ತುಮಕೂರು
ರಾಜ್ಯ ಮಟ್ಟದ ಜನನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ.ಲಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಬನಶಂಕರಿ ಬಾಬು ಆಯ್ಕೆಯಾಗಿದ್ದಾರೆ.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ತುಮಕೂರು ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಬನಶಂಕರಿ ಬಾಬು ಅವರು, ಸಹಕಾರಿ ಮತ್ತು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದು, ರಾಜ್ಯಮಟ್ಟದ ಸಂಸ್ಥೆಯಾದ ಜನನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಆಡಳಿತ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಇತ್ತಿಚೆಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅರುಣ್ಕುಮಾರ್ (ಬನಶಂಕರಿ ಬಾಬು) ಅವರಿಗೆ ಬ್ಯಾಂಕ್ನ ಅಧ್ಯಕ್ಷರಾದ ಎಚ್.ಮಂಜಪ್ಪ ಅವರು ಆಯ್ಕೆಯಾದ ದೃಢೀಕೃತ ಪತ್ರವನ್ನು ವಿತರಿಸಿದರು. ಈ ವೇಳೆ ಬ್ಯಾಂಕ್ ಉಪಾಧ್ಯಕ್ಷರಾದ ದಿನೇಶ್, ನಿರ್ದೇಶಕರಾದ ವಜ್ರಮುಡಿ, ಬಿ.ಸಿ.ಕೃಷ್ಣ, ದೇವರಾಜು, ರವಿಕುಮಾರ್, ಮೀನಾಕ್ಷಿ ಹಾಗೂ ಬಾಲಾಜಿ ಅವರು ಉಪಸ್ಥಿತರಿದ್ದರು.
(Visited 4 times, 1 visits today)