ಕೊರಟಗೆರೆ


ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಹಶೀಲ್ದಾರ್ ಹೈಡ್ರಾಮ ಶುರುವಿಟ್ಟು ಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
108 ಅಂಬ್ಯುಲೆನ್ಸ್ ಸೇವೆಯು ತುರ್ತು ಸಂದರ್ಭದಲ್ಲಿ ದೊರೆಯುತ್ತಿಲ್ಲ ಎಂಬ ಆರೋಪ ಕೊರಟಗೆರೆ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದ್ದು, ತಾಲ್ಲೂಕು ಆಡಳಿತ ಸಮರ್ಪಕವಾಗಿ ತನ್ನ ಕಾರ್ಯವ್ಯಪ್ತಿಯನ್ನು ಕಾರ್ಯ ರೂಪಕ್ಕೆ ತರುತ್ತಿಲ್ಲ ಎಂಬ ಆಪದನೆ ಬಹಿರಂಗವಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಟೀಕಾ ಪ್ರಹಾರವು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯನ್ನೇ ಅಲ್ಲದೆ ತಾಲ್ಲೂಕು ಆಡಳಿತ ತಾಲ್ಲೂಕಿನ ಜನಪ್ರತಿನಿಧಿ ಶಾಸಕರ ವಿರುದ್ಧವೂ ಸಮರ್ಪಕ ಆಡಳಿತ ಕೊರತೆಯ ಆಪದನೆ ಕಂಡು ತಾಲ್ಲೂಕಿನ ಜನತೆ ಬೇಸತ್ತಿದ್ದಾರೆ.
ತಿಂಗಳುಗಳು ವರ್ಷಗಳು ಉರುಳಿದರು ಸಾರ್ವಜನಿಕಸೇವೆಗೆ ಸಾದಾ ಸಿದ್ಧವಿರಬೇಕಿದ್ದ ವೈದ್ಯಕೀಯ ಸೇವೆಯ ಒಂದು ಭಾಗವಾದ ತುರ್ತು ಅಂಬ್ಯುಲೆನ್ಸ್ ಸೇವೆ ಸಾರ್ವಜಿಕರಿಗೆ ಗಗನ ಕುಸುಮವಾಗಿತ್ತು. ಇದರಿಂದ ಬಸವಳಿದ ಜನತೆ ಸರ್ಕಾರದ ಆಡಳಿತಾತ್ಮಕ ವಿಚಾರಗಳು ಮತ್ತು ದೊರೆಯದ ಉಚಿತ ಸೇವೆಗಳ ಕುರಿತು ಆಕ್ರೋಶ ಭರಿತರಾಗಿದ್ದರು ಎನ್ನಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಡೆದ ಚಿರತೆ ದಾಳಿಯಿಂದ ಗಾಯಗೊಂಡ ರೈತರು ಮತ್ತು ಮಕ್ಕಳ ದಯನೀಯ ಸ್ಥಿತಿಯಲ್ಲಿ ಸರಿಯಾದ ಸಮಯಕ್ಕೆಬಾರದ ಉಚಿತ 108 ಅಂಬ್ಯುಲೆನ್ಸ್ ಸೇವೆಯ ವಿರುದ್ಧ ಸಾರ್ವಜನಿಕವಾಗಿ ವ್ಯಕ್ತವಾದ ಆಕ್ರೋಶದ ಜೊತೆಗೆ ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ಬಹಿರಂಗವಾಗಿಯೇ ಟೀಕಾ ಪ್ರಹಾರ ಮಾಡಿದರು.
ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದ ಆರೋಗ್ಯ ಇಲಾಖೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರ್‍ರವರು ಸ್ಥಳೀಯ ಶಾಸಕರು ಮೌನಕ್ಕೆ ಶರಣಾಗಿದ್ದರು.
ಹಾಲಿ ಶಾಸಕರು ಉಪಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿ ಅಪಾರ ಅನುಭವ ಉಳ್ಳವರು ಸ್ವಯಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ನಿರ್ವಹಿಸಿದ್ದ ಅನುಭವಿಗಳಾಗಿದ್ದು ತನ್ನ ಸ್ವ- ಕ್ಷೇತ್ರದಲ್ಲಿ ತನ್ನ ಅಧಿಕಾರವಧಿಯಲ್ಲಿ ವೈದ್ಯಕೀಯ ತುರ್ತು ಸೇವೆಗಳು ಅಗತ್ಯ ಸಮಯದಲ್ಲಿ ದೊರೆಯುವುದಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಸಕಾಲದಲ್ಲಿ ಎಲ್ಲಾಸೌಲಭ್ಯ ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕಾದ್ದು ಆ ತಾಲ್ಲೂಕಿನ ಜನಪ್ರತಿನಿಧಿಯ ಕರ್ತವ್ಯ ಎಂಬುದನ್ನು ಮರೆತಿರುವಂತಿದೆ ಎಂದು ಸಾರ್ವಜವನಿಕವಾಗಿ ಚರ್ಚೆಗಳು ಆರಂಭವಾಗಿವೆ.
ತಾಲ್ಲೂಕಿನ ಶಾಸಕರ ನಂತರದ ಗುರುತರವಾದ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾದ್ದು ತಹಶೀಲ್ದಾರವರ ಆಧ್ಯ ಕರ್ತವ್ಯ. ಸರಿಯಾದ ಸೌಲಭ್ಯಗಳು ತುರ್ತು ಸೇವೆಗಳು ಅನಿವಾರ್ಯ ಸಮಯಗಳಲ್ಲಿ ದೊರೆಯದಿದ್ದರೆ. ಅದು ದೊರೆಯುವಂತೆ ಸಮರ್ಪಕ ಆಡಳಿತ ನೀಡಬೇಕಿರುವುದು. ಆ ತಾಲ್ಲೂಕಿನ ತಹಶೀಲ್ದಾರವರ ಕರ್ತವ್ಯ. ಅದು ದೊರೆಯದಿದ್ದರೆ ತಾಲ್ಲೂಕು ಆಡಳಿತದ ಕಾರ್ಯಕ್ಷಮತೆಯ ವೈಫಲ್ಯ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತಿದ್ದಾರೆ.
ತನ್ನ ಅಧಿಕಾರವಧಿಯಲ್ಲಿ ತನ್ನ ಕಾರ್ಯ ವ್ಯಾಪ್ತಿಯ ವೈಫಲ್ಯವನ್ನಾ ಸಾರ್ವಜನಿಕರು ಎತ್ತಿ ತೋರಿಸುತ್ತಿರುವುದನ್ನು ಮರೆಮಾಚಿಸುವ ಸಲುವಾಗಿ ಸಾರ್ವಜನಿಕರ ಗಮನವನ್ನು ಬೇರೆಡೆ ಕೇಂದ್ರಿಕರಿಸಲು ಅಂಬ್ಯಲೆನ್ಸ್ ಸೇವೆಯ ಸಿಬಂದಿಗಳಿಗೆ ಅನ್ಯರ ಹೆಸರಲ್ಲಿ ಕರೆ ಮಾಡುವ ಮುಖೇನ ಅದನ್ನು ವಿಡಿಯೋ ಚಿತ್ರಿಕರಣ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು , ಕೆಲವು ಮಾದ್ಯಮಗಳ ಕಣ್ಣಿಗೆ ಮಣ್ಣೇರಚಿ ಎಲ್ಲರ ಗಮನಗಳನ್ನ ಬೇರೆಕಡೆ ವರ್ಗಹಿಸಲಾಗಿದೆ ಎಂದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ವರ್ಗವಣೆಯ ಸಂದರ್ಭದಲ್ಲಿ ಇದರ ಅಗತ್ಯತೆ ಮತ್ತು ಅನಿರ್ವಾತೆ ಅವರಿಗಿತ್ತೇ ಪ್ರಚಾರದ ಗೀಳು ಇವರನ್ನು ಸಹ ಆವರಿಸಿಕೊಂಡಿತೆ ಎನ್ನುವ ಹಾಸ್ಯಭರಿತ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಬೆಟ್ಟ ಅಗೆದು ಇಲಿ ಹಿಡಿದ ಅನಿವಾರ್ಯತೆ ಕೊರಟಗೆರೆ ತಾಲ್ಲೂಕಿನಲ್ಲಿ ಕಂಡುಬರುತ್ತಿದೆ ಎನ್ನುವುದು ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದೆ.

(Visited 1 times, 1 visits today)