ತುಮಕೂರು
ಆನಾರೋಗ್ಯಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿರುವ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ನರಸೇಗೌಡ ಅವರ ನಿವಾಸಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ತುಮಕೂರು ನಗರದ ಜಯನಗರ ಪೂರ್ವದಲ್ಲಿರುವ ಜೆಡಿಎಸ್ ಪಕ್ಷದ ಮಾಜಿ ನಗರಾಧ್ಯಕ್ಷ ಹಾಗೂ ಒಕ್ಕಲಿಗ ಮುಖಂಡ ನರಸೇಗೌಡ ಅವರ ಮನೆಗೆ ಪಕ್ಷದ ಹಿರಿಯ ಮುಖಂಡರೊಂದಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಹೆಚ್.ಡಿ.ಕುಮಾರ ಸ್ವಾಮಿ, ಶೀಘ್ರ ಗುಣಮುಖರಾಗುವಂತೆ ಕೋರಿದರು.
ಈ ವೇಳೆ ನರಸೇಗೌಡರ ಕುಟುಂಬದವರು ಮತ್ತು ಬೆಂಬಲಿಗರ ಮನವಿಯನ್ನು ಆಲಸಿದ ಹೆಚ್.ಡಿ.ಕುಮಾರಸ್ವಾಮಿ,ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನರಸೇಗೌಡರಿಗೆ ಯಾವುದಾದರೂ ನಿಗಮ
ಅಥವಾ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.ಕಳೆದ 20ಕ್ಕು ಹೆಚ್ಚು ವರ್ಷಗಳಿಂದಲೂ ನರಸೇಗೌಡರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಸೇವೆಯನ್ನು ನಾವು ಕಡೆಗಣಿಸುತ್ತಿಲ್ಲ.ಆದರೆ ಕಳೆದ ಎರಡು ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿರುವ ಎನ್.ಗೋವಿಂದರಾಜು ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಬೇಕೆಂಬ ಒಂದೇ ಉದ್ದೇಶದಿಂದ ಅವರಿಗೆ ಈ ಬಾರಿ ಟಿಕೇಟ್ ನೀಡಲಾಗುತ್ತಿದೆ.ನಮ್ಮ ಪಕ್ಷಕ್ಕೆ ಅಧಿಕಾರಕ್ಕೆ ಬರಲಿದೆ.ಈ ಬಾರಿ ನಿರ್ಲಕ್ಷ ಮಾಡದೆ ಅಧಿಕಾರವನ್ನು ಮನೆ ಬಾಗಿಲಿಗೆ ತಂದು ನೀಡುವುದಾಗಿ ನರಸೇಗೌಡರ ಸಹೋದರಿ ಅವರಿಗೆ ಪ್ರಮಾಣ ಮಾಡಿದರು.
ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿವೆ.ನಮ್ಮ ಸಮೀಕ್ಷೆಯ ಪ್ರಕಾರ ಜೆಡಿಎಸ್ ಪಕ್ಷಕ್ಕೆ 75-80 ಸ್ಥಾನ ಬರಲಿದೆ.ನಾನು ಪೂರ್ಣ ಬಹುಮತಕ್ಕಾಗಿ ಮುಂದಿನ ಆರೇಳು ತಿಂಗಳು ಹಗಲಿರುಳು ದುಡಿಯುತ್ತೇನೆ.ಇದರ ಜೊತೆಗೆ ಎಲ್ಲೆಲ್ಲಿ ಪಕ್ಷದಲ್ಲಿ ಅಂತರಿಕ ಭಿನ್ನಾಭಿಪ್ರಾಯಗಳಿವೆಯೋ ಅವುಗಳನ್ನು ಬಗೆಹರಿಸಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಬೇಕಾದ ಎಲ್ಲಾ ರೀತಿಯ ತಂತ್ರಗಾರಿಕೆ ಮಾಡಲು ಸಿದ್ದನಿದ್ದೇನೆ. ಮುಂದಿನ ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಗೊಂದಲ ಇರುವ ಕ್ಷೇತ್ರಗಳ ಆಕಾಂಕ್ಷಿಗಳ ಸಭೆ ಕರೆದು ಚರ್ಚೆ ನಡೆಸಿ, ಸಮಸ್ಯೆಗೆ ಇತೀಶ್ರಿ ಹಾಡಲಾಗುವುದು ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಈ ವೇಳೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ,ಪಕ್ಷದ ಅಭ್ಯರ್ಥಿ ಎನ್.ಗೋವಿಂದರಾಜು,ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ಎಸ್.ಸಿ ವಿಭಾಗದ ಅಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ,ನಗರ ಅಧ್ಯಕ್ಷ ವಿಜಿಗೌಡ,ಮುಖಂಡರಾದ ಕೆಂಪರಾಜು,ಭೈರೇಶ್,ದಾಂಡೇಲಿ ಗಂಗಣ್ಣ,ಪುಟ್ಟೀರಪ್ಪ,ಲಕ್ಷ್ಮಮ್ಮ ವೀರಣ್ಣಗೌಡ,ಯಶೋಧ ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.