ಕೊರಟಗೆರೆ


ವಿಶ್ವನಾಯಕ ನರೇಂದ್ರಮೋದಿ ನೇತೃತ್ವದ ಬಿಜೆಪಿ ಪಕ್ಷವು ಗುಜರಾತ್ ರಾಜ್ಯದಲ್ಲಿ ಸತತ 7ನೇ ಸಲ ಜಯಭೇರಿ ಭಾರಿಸಿ ದಾಖಲೆ ಸೃಷ್ಟಿಸಿದೆ. 2023ಕ್ಕೆ ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಕೊರಟಗೆರೆ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್.ಅನಿಲಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದ ಪಪಂ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಗುಜರಾತ್ ರಾಜ್ಯದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗುಜರಾತ್ ರಾಜ್ಯದ ಚುನಾವಣೆಯ ಗೆಲುವು 2023ರ ಕರ್ನಾಟಕ ರಾಜ್ಯದ ಚುನಾವಣೆಗೆ ದಿಕ್ಸೂಚಿ ಆಗಲಿದೆ. ಕರ್ನಾಟಕ ರಾಜ್ಯದಲ್ಲಿಯು ಬಿಜೆಪಿ ಪಕ್ಷವು ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲಿದೆ. ಮತದಾರ ರಾಜಕೀಯ ನಾಯಕರ ಆಶ್ವಾಸನೆಗೆ ಒಳಗಾಗದೇ ಅಭಿವೃದ್ದಿ ಪರವಾದ ಸರಕಾರಕ್ಕೆ ಬಹುಮತದ ಉಡುಗೊರೆ ನೀಡಿದ್ದಾರೆ ಎಂದು ಸಂತಷ ವ್ಯಕ್ತಪಡಿಸಿದರು.
ಕೊರಟಗೆರೆ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಪವನಕುಮಾರ್ ಮಾತನಾಡಿ ನರೇಂದ್ರಮೋದಿ ಮತ್ತು ಅಮಿತ್‍ಷಾ ನೇತೃತ್ವದ ಬಿಜೆಪಿ ಪಕ್ಷವು ಗುಜರಾತ್ ರಾಜ್ಯದಲ್ಲಿ ಸತತ 7ನೇ ಭಾರಿ ಐತಿಹಾಸಿಕ ಗೆಲುವು ಸಾಧಿಸಿದೆ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಗೆಲ್ಲಲಿದೆ. 2023ಕ್ಕೆ ಬಿಜೆಪಿ ಪಕ್ಷವು ಮತ್ತೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ವಿಜಯೋತ್ಸವದ ವೇಳೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಕಂಬದರಂಗಯ್ಯ, ರೈತಮೊರ್ಚ ಅಧ್ಯಕ್ಷ ವಿಶ್ವನಾಥ, ಮಂಡಲ ಕಾರ್ಯದರ್ಶಿ ಗುರುಧತ್, ನಗರಧ್ಯಕ್ಷ ಪ್ರದೀಪಕುಮಾರ್, ಎಸ್‍ಟಿ ಮೊರ್ಚ ಅಧ್ಯಕ್ಷ ಗೋಪಿನಾಥ್, ಯುವಮೋರ್ಚ ಅಧ್ಯಕ್ಷ ಅರುಣ್, ಮುಖಂಡರಾದ ಪ್ರಕಾಶ್‍ರೆಡ್ಡಿ, ದಯಾನಂದ, ಡಾಡಿವೆಂಕಟೇಶ್, ರವಿಶಂಕರ್, ದಯಾನಂದ, ರಂಜಿತ್, ಪುನಿತ್, ನಯನ ಸೇರಿದಂತೆ ಇತರರು ಇದ್ದರು.

(Visited 3 times, 1 visits today)