ಗುಬ್ಬಿ


ಮಾನವೂ ಇಲ್ಲ ಮೌಲ್ಯವೂ ಇಲ್ಲದ ತಾಲ್ಲೂಕಿನ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದು ವಕೀಲ ಹಾಗೂ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು 12000 ಗೂಡುಗಳಲ್ಲಿರುವ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ಎಂದ ಸವಾಲು ಎಸೆದ ಅವರು ದ್ವಂದ್ವ ನಿಲುವಿನಿಂದ ಮುಖಂಡರುಗಳನ್ನು ದಾರಿತಪ್ಪಿಸುತ್ತಿದ್ದಾರೆ. ಅವರ ಭಾಷೆಯಲ್ಲಿ ಹೇಳುವುದಾರೆ ಅಪ್ಪನಿಗೆ ಹುಟ್ಟಿದವರು ಗಂಡಸು ಎಂದು ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲಿ ಎಂದು ನೇರ ಸವಾಲು ಹಾಕಿದ ಅವರು ಗುಬ್ಬಿ ತಾಲ್ಲೂಕಿನಲ್ಲಿ ಯಾವುದೇ ಗುರುತಿಸಿಕೊಳ್ಳುವಂತಹ ಕೆಲಸ ನಿರ್ವಹಿಸಿದ್ದಾರೆಯೇ ಕೇವಲ ಪತ್ರಿಕೆಗಳಲ್ಲಿ ಹಾಗೂ ಶಂಕುಸ್ಥಾಪನೆಯ ಭಾವಚಿತ್ರಗಳನ್ನು ಹಾಕಿ ಮತದಾರರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. 10 ಮುಖವುಳ್ಳ ರಾಜಕಾರಣಿ ಇದ್ದರೆ ಅದು ಕೇವಲ ಗುಬ್ಬಿಯ ಶಾಸಕ ಎಂದು ಕಿಡಿಕಾರಿದರು.
ತಾಲ್ಲೂಕಿನಾದ್ಯಂತ ಭೂಹಗರಣ ನಡೆದಿದ್ದು ತಮಗೆ ಬೇಕಾದಂತಹ ವ್ಯಕ್ತಿಗಳಿಗೆ ಜಮೀನನ್ನು ನೀಡಿ ನಾನು ತುಂಬಾ ಕೈತೊಳೆದಿದ್ದೇನೆ ಎಂಬುದಕ್ಕೆ ದೂರನ್ನು ದಾಖಲಿಸಿ ಸಮಾಜದಲ್ಲಿ ನಾನು ಒಬ್ಬ ಸಭ್ಯ ಶಾಸಕ ಎನಿಸಿಕೊಳ್ಳಲು ಹವಣಿಸುತ್ತಿರುವ ಇವರು ಬಿದರೆ ಮತ್ತು ಚೇಳೂರು ಗ್ರಾ.ಪಂ.ನಲ್ಲಿ ನಡೆದ ಅವ್ಯವಹಾರವನ್ನು ಇಲ್ಲಿಯವರೆಗೂ ತನಿಖೆ ನಡೆಸದೆ ಇರಲು ಕಾರಣವೇನು ? ಎಂದ ಅವರು ಒಂದು ಕಡೆ ಕಾಂಗ್ರೆಸ್‍ಗೆ ಬರುತ್ತೇನೆ ಎಂದು ಹೇಳುತ್ತಿರುವ ಶಾಸಕರು ಬಿ.ಜೆ.ಪಿ. ಪಕ್ಷದ ಬಾಗಿಲನ್ನು ತಟ್ಟುತ್ತಿದ್ದು ಇದರಿಂದ ರಾಷ್ಟ್ರೀಯ ಪಕ್ಷಗಳ ಮುಖಂಡರುಗಳಿಗೆ ಹಾಗೂ ಸ್ಥಳೀಯ ಮುಖಂಡರುಗಳಿಗೆ ಇರಿಸು ಮುರಿಸು ಮಾಡುವಂತಹ ಸ್ಥಿತಿ ಶಾಸಕರದಾಗಿದ್ದು, ಇವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ನಾವು ಈಗಾಗಲೇ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಈತನ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದೇವೆ. ಇನ್ನೂ ಮುಂದಾದರೂ ಬೇರೆಯವರನ್ನು ಹಳಿಯುವ ಬದಲು ನಾವು ಸರಿ ಇದ್ದೇವೆಯೇ ಎಂದು ನೋಡಿಕೊಳ್ಳಬೇಕೆಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ 15 ವರ್ಷದಿಂದ ವಾಸವಾಗಿದ್ದ ಮನೆಯಿಂದ ಹೊರಗಟ್ಟಿದ್ದರೂ ಅಂದೆಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಅದನ್ನು ಬಿಟ್ಟು ಕೇವಲ ಬೂಟಾಟಿಕೆಗೆ ಪ್ರತಿ ವಾರವೂ ರಾಜೀನಾಮೆಯ ನಾಟಕವಾಡಿಸುತ್ತಿರುವುದು ಇವರ ಕುತಂತ್ರಕ್ಕೆ ಮತದಾರರನೇನು ಕುರಿಯಲ್ಲ ಎಂದ ಅವರು ಸ್ವಂತಿಕೆ ಇಲ್ಲದ ಈ ಶಾಸಕನ ಸ್ವಾರ್ಥ ಬುದ್ದಿಗೆ ಮುಂದಿನ ಚುನಾವಣೆಯಲ್ಲಿ ಮತದಾರರೇ ಬುದ್ದಿ ಕಲಿಸುತ್ತಾರೆ ಎಂದ ಅವರು ಕಾಂಗ್ರೆಸ್ಸಿಗೆ ಇಂತಹ ಭ್ರಷ್ಟ ಹಾಗೂ ಪಕ್ಷದ್ರೋಹಿ ವ್ಯಕ್ತಿಯನ್ನು ಕಾಂಗ್ರೆಸ್‍ಗೆ ಅವಶ್ಯಕತೆ ಇಲ್ಲ. ಬಿ.ಜೆ.ಪಿಗೆ ಮತ ನೀಡಿ ದೇವೇಗೌಡರಿಗೆ ಮೋಸ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ 10 ಮುಖವುಳ್ಳ ರಾಜಕಾರಣಿ ಮುಖವಾಡ ಕಳಚೋಣ ಬನ್ನಿ ಪೋಸ್ಟರ್‍ನ್ನು ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ವಕೀಲ ಚಿಕ್ಕರಂಗಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ಮಹಮದ್ ಸಾಧಿಕ್, ನಗರ ಪ್ರಚಾರ ಸಮಿತಿಯ ಸಲೀಂಪಾಷಾ, ನಗರಾಧ್ಯಕ್ಷ ಶಿವು, ಹಾಗೂ ಕಾಂಗ್ರೆಸ್ ಮಹಿಳಾ ಸದಸ್ಯರುಗಳು ಭಾಗವಹಿಸಿದ್ದರು.

(Visited 7 times, 1 visits today)