ಚಾಮರಾಜನಗರ:

      ಹನೂರು ತಾಲೂಕಿನ ಸೂಲವಾಡಿ ಬಿಚ್ಚುಕತ್ತಿ ಮಾರಮ್ಮನ ದೇಗುಲದ ಪ್ರಸಾದ ಸೇವಿಸಿ 7 ಮಂದಿ ಮೃತಪಟ್ಟಿರುವ ಘಟನೆಗೆ ವಿಷ ಪ್ರಾಶನವೇ ಕಾರಣ ಎನ್ನಲಾಗಿದೆ.

      ಗೋಪಿಯಮ್ಮ(35), ಶಾಂತಾ (20). ಪಾಪಣ್ಣ (35), ಅನಿಲ್​ (12), ಅನಿತಾ (14) ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡವರನ್ನೆಲ್ಲ ಆಂಬುಲೆನ್ಸ್​ ಮೂಲಕ ಕೊಳ್ಳೆಗಾಲ, ಕಾಮಗೆರೆ, ಮೈಸೂರು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

      ಸುಲ್ವಾಡಿಯಲ್ಲಿ ಕಿಚ್ಚುಕುತ್ತಿ ಮಾರಮ್ಮದೇವಸ್ಥಾನದಲ್ಲಿ ಗೋಪುರ ಶಂಕುಸ್ಥಾಪನೆ ಸಮಾರಂಭವಿತ್ತು. ಕಾರ್ಯಕ್ರಮದಲ್ಲಿ ರೈಸ್​ಬಾತ್​ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಅದರಲ್ಲೂ 6 ಜನರ ಸ್ಥಿತಿ ಚಿಂತಾಜನಕವಾಗಿದೆ. 25ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯದಲ್ಲೂ ಏರುಪೇರಾಗಿದೆ.

       ಅಲ್ಲಲ್ಲಿ ಚೆಲ್ಲಿದ್ದ ಪ್ರಸಾದ ತಿಂದ ಕಾಗೆಗಳು, ಹಲವು ಪಕ್ಷಿಗಳೂ ಅಸ್ವಸ್ಥಗೊಂಡಿದ್ದು ಸುಮಾರು 3000 ಕಾಗೆಗಳು ಮೃತಪಟ್ಟಿವೆ. 

      ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿಯೇ ಯಾರೋ ಕಿಡಿಗೇಡಿಗಳು ಪ್ರಸಾದಕ್ಕೆ ವಿಷ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

      ಈ ಕುರಿತು ಡಿಹೆಚ್ ಒ ಪ್ರಸಾದ್ ಮಾತನಾಡಿದ್ದು, ಅಸ್ವಸ್ಥರಾದ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಘಟನೆಗೆ ವಿಷ ಪ್ರಾಶನವೇ ಕಾರಣ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸಾದ ಸ್ವೀಕರಿಸುವ ಮೊದಲು ಸೀಮೆಎಣ್ಣೆ ವಾಸನ ಬರುತ್ತಿತ್ತಂತೆ. 

       ಆಹಾರ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಜತೆಗೆ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಯತ್ನಿಸಲಾಗುತ್ತಿದೆ ಎಂದು  ತಿಳಿಸಿದ್ದಾರೆ.

 

(Visited 19 times, 1 visits today)