ಚಿಕ್ಕನಾಯಕನಹಳ್ಳಿ
ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್ ಅನುಯಾಯಿಗಳು ಹೋರಾಟ ಮಾಡುತ್ತಾ ಬರುತ್ತಿದ್ದಾರೆ ಅವರಿಂದ ಪ್ರೇರಿತನಾಗಿ ನಾನು ಕೂಡ ದೇವಾಲಯ ಪ್ರವೇಶಕ್ಕೆ ಹಾಗೂ ನೀರು ಮುಟ್ಟುವ ಚಳುವಳಿಯಗೆ ಅವರ ಹಾದಿಯನ್ನೇ ಹಿಡಿಯ ಬೇಕಾಗಿತ್ತು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಕುಂದುರ್ನಳ್ಳಿ ತಿಮ್ಮಯ್ಯ ಹೇಳಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ದಿನದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನನ್ನ ಊರಿನಲ್ಲಿಯೂ ಸಹ ನೀರು ಮುಟ್ಟುವಾಗಿರಲಿಲ್ಲ ದೇವಾಲಯ ಪ್ರವೇಶಕ್ಕೆ ಆಹ್ವಾನವಿರಲಿಲ್ಲ ಗೋಕಟ್ಟೆಯನ್ನು ಮುಟ್ಟುವಂತಿರಲಿಲ್ಲ ಎಂದು ಹೇಳುತ್ತಾ ಅಂಬೇಡ್ಕರ್ ಅವರ ಜೀವನ ಚರಿತ್ರೆಯಿಂದ ಪ್ರೇರಿತನಾಗಿ ನಾನು ಕೂಡ ಸ್ವಾಭಿಮಾನಿ ಬದುಕಿಗಾಗಿ ಆತ್ಮ ಗೌರವ ಉಳಿಸಿಕೊಳ್ಳಲು ದೇವಾಲಯ ಪ್ರವೇಶ ಹಾಗೂ ನೀರು ಮುಟ್ಟುವ ಚಳುವಳಿಗೆ ಹೋರಾಟ ಮಾಡಿದೆ ಅದಕ್ಕಾಗಿ ಸವರ್ಣಿಯರಿಂದ ನನ್ನ ಗ್ರಾಮದಲ್ಲಿ ಪೆÇಲೀಸ್ ಠಾಣೆ ಕೂಡ ನಿರ್ಮಾಣವಾಗಿತ್ತು ಆ ಸಂದರ್ಭದಲ್ಲಿ ಅಲ್ಲದೇ ನನ್ನ ಕೊಲೆಗೆ ಸುಪಾರಿ ಕೊಟ್ಟಂತ ದಿನ ಕೂಡ ನಿಗದಿಯಾಗಿತ್ತು ಎಂದರು.
ಅಂಬೇಡ್ಕರ್ ಅವರ ವಿಚಾರಧಾರಿಯಾಗಿ ಸಂಪನ್ಮೂಲನ ವ್ಯಕ್ತಿಯಾಗಿ ಬಿಕೆ ನಾಗಣ್ಣ ಸಮಾರಂಭದಲ್ಲಿ ಮಾತನಾಡುತ್ತಾ ಭಾರತದಲ್ಲಿ ಜಾತಿ ವಿನಾಶ ಆಗಬೇಕು ಪ್ರತಿ ವ್ಯಕ್ತಿಗೂ ಮೂಲಭೂತ ಸೌಕರ್ಯಗಳಲ್ಲಿ ಸಮಾನಾಂತರ ವ್ಯವಸ್ಥೆ ಮೂಲಕ ಅಸಮಾನತೆ ತಾರತಮ್ಯ ನಿವಾರಣೆ ಜಾರಿಗೊಳಿಸಿದರೆ ಮಾತ್ರ ಜಾತಿ ವಿನಾಶ ಆಗಲಿದೆ ಎಂದರು.
ಇತ್ತೀಚೆಗೆ ಹಿಂದುತ್ವ ಎಂಬ ಪದದಿಂದ ದೇಶದಲ್ಲಿ ಅಶಾಂತಿ ಹುಟ್ಟುಹಾಕುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಸುಪ್ರೀಂಕೋರ್ಟ್ ಕೂಡ ಹಿಂದೂ ಧರ್ಮ ಅಲ್ಲವೇ ಅಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಭಗವದ್ಗೀತೆಯಲ್ಲಿ ಅರ್ಜುನನಿಗೆ ಎಲ್ಲವೂ ನಾನೇ ನಿನ್ನ ಸೋದರರನ್ನು ಕೊಲ್ಲು ಎಂದು ಹೇಳುವ ವಿಚಾರ ಹಿಂಸಾ ವಾದಕ್ಕೆ ನಾಂದಿ ಹಾಡಿದಂತೆ ಅಂತಹ ಗ್ರಂಥವನ್ನು ನಾವು ಹೇಗೆ ಒಪ್ಪುವುದು ಹಿಂಸೆಯನ್ನು ಪ್ರತಿಪಾದಿಸಿದಂತೆ ಆಗುತ್ತದೆ ನಾವುಗಳಾರು ಹಿಂಸಾವಾದಿಗಳಲ್ಲ ಅಹಿಂಸಾ ವಾದಿಗಳಾಗಿ ಬೌದ್ಧ ಧರ್ಮವನ್ನೇ ಜನನದಿಂದಲೇ ರೂಡಿಸಿಕೊಂಡಿದ್ದೇವೆ ಎಂದರು.
ಜೀಪಂ ಮಾಜಿ ಸದಸ್ಯ ಲೋಹಿತ ಬಾಯಿ ಮಾತನಾಡುತ್ತಾ ಸಂವಿಧಾನದ ಮೂಲ ಆಶಯ ಸ್ವಾತಂತ್ರ್ಯ ಸಮಾನತೆ ಭಾತೃತ್ವ ಮನೋಭಾವವನ್ನು ಪ್ರತಿ ಪ್ರಜೆಗೂ ಸಿಗುವಂತೆ ಮಾಡುವಲ್ಲಿ ಅಂಬೇಡ್ಕರ್ ಅವರ ಪಾತ್ರ ಬಹಳ ಪ್ರಶಂಸೆ ವಿಷಯವಾಗಿತ್ತು ಎಂದರು.
ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿದರು.
ಸಮಾರಂಭದಲ್ಲಿ ತೀರ್ಥಪುರ ಗ್ರಾಮ ಪಂಚಾಯತಿ ಅಧ್ಯಕ್ಷ ರೇಣುಕಮ್ಮ ಪ್ರಕಾಶ್ ಗೋ ನಿ ವಸಂತ್ ಕುಮಾರ್ ಬೇವಿನಹಳ್ಳಿ ಚನ್ನಬಸವಯ್ಯ ಲೋಹಿತಾಬಾಯಿ ಬಿಕೆ ನಾಗಣ್ಣ ಸಿಂಗಳ್ಳಿ ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.