ತುಮಕೂರು


ಬಿಜೆಪಿಯ ಸಂಘಟನಾತ್ಮಕ ದೃಷ್ಠಿಯಿಂದ ರಾಜ್ಯದಲ್ಲಿ ರಚನೆಯಾಗಿರುವ 24 ಪ್ರಕೋಷ್ಠಗಳ ರಾಜ್ಯ ಮಟ್ಟದಲ್ಲಿ 25000 ಕಾರ್ಯಕರ್ತರ ಶಕ್ತಿ ಸಂಗಮ ಸಮಾವೇಶ ಇದೇ 18ರ ಭಾನುವಾರ ಬೆಂಗಳೂರಿನ ಅರಮನೆ ಮೈದಾನ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ ಎಂದು ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು.
ಬಿಜೆಪಿ ಕಾರ್ಯಾಲಯದಲ್ಲಿಂದು ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರಚನೆಯಾಗಿರುವ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಸಮಾಜಮುಖಿ ಚಿಂತಕರಿಗೆ ವೇದಿಕೆಯನ್ನು ಒದಗಿಸುವ ಕಾರ್ಯಪದ್ದತಿಯನ್ನು ಅಳವಡಿಸಿಕೊಂಡು ಧ್ಯೇಯ ಪಥ ಹಾಗೂ ಕಾರ್ಯಪಥದ ಚಿಂತನೆ ನೀಡಿ ದೇಶ ಕಟ್ಟುವ ಕಾಯಕದಲ್ಲಿ ಜೋಡಿಸಿಕೊಂಡು ಕೊಂಡೊಯ್ಯವ ದೃಷ್ಠಿಕೋನದಿಂದ ರಾಜ್ಯದಲ್ಲಿ 24 ಪ್ರಕೋಷ್ಠಗಳಾದ ಪ್ರಶಿಕ್ಷಣ ಪ್ರಕೋಷ್ಠ, ಸಹಕಾರ ಪ್ರಕೋಷ್ಠ, ಅಸಂಘಟಿತ ಕಾರ್ಮಿಕ ಪ್ರಕೋಷ,್ಠ ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠ, ವ್ಯಾಪಾರಿ ಪ್ರಕೋಷ್ಠ, ಕಾನೂನು ಪ್ರಕೋಷ್ಠ, ಪ್ರಬುದ್ಧರ ಪ್ರಕೋಷ್ಠ, ವೃತ್ತಿಪರರ ಪ್ರಕೋಷ್ಠ, ವೈದ್ಯಕೀಯ ಪ್ರಕೋಷ್ಠ, ಕೈಗಾರಿಕ ಪ್ರಕೋಷ್ಠ, ಪಂಚಾಯತ್‍ರಾಜ್ ಗ್ರಾಮೀಣ ಪ್ರಕೋಷ್ಠ, ಫಲಾನುಭವಿ ಪ್ರಕೋಷ್ಠ, ಶಿಕ್ಷಕರ ಪ್ರಕೋಷ್ಠ, ಹಾಲು ಉತ್ಪಾದಕರ ಪ್ರಕೋಷ್ಠ, ಹಿರಿಯ ನಾಗರೀಕ ಪ್ರಕೋಷ್ಠ, ನಗರ ಆಡಳಿತ ಪ್ರಕೋಷ್ಠ, ಪೂರ್ವ ಸೈನಿಕ ಪ್ರಕೋಷ್ಠ, ಆರ್ಥಿಕ ಪ್ರಕೋಷ್ಠ, ವಿವಿಧ ಭಾಷಿಕ ಪ್ರಕೋಷ್ಠ, ನೇಕಾರ ಪ್ರಕೋಷ್ಠ, ಪ್ರಕಾಶನ ಪ್ರಕೋಷ್ಠ, ಮೀನುಗಾರರ ಪ್ರಕೋಷ್ಠ, ಸಾಮಾಜಿಕ ಜಾಲತಾಣ ಪ್ರಕೋಷ್ಠ, ಮಾಧ್ಯಮ ಪ್ರಕೋಷ್ಠ ಮಾಡಿದೆ. ವಿವಿಧ ವೃತ್ತಿ ಆಧಾರಿತ ವ್ಯಕ್ತಿಗಳು ಸೇರಿದಂತೆ ಸಮಾಜದ ಪ್ರಭಾವಿಗಳನ್ನು, ಪ್ರತಿಷ್ಠಿತರನ್ನೂ ಮತ್ತು ಇನ್ನಿತರ ಸಾಮಾಜಿಕ ಕಾರ್ಯಗಳಿಗೆ ಜೋಡಿಸುವ ದೃಷ್ಠಿಯಿಂದ ಸಮಾಜದ ಸೇವೆಗೆ ಒಂದು ವೇದಿಕೆಯನ್ನು ಬಿಜೆಪಿ ರಾಜ್ಯ ಘಟಕ ದೇಶದಲ್ಲೇ ಮೊದಲ ಬಾರಿಗೆ ರಚಿಸಿದೆ ಎಂದರು.
ಈ ಶಕ್ತಿ ಸಂಗಮದ ಸಮಾವೇಶದ ಉದ್ಘಾಟನೆಯನ್ನು ಕೇಂದ್ರದ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ನಳಿನ್‍ಕುಮಾರ್ ಕಟೀಲ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರುಗಳು ಉಪಸ್ಥಿತರಿರುತ್ತಾರೆ. ಸಮಾರೋಪದ ಭಾಷಣವನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮಾಡಲಿದ್ದಾರೆ.
ರಾಜ್ಯದ ವಿವಿಧ ಪ್ರಕೋಷ್ಠಗಳ ಅಡಿಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಹಿತೈಷಿಗಳು ಪ್ರಕೋಷ್ಠಗಳ ಮುಲಕ ಸಕ್ರೀಯವಾಗಿ “ಸೇವೆಯೇ ಸಂಘಟನೆ”
ಎಂಬ ಧ್ಯೇಯದಡಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಡೀ ರಾಷ್ಟ್ರದಲ್ಲಿ ಅತ್ಯಂತ ವಿಭಿನ್ನವಾಗಿ, ವಿಶಿಷ್ಟವಾಗಿ ರಾಜಕೀಯ ಕ್ಷೇತ್ರದಲ್ಲಿ ಹೊಸದೊಂದು ಭಾಷ್ಯವನ್ನು ಬರೆಯುತ್ತಿರುವ ಈ ಪ್ರಕೋಷ್ಠಗಳ ಪ್ರತ್ಯಕ್ಷ ಪ್ರದರ್ಶನದ ಅನಾವರÀಣವನ್ನು ಬೆಂಗಳೂರಿನ ಶಕ್ತಿ ಸಂಗಮ ಸಮಾವೇಶದಲ್ಲಿ ಬಿಜೆಪಿ ಮಾಡುತ್ತಿದೆ ಎಂದು ಹೆಚ್.ಎಸ್.ರವಿಶಂಕರ್ ಹೆಬ್ಬಾಕ ವಿವರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಸಹವಕ್ತಾರ ಟಿ.ಜೆ.ಸನತ್, ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ಹೆಚ್.ಎಂ.ರವೀಶ್, ಮಾಧ್ಯಮ ಜಿಲ್ಲಾ ಸಹಪ್ರಮುಖ್ ಜೆ.ಜಗದೀಶ್, ತುಮಕೂರು ನಗರ ಮಾಧ್ಯಮ ಪ್ರಮುಖ್ ಜಯಪ್ರಕಾಶ್ (ಜೆಪಿ) ಉಪಸ್ಥಿತರಿದ್ದರು.

(Visited 1 times, 1 visits today)