ತುಮಕೂರು
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮಕ್ಕಳಿಗೆ ನಕಲಿ ವಿಮಾ ಕಾರ್ಡು ವಿತರಣೆ ಪ್ರಕರಣದಲ್ಲಿ ಚುನಾವಣಾ ಅಕ್ರಮ ಸಾಬೀತಾಗಿದ್ದು, ಕೆಲವೇ ದಿನಗಳಲ್ಲಿ ಶಾಸಕ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2018ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ವಿಮೆ ಬಾಂಡ್ ಹಂಚಿದ್ದಾರೆ ಎಂಬುದು ಸಾಬೀತಾಗಿದೆ, ಸ್ವತಹಃ ಐಆರ್‍ಡಿಬಿಯೇ ಕಮ್ಮಗೊಂಡನಹಳ್ಳಿ ಶ್ರೀಮಾರುತಿ ಚಾರಿಟಬಲ್ ಟ್ರಸ್ಟ್‍ನಿಂದ ಗ್ರಾಮಾಂತರ ಕ್ಷೇತ್ರದ ಸುಮಾರು 16 ಸಾವಿರ ಮಕ್ಕಳಿಗೆ ನೀಡಿರುವ ವಿಮಾ ಬಾಂಡ್ ನಕಲಿ ಎಂಬುದನ್ನು ಒಪ್ಪಿಕೊಂಡಿದೆ.ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಶೀಘ್ರ ಅಂತಿಮ ತೀರ್ಪ ಹೊರಬೀಳಲಿದೆ ಎಂದರು.
ಗ್ರಾಮಾಂತರ ಶಾಸಕರ ಬೇನಾಮಿಯಾಗಿರುವ ಪಾಲನೇತ್ರಯ್ಯ ಚುನಾವಣಾ ಸಂದರ್ಭದಲ್ಲಿ ವಿಜೆಲೆನ್ಸ್ ನವರ ಕೈಗೆ ಸಿಕ್ಕು, ತಾನು ಮಾಡಿರುವ ಅಕ್ರಮ ಒಪ್ಪಿ, ತುಮಕೂರು ನ್ಯಾಯಾಲಯದಲ್ಲಿ ಒಂದು ಸಾವಿರ ದಂಡ ಕಟ್ಟಿದ್ದಾರೆ,ಗೌರಿಶಂಕರ್ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದಿದ್ದಾರೆ, ಪಾಲನೇತ್ರಯ್ಯ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ ನ್ಯಾಯಾಲಯದ ರಜೆ ಮುಗಿದ ನಂತರ ತೀರ್ಪು ಹೊರಬೀಳಲಿದ್ದು, ಗೌರಿಶಂಕರ್ ಶಾಸಕ ಸ್ಥಾನದಿಂದ ವಜಾಗೊಳ್ಳುವುದು ಖಚಿತ ಎಂದು ಸೂರ್ಯ ಮುಕುಂದರಾಜ್ ತಿಳಿಸಿದರು.