ಡಾ. ಯೋಗೇಶ್ ಎ.
ಉಪನ್ಯಾಸಕರು,
ಸ.ಪ.ಪೂ.ಕಾಲೇಜು ಕಣಕುಪ್ಪೆ
ತುಮಕೂರು
ಜಿಲ್ಲಾ ಹದಿನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಬರದ ಸಿದ್ದತೆ.
ತುಮಕೂರು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಒಂದು ವರ್ಷದಿಂದಲೂ ಹಲವು ಕ್ರಿಯಾಶೀಲ, ಸೃಜನಾತ್ಮಕವಾದ ಸಾಹಿತ್ಯದ ಚಟುವಟಿಕೆಗಳನ್ನು ನಡೆಸಿಕೊಂಡು ಬರುತಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸರಣಿಯೋಪಾದಿಯಲ್ಲಿ ತಾಲ್ಲೂಕು ಸಮ್ಮೇಳನಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದೆ.
ಅದರಂತೆ ಜಿಲ್ಲಾ ಸಮ್ಮೇಳನ ಡಿಸೆಂಬರ್ 15 ಮತ್ತು 16 ರಂದು ಎರಡು ದಿನಗಳ ಕಾಲ ನಡೆಯುತಿದ್ದು ಹಿಂದೆಂದೂ ಕಾಣದ ರೀತಿಯಲ್ಲಿ ಸಮರೋಪಾದಿಯಲ್ಲಿ ಅಗತ್ಯ ಪೂರಕ ತಯಾರಿ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮೊದಲು ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧÀ?ಯಕ್ಷರ ಮುಂದಾಳತ್ವದಲ್ಲಿ ನುಡಿ ಹಬ್ಬಕ್ಕೆ ಬೇಕಾದ ಸಿದ್ದತೆಗಳು ಭರಪೂರವಾಗಿ ನಡೆಯುತ್ತಿವೆ.
ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಯಾದ ಒಂದೂವರೆ ತಿಂಗಳಿನಿಂದಲೂ ಸುಮಾರು ಪರಿಷತ್ತಿನಲ್ಲಿ ಸುಮಾರು ಹತ್ತು-ಹನ್ನೆರಡು ಸರಣಿ ಸಭೆಗಳನ್ನು ನಡೆಸಿ ಜಿಲ್ಲೆಯ ಎಲ್ಲಾ ಸಾಹಿತ್ಯಾಸಕ್ತರನ್ನು ಸೇರಿಸಿಕೊಂಡು ಸುಮಾರು ಹದಿನಾಲ್ಕು ಸಮಿತಿಗಳನ್ನು ರಚಿಸಿ ಪ್ರತಿ ಸಮಿತಿಯಲ್ಲೂ ಒಬ್ಬರಂತೆ ಸಂಚಾಲಕರನ್ನು ಮಾಡಿ, ಹದಿನೈದರಿಂದ ಇಪ್ಪತ್ತು ಜನ ಸದಸ್ಯರಿದ್ದು ಪ್ರತಿಯೊಬ್ಬರೂ ಸಾಹಿತ್ಯದ ಹಿನ್ನಲೆ, ಅಭಿರುಚಿ, ಆಸಕ್ತಿ ಉಳ್ಳವರಾಗಿದ್ದು ತಮ್ಮನ್ನ ತಾವು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು 200 ಕ್ಕೂ ಹಚ್ಚು ಸದಸ್ಯರುಗಳು ವಾರದಲ್ಲಿ ಎರಡು ದಿನ ಅಂದರೆ ಬುಧವಾರ ಹಾಗೂ ಶನಿವಾರ ಸಂಜೆ ನಾಲ್ಕು ಗಂಟೆಗೆ ಕನ್ನಡ ಭವನದಲ್ಲಿ ಸಭೆ ಸೇರಿ ಆಗಿರುವಂತಹ ಸಮ್ಮೇಳನದ ಪೂರ್ವಭಾವಿ ಕೆಲಸಗಳು ಹಾಗೂ ಆಗಬೇಕಾಗಿರುವಂತಹ ಮುಂದಿನ ಚಟುವಟಿಕೆಗಳ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಲಾಗುತ್ತಿದೆ.
ಇದರ ಜೊತೆಗೆ ಪ್ರತಿಯೊಂದು ಸಮಿತಿಗಳ ಸಂಚಾಲಕರು ಮತ್ತು ಸದಸ್ಯರುಗಳಲ್ಲಿ ಹೆಚ್ಚಾಗಿ ಸಾಹಿತ್ಯಸಕ್ತಿಯುಳ್ಳ ಮಹಿಳೆಯರೇ ಇರುವುದು ವಿಶೇಷವಾಗಿದೆ. ಅದರಲ್ಲೂ ಜಿಲ್ಲೆಯ ಮತ್ತು ನಗರದ ವಿವಿಧ ಸಂಘಟನೆಗಳು ತಮ್ಮ ಸಹಕಾರವನ್ನು ನೀಡಿದ್ದು ಪ್ರಚಾರ ಕಾರ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ.
ಎಲ್ಲಕಿಂತ ಮುಖ್ಯವಾಗಿ ಇದೇ ವಾರ ನಡೆಯಲಿರುವ ಈ ಸಮ್ಮೇಳನದ ರೂಪುರೇಷೆಗಳಿಗೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಯವರು ಮತ್ತು ನಗರದ ಶಾಸಕರು ಹಾಗೂ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನೊಳಗೊಂಡಂತೆ ವಿಶೇಷವಾಗಿ ಈ ಬಾರಿ ಜಿಲ್ಲಾಡಳಿತ, ತುಮಕೂರು ಮಹಾನಗರ ಪಾಲಿಕೆ, ಟೂಡಾ ಕಛೇರಿಯವರು ಸೇರಿದಂತೆ ಎಲ್ಲಾ ಇಲಾಖೆಯವರು ಸಹಕಾರ ನೀಡುತಿದ್ದು ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡಿವೆ.
ಅದರಲ್ಲೂ ಮುಖ್ಯವಾಗಿ ಮಾನ್ಯ ಶಾಸಕರು ದಾಸೋಹ ಹಾಗೂ ಜಿಲ್ಲಾಧಿಕಾರಿಯವರು, ಮಹಾನಗರ ಪಾಲಿಕೆಯವರು ಹಲವಾರು ಜವಾಬ್ದಾರಿಗಳನ್ನು ವಹಿಸಿಕೊಂಡಿರುವುದು ಸಮ್ಮೇಳನದ ಯಶಸ್ವಿಗೆ ಕಾರಣೀಭೂತವಾಗುವ ನಿರೀಕ್ಷೆ ಇದೆ. ವಿಶೇಷವಾಗಿ ಜಿಲ್ಲೆಯ ಸಾಂಸ್ಕೃತಿಕ ವೈಭವದ ಹಿನ್ನಲೆಯುಳ್ಳ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಬಿಡುಗಡೆಗೊಳಿಸಿದೆ.
ವಿಶೇಷವಾಗಿ ಸಮ್ಮೇಳನದ ಅಧ್ಯಕ್ಷತೆಯನ್ನು ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಶ್ರೀ ಎಮ್. ವಿ ನಾಗರಾಜರಾವ್ ವಹಿಸಲಿದ್ದು ಎಲೆ ಮರೆ ಕಾಯಿಯಂತೆ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪರಿಪೂರ್ಣ ವ್ಯಕ್ತಿತ್ವದ ಜಿಲ್ಲೆಯ ಸಾಹಿತಿಗಳಲ್ಲಿ ಒಬ್ಬರಾದ ಶ್ರೀಯುತರನ್ನು ಗುರಿತಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಸಮ್ಮೇಳನ ಪ್ರಾರಂಭವಾಗುವುದಕಿಂತ ಮುಂಚೆ ಅಂದರೆ ಹದಿನೈದನೇ ಗುರುವಾರದಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ತುಮಕೂರು ನಗರದ ಬಿ.ಜಿ.ಎಸ್ ವೃತ್ತದಿಂದ ವಿವಿಧ ಕಲಾ ಪ್ರಕಾರದ ತಂಡಗಳ ಮೂಲಕ ಸಮ್ಮೇಳನ ನಡೆಯುವ ಸ್ಥಳವಾದ ಅಮಾನಿಕೆರೆ ಸಮೀಪದ ಗಾಜಿನ ಮನೆವರೆಗೂ ನಡೆಯುವ ವೈಭವ ಪ್ರದರ್ಶನ ಮುಖ್ಯವಾಗಿ ಮೆರಗು ನೀಡಲಿದೆ. ಎರಡು ದಿನಗಳ ಸಮ್ಮೇಳನದ ಕಾರ್ಯಕ್ರಮವನ್ನು ವಿಭಿನ್ನವಾದ ರೀತಿಯಲ್ಲಿ ಯೋಜನೆ ಮಾಡಿಕೊಂಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ವ್ಯವಸ್ತಿತವಾಗಿ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಲಾಗಿದೆ.
ಮೊದಲ ದಿನದ ಉದ್ಘಾಟನೆಯ ನಂತರ ಎರಡು ದಿನಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಿದ್ದು ಪ್ರತಿಯೊಂದು ಗೋಷ್ಠಿಯೂ ತುಮಕೂರು ಜಿಲ್ಲೆಯ ಹಾಗೂ ನಾಡುನುಡಿಯ ಚಿಂತೆನಗೆ ಸಂಬಂಧಿಸಿದಂತೆ ವಿಚಾರಗಳನ್ನು ವಿದಾಂ?ವಸರುಗಳು ಮಂಡಿಸಲಿದ್ದಾರೆ. ಪ್ರತಿಯೊಂದು ಗೋಷ್ಠಿ ಮುಗಿದ ನಂತರ ಅಷ್ಟೇ ಪ್ರಮಾಣದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ಕಲಾ ಸಂಘಗಳು, ನೃತ್ಯ ಶಾಲೆಗಳು ಹಾಗೂ ಶಾಲಾ ಮಕ್ಕಳು ನಡೆಸಿ ಕೊಡಲಿದ್ದಾರೆ. ಜೊತೆಗೆ ಎರಡು ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವವರಿದ್ದಾರೆ.
ಒಟ್ಟಿನಲ್ಲಿ ಹದಿನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖವಾಗಿ ನಾಲ್ಕು ಸಾವಿರದಿಂದ ಐದುಸಾವಿರ ಸಾಹಿತ್ಯಾಸಕ್ತರು, ಗಣ್ಯರೂ, ವಿದ್ಯಾರ್ಥಿಗಳು ಹಾಗೂ ವಿವಿಧ ಸಾಹಿತ್ಯ ಸಂಘಟನೆಗಳು ಭಾಗವಹಿಸಿವ ನಿರೀಕ್ಷೆ ಇದ್ದು ಬರುವವರೆಲ್ಲರಿಗೂ ಊಟ ಹಾಗೂ ವಸತಿ ವ್ಯವಸ್ತೆಯನ್ನು ಅಚ್ಚುಕಟ್ಟಾಗಿ ನಡೆಸುವ ತಯಾರಿ ಮಾಡಿಕೊಳ್ಳಲಾಗಿದೆ.
ಹೀಗೆ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವ ತಯಾರಿ ನಡೆಸುವಂತೆ ಕಾಣುತಿದ್ದು ಅದೂ ಕೂಡ ಸಕಾರಗೊಳ್ಳಬಹುದು ಎಂಬುದು ಸಾಹಿತ್ಯ ಪ್ರಿಯರ ಆಶಯವಾಗಿದೆ.