್ಹರು.ಇಂತಹ ವಾತಾವರಣ ನಗರದ ಎಲ್ಲಾ 35 ವಾರ್ಡುಗಳಲ್ಲಿಯೂ ಕಾಣುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಉಮೇಶ್, ಡಾ.ಸಂಜಯನಾಯಕ್, ಹೇಮ ಮಲ್ಲಿಕಾರ್ಜುನಯ್ಯ, ಸಮಿತಿಯ ಈಶ್ವರ್ ಕುಡಿ, ಕಂಚಿಗಾರಾಯಪ್ಪ, ಭಾಗ್ಯ ನಾಗರಾಜು, ರಾಜೇಶ್ವರಿ,ನಟರಾಜು ಮತ್ತಿತರರು ಪಾಲ್ಗೊಂಡಿದ್ದರು.
ಮಹಿಳೆಯರಿಗೆ ರಂಗೋಲಿ,ಸುಗಮ ಸಂಗೀತ,ಮ್ಯೂಸಿಕಲ್ ಚೇರ್,
ಶಾಟ್‍ಪೂಟ್,ಮಕ್ಕಳಿಗೆ ಚಿತ್ರಕಲೆ ಮತ್ತು ಹಿರಿಯ ನಾಗರಿಕರಿಗೆ ಮ್ಯುಸಿಕಲ್ ಚೇರ್ ಇನ್ನಿತರ 26ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

(Visited 1 times, 1 visits today)