ತುಮಕೂರು
ಬಿಜೆಪಿ ಹಿರಿಯ ಮುಖಂಡರು ಹಾಗೂ ಕೇಂದ್ರ ಇಂಧನ ಮತ್ತು ಭಾರಿ ಉದ್ದಿಮೆಗಳ ಸಹಾಯಕ ರಾಜ್ಯ ದರ್ಜೆ ಸಚಿವರಾದ ಕೃಷ್ಣನ್ ಪಾಲ್ ಗುಲ್ಜಾರ್‍ರವರು ಕುಣಿಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕ್ರಮಗಳಲ್ಲಿ ಇದೇ ಡಿಸೆಂಬರ್ 17ರ ಶನಿವಾರದಂದು ಪ್ರವಾಸ ಮಾಡಲಿದ್ದಾರೆಂದು ವಕ್ತಾರ ಕೆ.ಪಿ.ಮಹೇಶ ತಿಳಿಸಿದ್ದಾರೆ.
ಅವರ ಪ್ರವಾಸದ ಅವಧಿಯಲ್ಲಿ ಬೆಳಿಗ್ಗೆ 10ಕ್ಕೆ ಯಡಿಯೂರು ಶ್ರೀಕ್ಷೇತ್ರ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ಕುಣಿಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೀರಗೊಂಡನಹಳ್ಳಿಯ ಎಸ್.ಸಿ. ಕಾಲೋನಿಯ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತ ಹನುಮಯ್ಯ (ಸಣ್ಣ ಪಾಪ) ರವರ ಮನೆಯಲ್ಲಿ ಬೆಳಗ್ಗಿನ ಉಪಹಾರ ಮಾಡಲಿದ್ದಾರೆ, ಬೆಳಿಗ್ಗೆ 11 ಘಂಟೆಗೆ ಕುಣಿಗಲ್‍ನ ಬಿ.ಎಂ.ರಸ್ತೆಯ ಎಸ್.ಎಸ್. ಪಾರ್ಟಿ ಹಾಲ್‍ನಲ್ಲಿ ಬಿಜೆಪಿ ಜಿಲ್ಲಾ ಹಾಗೂ ಮಂಡಲದ ಪರಿವಾರದ ಹಿರಿಯ ಕಾರ್ಯಕರ್ತರು, ಪ್ರಮುಖರು, ಎಲ್ಲಾ ಮೋರ್ಚಾಗಳು ಮತ್ತು ಮಾಧ್ಯಮ, ಸಾಮಾಜಿಕ ಜಾಲತಾಣದ ಕಾರ್ಯಕರ್ತರೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಪತ್ರಿಕಾಗೋಷ್ಠಿಯು ಸ್ಟಡ್ ಫಾರಂನಲ್ಲಿ ಮಾಧ್ಯಮ ಮಿತ್ರರೊಂದಿಗೆ ನಡೆಸಿದ ನಂತರ, ಮಧ್ಯಾಹ್ನ 1 ಘಂಟೆಗೆ ಬೇಗೂರಿನ ಎಸ್.ಸಿ.ಕಾಲೋನಿಯಲ್ಲಿರುವ ಕುಣಿಗಲ್ ಮಂಡಲದ ಎಸ್.ಸಿ.ಮೋರ್ಚಾ ಅಧ್ಯಕ್ಷ ಬೇಗೂರು ಶಿವರಾಮ್‍ರವರ ಮನೆಯಲ್ಲಿ ಊಟವನ್ನು ಮಾಡಲಿದ್ದಾರೆ. ನಂತರ ಬೆಂಗಳೂರಿಗೆ ತೆರಳಲಿದ್ದಾರೆಂದು ಕೆ.ಪಿ.ಮಹೇಶ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ ಕೃಷ್ಣನ್ ಪಾಲ್ ಗುಲ್ಜಾರ್‍ರವರೊಂಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಅಶ್ವಥ್ ನಾರಾಯಣ, ಮಾಜಿ ಸಂಸದ ಮುದ್ದಹನುಮೇಗೌಡ, ರಾಜ್ಯ ಪಿಕಾರ್ಡ್ ಬ್ಯಾಂಕ್‍ನ ಅಧ್ಯಕ್ಷ ಡಿ.ಕೃಷ್ಣಕುಮಾರ್, ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಪ್ರಧಾನಕಾರ್ಯದರ್ಶಿಗಳಾದ ಸಂಪಿಗೆ ಶ್ರೀಧರ ಹಾಗೂ ಹೆಚ್.ಟಿ.ಭೈರಪ್ಪ, ಉಪಾಧ್ಯಕ್ಷರು ಹಾಗೂ ಕುಣಿಗಲ್ ಮಂಡಲ ಉಸ್ತುವಾರಿ ವೈ.ಹೆಚ್.ಹುಚ್ಚಯ್ಯ, ಕಾರ್ಯದರ್ಶಿ ಹಾಗೂ ಸಹಪ್ರಭಾರಿ ಮುದಿಗೆರೆ ಕೆಂಪೇಗೌಡ, ಕುಣಿಗಲ್ ಮಂಡಲ ಅಧ್ಯಕ್ಷ ಕೆ.ಎಸ್.ಬಲರಾಮ್ ಹಾಗೂ ಪ್ರಮುಖರು ಪ್ರವಾಸದಲ್ಲಿ ಭಾಗವಹಿಸಲಿದ್ದಾರೆಂದು ಬಿಜೆಪಿ ತುಮಕೂರು ಜಿಲ್ಲಾ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.