ಗುಬ್ಬಿ
ಗ್ರಾಮೀಣ ಭಾಗದ ಕಲೆ ಸಂಸ್ಕೃತಿ ಉಳಿಯಲು ಕಾರಣ ಕನ್ನಡ ಭಾಷೆ, ಕನ್ನಡ ನೆಲ, ಜಲ ಇವುಗಳ ಸಂಗಮವೇ ಎಂದು ಸಾಹಿತಿ ಮತ್ತು ಸಮ್ಮೇಳನ ಅಧ್ಯಕ್ಷ ಎಣ್ಣೆ ಕಟ್ಟೆ ಚಿಕ್ಕಣ್ಣ ಅಭಿಪ್ರಾಯಪಟ್ಟರು.
ಜೇಳೂರು ನಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕರಣ ಯುಗದಲ್ಲಿ ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಗ್ರಾಮೀಣ ಭಾಗದ ಜೀವಂತ ಕಲೆಗಳು ಹಾಗೂ ಸಂಸ್ಕಾರಕ್ಕೆ ಹೆಚ್ಚು ಹೊತ್ತನ್ನು ನೀಡಬೇಕೆಂದು ತಿಳಿಸಿದರು. ನಾನು ತುಂಬಾ ಶ್ರೀಮಂತ ಮನತೆಂದ ಬಂದವನಲ್ಲ ಬಡತನದಿಂದ ಸರ್ಕಾರಿ ಶಾಲೆಯಲ್ಲಿ ಓದಿ ಇಂದು ನಿಮ್ಮೆಲ್ಲರ ಪ್ರೀತಿ ಪಾತ್ರವಾಗಿ ತೇನೆ ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಚೇಳೂರು ಹೋಬಳಿಯ ಜನ ರ ಹೃದಯದಲ್ಲಿದ್ದು ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಸಹಾಯವಾಗುತ್ತದೆ ಎಂದರು. ಮುಂದುವರೆದು ಮಾತನಾಡಿ ಜಾನಪದ ಕಲೆಯು ನಮ್ಮ ನಾಡಿನ ಜೀವನದಿ ನಾನು ಸುಮಾರು ರಾಜ್ಯಗಳನ್ನು ಸುತ್ತಿದ್ದು ಇದರಿಂದ ಬೇರೆ ಬೇರೆ ರಾಜ್ಯಗಳ ಕಲಾತಂಡಗಳೊಂದಿಗೆ ಬೆರೆತು ಅವರ ಸಂಸ್ಕೃತಿಯನ್ನು ಕಲಿಯಲು ಸಹಾಯವಾಗಿದೆ ಎಂದರು.
ಗುಬ್ಬಿ ತಾಲೂಕಿನ ಎಲ್ಲಾ ಭಾಗದ ಹಳ್ಳಿಗಳು ಪರಿಚಯ ನನಗಿದ್ದು ಆಯಾ ಭಾಗದ ಜನರ ಬದುಕು ಭವಣೆಗಳನ್ನು ನನ್ನ ಬರಹದಲ್ಲಿ ತಿಳಿಸಿದ್ದೇನೆ ನನಗೆ ಈ ರೀತಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನೀಡಿದಂತಹ ಎಲ್ಲಾ ಕಲಾಸಕ್ತರಿಗೂ ಕನ್ನಡ ಅಭಿಮಾನಿಗಳಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ತಿಳಿಸಿದರು.
ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾತನಾಡಿ ಗ್ರಾಮೀಣ ಪ್ರದೇಶದ ಸಾಹಿತಿಗಳನ್ನು ಗುರುತಿಸುವಂತಹ ಕೆಲಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಡೆಸಿದ್ದು ಇದರ ಸಂಬಂಧವಾಗಿ ಅಧ್ಯಕ್ಷರನ್ನಾಗಿ ಎಣ್ಣೆಕಟ್ಟೆ ಚಿಕ್ಕಣ್ಣನವರನ್ನು ಆರಿಸಲಾಯಿತು ಅವರ ಬರಹಗ ಬದುಕು ಸಮಾಜಕ್ಕೆ ದಾರಿದೀಪವಾಗಿದ್ದು ಇದರಿಂದ ಗ್ರಾಮೀಣ ಪ್ರದೇಶದ ಜನರ ಹಾಗೂ ಹೋಗುಗಳನ್ನು ರಾಜ್ಯಕ್ಕೆ ತಿಳಿಸುವಂತಹ ಪುಸ್ತಕಗಳನ್ನು ಬರೆದು ಹಳ್ಳಿಗಾಡಿನ ಜನರ ಬದುಕನ್ನು ಸಮಾಜಕ್ಕೆ ತಿಳಿಸುವಂತಹ ಕೆಲಸ ಸಾಹಿತಿ ಎಣ್ಣೆಕಟ್ಟೆ ಚಿಕ್ಕಣ್ಣ ಮಾಡಿರುವುದು ತಿಳಿಸಿದರು ಇದೇ ಸಂದರ್ಭದಲ್ಲಿ ಸಾಹಿತಿ ಮತ್ತು ಬರಹಗಾರ ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ವೇದಿಕೆ ಕರೆತಂದು ಸನ್ಮಾನಿಸಲಾಯಿತು
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರುಗಳು, ಪ್ರಾಧ್ಯಾಪಕರು ಉಪಾಧ್ಯಾಯರುಗಳು ಕನ್ನಡ ಅಭಿಮಾನಿಗಳು ಹಾಗೂ ಸ್ಥಳೀಯ ಮುಖಂಡರುಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.