ತುಮಕೂರು


ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರ ಸ್ವಾಮಿಯವರ ಹುಟ್ಟು ಹಬ್ಬದ ಕಾರ್ಯಕ್ರಮದ ನಂತರ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಗೋವಿಂದ ರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯ ಹುಟ್ಟುಹಬ್ಬದ ಕಾರ್ಯಕ್ರಮ ಜಿಲ್ಲಾ ಜಾತ್ಯತೀತ ಜನತಾ ದಳದ ಕಛೇರಿಯಲ್ಲಿ ಔಪಚಾರಿಕವಾಗಿ ನೇರವೇರಿತು.
ಆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ್ಯ ಸಿ.ಆರ್ ಆಂಜಿನಪ್ಪ ಸೇರಿಂದತೆ ಉಪಮೇಯರ್ ನರಸಿಂಹಮೂರ್ತಿ ಮತ್ತು ನರಸೇಗೌಡ ಸೇರಿದಂತೆ ಹಲವು ಮುಖಂಡರು ಭಾಗಿ ಆಗಿದ್ದರು.
ಆದರೆ ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೂ ನಮಗೂ ಯಾವುದೆ ರೀತಿಯ ಸಂಭದವಿಲ್ಲದಂತೆ ವರ್ತಿಸಿದ ಗೋವಿಂದರಾಜು ನಡೆ ವಿಭಿನ್ನವಾಗಿತ್ತು. ದಾನ ಪ್ಯಾಲೇಸ್ ಸಮೀಪ ಅಲ್ಪಸಂಖ್ಯಾತ ಮುಂಖಂಡರೊಂದಿಗೆ ಪ್ರತ್ಯೇಕ ಹುಟ್ಟು ಹಬ್ಬದ ಕಾರ್ಯಕ್ರಮ ಆಯೋಜಿಸಿದ್ದು , ಆದರಲ್ಲಿ ಭಾಗವಹಿಸಲು ಗೋವಿಂದರಾಜುರವರು ಜಿಲ್ಲಾಧ್ಯಕ್ಷರನ್ನು ಮತ್ತು ಜೋತೆಲಿ ಒಬ್ಬರನ್ನು ಮಾತ್ರ ಕರೆದುಕೊಂಡು ಹೋಗಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಜಿಲ್ಲಾ ಕಛೇರಿಯಲ್ಲಿ ಇದ್ದ ಕಾರ್ಯಕರ್ತರು ಮುಖಂಡರು ಗೋವಿಂದರಾಜುಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಯಾರ ಅಗತ್ಯವು ನನಗಿಲ್ಲ ಎಂಬ ಮೌನದ ಉತ್ತರ ಕಾರ್ಯಕರ್ತರಿಗೆ ಮತ್ತು ನನಗೂ ಯಾವುದೇ ರೀತಿಯ ಸಂಭದವಿಲ್ಲ ಎಂಬ ಸ್ಪಷ್ಟಸಂದೇಶ ರವಾನಿಸುವಂತ್ತಿತ್ತು.
ಈಗಾಗಲೇ ಎಚ್‍ಡಿ ಕುಮಾರ ಸ್ವಾಮಿರವರು ಅಭ್ಯರ್ಥಿ ಗೋವಿಂದರಾಜು ರವರಿಗೆ ಎಲ್ಲರನ್ನು ವಿಶ್ವಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುವಂತೆ ಎಚ್ಚರಿಕೆ ನೀಡಿದ್ದರು ಸಹ ಗೋವಿಂದರಾಜು ನಡವಳಿಕೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬರುತ್ತಿಲ್ಲ. ಪಕ್ಷದ ಸಭೆಯಲ್ಲಿ ಕಾರ್ಯಕರ್ತರ ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ನೀನೂ ಸೋಲುತ್ತೀಯ ಎಂಬ ಎಚ್ಚರಿಕೆಯನ್ನ ಪರಿಗಣಿಸದಿರುವುದು ಎಚ್‍ಡಿ ಕುಮಾರಸ್ವಾಮಿಯ ಮಾತಿಗೂ ನಾನು ಬೆಲೆಕೊಡುವುದಿಲ್ಲ ಎಂಬ ವಿಚಾರವನ್ನು ಕಾರ್ಯಕರ್ತರಿಗೆ ರವಾನಿಸುವಂತಿದೆ ಎಂದು ಪಕ್ಷದ ಮುಖಂಡರೆ ಪಕ್ಷದ ಕಛೇರಿಯಲ್ಲಿ ವ್ಯಕ್ತಪಡಿಸಿದ್ದು, ಜೆಡಿಎಸ್ ಪಾಲಿಗೆ ಮುಜುಗರದ ವಿಚಾರ ಅಭ್ಯರ್ಥಿ ಎನ್. ಗೋವಿಂದರಾಜು ಕಳೆದ ಚುನಾವಣೆಯಲ್ಲೂ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೋಳ್ಳುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದ ಮೂಲ ಜೆಡಿಎಸ್ಸಿಗರು ನಯವಾಗಿ ಜಾರಿಕೊಂಡರು. ಆಂತರಿಕ ಭಿನ್ನಮತವೆ ಗೋವಿಂದರಾಜು ಸೋಲಿಗೆ ಕಾರಣವಾಗಿತ್ತು. ತನ್ನ ಸೋಲಿನ ನಂತರವೂ ಬದಲಾಗದ ಗೋವಿಂದರಾಜು ಕ್ಷೇತ್ರದಿಂದ ದೂರ ಉಳಿದಿದ್ದರು. ಆದರೆ ಇದೀಗ ಮತ್ತೆ ಅಭ್ಯರ್ಥಿಯಾಗಿ ಘೋಷಣೆಯಾದರು ತನ್ನಿಂದ ತನ್ನ ಸ್ವಭಾವಗಳಿಂದ ಯಾವುದೇ ಬದಲಾವಣೆಗಳ ನಿರೀಕ್ಷೆಯಲ್ಲಿ ಇರಬೇಡಿ ನಾನು ಏಕಾಂಗಿಯಾಗಿ ಹೋರಾಡುತ್ತೇನೆ. ಯಾವುದೆ ನಾಯಕರ ಅಥವಾ ಮುಖಂಡರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ಕೊಡುವುದಿಲ್ಲ. ನನ್ನ ಹಣ ನನ್ನನ್ನು ಕೈ ಹಿಡಿಯುತ್ತದೆ ಎನ್ನುವ ಭ್ರಮೆಯಲ್ಲಿ ಚುನಾವಣೆ ಎದುರಿಸಲು ಸಿದ್ದರಾಗಿರುವಂತ್ತಿದೆ.
ಇದು ಹೀಗೆ ಮುಂದುವರೆದರೆ ಈ ಭಾರಿಯೂ ನಮ್ಮ ಪಕ್ಷಕ್ಕೆ ಸೋಲು ಕಟ್ಟಿಟ್ಟಬುತ್ತಿ ಎಂದು ಜೆಡಿಎಸ್ ಪಕ್ಷದ ನಿಷ್ಠಾವಂತ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

(Visited 32 times, 1 visits today)