ತುಮಕೂರು


ಸರಕಾರ ಕ್ವಾರಿ ಮತ್ತು ಕ್ರಷರ್ ಮಾಲೀಕರ ಮೇಲೆ ವಿಧಿಸುತ್ತಿರುವ ಅವೈಜ್ಞಾನಿಕ ದಂಡವನ್ನು ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದಿನಿಂದ ರಾಜ್ಯದಾದ್ಯಂತ ಕ್ವಾರಿ ಮತ್ತು ಕ್ರಷರ್ ಕೆಲಸ ಸ್ಥಗೀತಗೊಳಿಸಿ, ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಷರ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯದಲ್ಲಿ ಸುಮಾರು 3000 ಕ್ಕೂ ಅಧಿಕ ಕ್ವಾರಿ ಮತ್ತು ಕ್ರಷರ್‍ಗಳಿದ್ದು, ದಿನವೊಂದಕ್ಕೆ 50-60 ಸಾವಿರ ಟನ್ ಎಂ.ಸಾಂಡ್,ಜಲ್ಲಿ ಇನ್ನಿತರ ಕಚ್ಚಾ ಪದಾರ್ಥಗಳನ್ನು ಸರಕಾರದ ಯೋಜನೆಗಳ ಜೊತೆಗೆ, ಗೃಹ ನಿರ್ಮಾಣಕ್ಕೂ ಒದಗಿಸುವ ಕೆಲಸ ಮಾಡುತ್ತಿದ್ದೇವೆ.ಸರಕಾರ ಕ್ವಾರಿಗಳನ್ನು ಅಳತೆ ಮಾಡಿ,ನೀವು ನೀಡಿರುವ ಲೆಕ್ಕಕ್ಕಿಂತ ಅಧಿಕ ಖನಿಜ ತೆಗೆದಿದ್ದು,ಹೆಚ್ಚುವರಿ ಖನಿಜಕ್ಕೆ ಚಾಲ್ತಿ ರಾಜಧನದ 5 ಪಟ್ಟು ದಂಡ ಕಟ್ಟುವ ನೊಟೀಷ್ ಜಾರಿ ಮಾಡುತ್ತಿದೆ. ಒಬ್ಬರಿಗೆ 50ಲಕ್ಷದಿಂದ 20 ಕೋಟಿಯವರೆಗೆ ದಂಡ ವಿಧಿಸಿದ್ದಾರೆ.ಇದು ಸಂಪೂರ್ಣ ಅವೈಜ್ಞಾನಿಕವಾಗಿದ್ದು,ಕೂಡಲೇ ಇದನ್ನು ಕೈಬಿಡಬೇಕೆಂಬುದು ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಷರ ಮಾಲೀಕರ ಸಂಘದ ಆಗ್ರಹವಾಗಿದೆ ಎಂದರು.
ನಮ್ಮ ಕ್ವಾರಿ ಮತ್ತು ಕ್ರಷರ್‍ಗಳಿಂದ ಸರಕಾರ ಲೋಕೋಪಯೋಗಿ, ಪಿಆರ್‍ಇಡಿ ಮತ್ತು ಇನ್ನಿತರ ಇಲಾಖೆಗಳ ರಸ್ತೆ, ಕಟ್ಟಡ ಇನ್ನಿತರ ನಿರ್ಮಾಣ ಕಾಮಗಾರಿಗಳಿಗೆ ಸರಬರಾಜು ಮಾಡಿದ ಎಂ.ಸಾಂಡ್, ಜಲ್ಲಿಗಳಿಗೆ ಗುತ್ತಿಗೆದಾರರಿಗೆ ಹಣ ಪಾವತಿಸುವ ಸಂದರ್ಭದಲ್ಲಿಯೇ ಸರಕಾರ ರಾಜಧನ ಕಟಾವು ಮಾಡಿ, ಬಿಲ್ ಪಾವತಿಸುತ್ತದೆ. ಅಲ್ಲದೆ ಪ್ರತಿವರ್ಷ ಕ್ವಾರಿಗೆ ಬಂದು ಲೀಸ್ ಪಡೆದ ಪ್ರದೇಶದ ಅಳತೆ ಮಾಡಿ, ಅದರ ಆಧಾರದ ಮೇಲೆ ರಾಜಧನ ನಿಗಧಿ ಪಡಿಸಿ, ವಸೂಲಿ ಮಾಡುತ್ತಿದೆ.ಇದು ಸರಕಾರದ ಗಮನದಲ್ಲಿಯೂ ಇದೆ ಎಂದು ಭಾಸ್ಕರ್ ನುಡಿದರು.
ಸರಕಾರ ಗುತ್ತಿಗೆದಾರರಿಂದ ಮತ್ತು ಕ್ವಾರಿ ಮಾಲೀಕರಿಂದ ರಾಜಧನ ಪಡೆದರೂ ಮತ್ತೊಮ್ಮೆ ಕ್ವಾರಿಗಳನ್ನು ಅಳತೆ ಮಾಡಿ, ನಿಗಧಿಪಡಿಸಿದ್ದಕ್ಕಿಂತಲೂ ಹೆಚ್ಚು ಅದಿರು ತೆಗೆದಿದ್ದೀರಿ, ಇದಕ್ಕೆ ಲೆಕ್ಕ ನೀಡಿಲ್ಲ ಎಂದು 5 ಪಟ್ಟು ದಂಡ ವಧಿಸಿರುವುದು ತುಂಬಾ ಅವೈಜ್ಞಾನಿಕವಾಗಿದೆ.ಇದರ ಜೊತೆಗೆ ಇನ್ನೂ ಹಲವಾರು ಅವೈಜ್ಞಾನಿಕ ತೆರಿಗೆಗಳ ಮೂಲಕ ಕ್ವಾರಿ ಮಾಲೀಕರನ್ನು ಹಿಂಸಿಸದಲಾಗುತ್ತಿದೆ.ಇದುವರೆಗಿನ ಎಲ್ಲಾ ಸರಕಾರಗಳಿಗೂ ಈ ವಿಚಾರವಾಗಿ ಮನವಿ ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ.ಹಾಗಾಗಿ ಮಾಡು,ಇಲ್ಲವೇ ಮಡಿ ಎಂಬಂತೆ ಈ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿರುವುದಾಗಿ ಭಾಸ್ಕರ್ ತಿಳಿಸಿದರು. ಸರಕಾರದ ಈ ನಡೆಯನ್ನು ಖಂಡಿಸಿ, ಡಿಸೆಂಬರ್ 28 ರಂದು ಬೆಳಗಾವಿ ಸುವರ್ಣಸೌಧ ಚಲೋ ಕಾರ್ಯಕ್ರಮವನ್ನು ರಾಜ್ಯದ 3000 ಕ್ವಾರಿ ಮಾಲೀಕರು, ಅದರಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಅವರ ಅವಲಂಬಿತರು ಕೈಗೊಂಡಿದ್ದು,ಕೂಡಲೇ ಅವೈಜ್ಞಾನಿಕ ದಂಡವನ್ನು ಕೈಬಿಡಬೇಕೆಂದು ಸರಕಾರದ ಮೇಲೆ ಒತ್ತಡ ಹೇರಲಾಗುವುದು. ರಾಜ್ಯದಲ್ಲಿ ಸುಮಾರು 40 ಲಕ್ಷ ಕ್ವಾರಿ ಮತ್ತು ಕ್ರಷರ್ ನಂಬಿ ಬದುಕುತ್ತಿದ್ದಾರೆ.ಕ್ವಾರಿಗಳನ್ನು ಬಂದ್ ಮಾಡಿ, ಮುಷ್ಕರ ನಡೆಸುವುದರಿಂದ ಅವರಿಗೆ ಜೀವನ ನಡೆಸುವುದು ಕಷ್ಟ ಎಂಬ ಅರಿವಿದ್ದರೂ,ಸರಕಾರದ ಅವೈಜ್ಞಾನಿಕ ದಂಡದಿಂದ ಕ್ರಷರ್ ಮತ್ತು ಕ್ವಾರಿ ಮಾಲೀಕರು ಮನೆ, ಮಠಗಳನ್ನು ಮಾರಿಕೊಳ್ಳಬೇಕಾಗುತ್ತದೆ. ಹಾಗಾಗಿ ರಾಜ್ಯದ ಎಲ್ಲಾ ಕ್ರಷರ್ ಮತ್ತು ಕ್ವಾರಿಗಳಲ್ಲಿ ಇಂದಿನಿಂದ ಉತ್ಪಾಧನೆ, ಸಾಗಾಣ ಮತ್ತು ಮಾರಾಟ ಎಲ್ಲವನ್ನು ಸ್ಥಗೀತಗೊಳಿಸಿ,ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತಿರುವುದಾಗಿ ನುಡಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘದ ಪದಾಧಿಕಾರಿಗಳಾದ ಅನಿಫ್, ನಾರಾಯಣಬಾಬು, ಬಾಲಾಜಿ, ಮೆಹಬೂಬ್ ರವಿ ಉಪಸ್ಥಿತರಿದ್ದರು.

 

(Visited 1 times, 1 visits today)