ತುಮಕೂರು
ಇಲ್ಲಿನ ಹಿರೇಮಠದ ವತಿಯಿಂದ ಬೆಂಗಳೂರು-ತುಮಕೂರು ರಸ್ತೆಯ ಹಳೆನಿಜಗಲ್ ಸಮೀಪದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಬಳಿ ಎರಡೂವರೆ ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ತಪೆÇೀವನದ ಉದ್ಘಾಟನಾ ಕಾರ್ಯಕ್ರಮ ಡಿ. 12 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇನಿಜಗಲ್‍ನ ಭಕ್ತರು ಮತ್ತು ರೈತರಿಂದ ಖರೀದಿಸಿದ 2.20 ಎಕರೆ ಜಾಗದಲ್ಲಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಭೂಮಿ ಪೂಜೆ ನೆರವೇರಿಸಿದ್ದರು. 2016 ರಿಂದ ತಪೆÇೀವನ ನಿರ್ಮಾಣ ಕಾರ್ಯ ನಡೆದು ಇದೀಗ ಪೂರ್ಣಗೊಂಡಿದ್ದು, ಡಿ. 12 ರಂದು ಉದ್ಘಾಟನೆಯಾಗುತ್ತಿದೆ ಎಂದರು.
ತಪೆÇೀವನದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಾಂತಲಿಂಗಶ್ವೇರ ವಿರಕ್ತ ಮಠದ ಶ್ರೀ ಜಡೆಯ ಶಾಂತಲಿಂಗ ಮಹಾಸ್ವಾಮೀಜಿ ಹಾಗೂ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಡಾ. ಶ್ರೀ ದಿವಾನ ಶಿವಾಚಾರ್ಯ ಮಹಾಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡುವರು ಎಂದು ಅವರು ಹೇಳಿದರು.
ತಪೆÇೀವನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಧ್ಯಾನಮಂದಿರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಸತ್ಸಂಗ ಯೋಗ ಮಂದಿರವನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರೆ, ಗುರುದರ್ಶನ ಮಂದಿರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಸಚಿವರುಗಳಾದ ವಿ.ಸೋಮಣ್ಣ, ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್, ಜೆ.ಸಿ. ಮಾಧುಸ್ವಾಮಿ, ಮಾಜಿ ಸಚಿವ ಎಸ್. ಶಿವಣ್ಣ, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಡಾ. ಕೆ.ಶ್ರೀನಿವಾಸಮೂರ್ತಿ, ಜ್ಯೋತಿಗಣೇಶ್, ಡಿ.ಸಿ. ಗೌರಿಶಂಕರ್, ಆರ್.ರಾಜೇಂದ್ರ, ಚಿದಾನಂದ್ ಎಂ ಗೌಡ, ಸಂಸದರಾದ ಜಿ.ಎಸ್.ಬಸವರಾಜು, ಡಿ.ಕೆ. ಸುರೇಶ್, ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಮೇಯರ್ ಪ್ರಭಾವತಿ ಸುಧೀಶ್ವರ್ ಸೇರಿದಂತೆ ಮಾಜಿ ಶಾಸಕರು, ಮಾಜಿ ಸಂಸದರು ಭಾಗವಹಿಸಲಿದ್ದಾರೆ ಎಂದು ಶ್ರೀಗಳು ವಿವರಿಸಿದರು. ಉನ್ನತ ಶಿಕ್ಷಣ ಪಡೆದು 1996 ರಲ್ಲಿ ಹಿರೇಮಠಕ್ಕೆ ಬಂದಾಗ ಮಠಕ್ಕೆ ಯಾವ ಆಸ್ತಿಯೂ ಇರಲ್ಲಿಲ್ಲ ಅಸ್ತಿತ್ವವೂ ಇರಲಿಲ್ಲ. ತುಮಕೂರಿನ ಸಹೃದಯ ಭಕ್ತರ ಸಹಕಾರದೊಂದಿಗೆ ಅಸ್ತಿತ್ವ ನಿರ್ಮಾಣ ಮಾಡಲಾಗಿದೆ. ಹಿರೇಮಠಕ್ಕೆ ದೂರದ ಊರುಗಳಿಂದ ಬರುವ ಭಕ್ತರಿಗೆ ವಾಸ್ತವಕ್ಕೆ ತೊಂದರೆಯಿತ್ತು. ಇದನ್ನು ಮನಗಂಡು ಹಳೆನಿಜಗಲ್ ಸಮೀಪದ ತಪೆÇೀವನದಲ್ಲಿ 11 ಕೊಠಡಿಯನ್ನು ನಿರ್ಮಿಸಲಾಗಿದೆ. ಇದರ ಜತೆಗೆ ಗುರುಮಂದಿರ, ಪೂಜಾ ಮಂದಿರ ನಿರ್ಮಾಣ ಮಾಡಿದ್ದು, ಒಂದು ಎಕರೆಯಷ್ಟು ಜಾಗವನ್ನು ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಹಿರೇಮಠದ ಜತೆ ತಪೆÇೀವನವು ನಡೆದುಕೊಂಡು ಹೋಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮಠದ ಭಕ್ತರಾದ ಗಣೇಶ್ ಬಾವಿಕಟ್ಟೆ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.