ತುಮಕೂರು


ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಹೆ.ಎಸ್ ರವಿಶಂಕರ್ ಹೆಬ್ಬಾಕ ರವರ ಸಮ್ಮುಖದಲ್ಲಿ ನಗರದ 25, 30, 31 ಹಾಗೂ 35ನೇ ವಾರ್ಡಿನ ಅನೇಕ ಜನರು ಕಾಂಗೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ನಂತರ
ಸಾಕಷ್ಟು ಬದಲಾವಣೆಗಳಾಗಿವೆ. ಸತತ ಏಂಟು ವರ್ಷಗಳ ಕಾಲ ಸುದೀರ್ಘ ದೇಶದ ಅಭಿವೃದ್ಧಿಗೆ ಶ್ರಮಿಸಿದ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ದೇಶದ ಕೊನೆಯ ಪ್ರಜೆಗೂ ತಲುಪಿಸುವ ನಿಟ್ಟಿನಲ್ಲಿ ಅವರೆ ಕಾರ್ಯವೈಖರಿ ಎಲ್ಲರಿಗೂ ಮಾರ್ಗದರ್ಶನವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ರಾಜ್ಯ ಬಿಜೆಪಿ ಸರ್ಕಾರವು ಅನುಷ್ಠಾನಗೊಳಿಸುತ್ತಿದ್ದು, ಇಂದು ಎಲ್ಲರ ಅಭಿವೃದ್ಧಿಯ ಹೊಣೆಯನ್ನು ಬಿಜೆಪಿ ಸರ್ಕಾರ ಹೊತ್ತಿದೆ ಎಂದರು.
ಕೊರೋನಾ ಸಂದರ್ಭದಲ್ಲಿ ಭಾರತದ ಕಟ್ಟು ನಿಟ್ಟಿನ ಕ್ರಮದಿಂದಾಗಿ ಕೊರೋನಾ ಸೋಂಕನ್ನು ಅತ್ಯಂತ ದಕ್ಷತೆಯಿಂದ ತಡೆಗಟ್ಟಿದವರು ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಆದ್ದರಿಂದ ಡಬ್ಲೂಹೆಚ್‍ಓ ಪ್ರಪಂಚದ ಎಲ್ಲಾ ದೇಶಗಳ ಮುಂದೆ ಭಾರವನ್ನು ವರ್ಣಿಸಿದೆ ಎಂದರು.
ನರೇಂದ್ರ ಮೋದಿಯವರ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಬೆಂಬಲಿಸಿದ ಜನರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ 7 ಬಾರಿ ಅಂದರೆ 35 ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರುವುದೇ ಅತ್ಯುತ್ತಮ ಸಾಕ್ಷಿ ಎಂದರು.
ಇನ್ನೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ಕಾಂಗ್ರೆಸ್ ಪಕ್ಷದವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವರು ಬಡವರು ಹಾಗೂ ರೈತರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಬಂದಿದ್ದು ಅವರ ಕಾಲಾವಧಿಯಲ್ಲಿ ಅಭಿವೃದ್ಧಿ ಎಂಬುದೇ ಇರಲಿಲ್ಲ ಎಂದರು.
ತುಮಕೂರು ನಗರದ ಸ್ಮಾರ್ಟ್ ಸಿಟಿ ಯೋಜನೆಗೆ 1 ಸಾವಿರ ಕೋಟಿ ಹಣ ಬಿಡುಗಡೆ ಮಾಡುವುದರ ಮೂಲಕ ನಗರದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಹಾಗೂ 32 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದು ನರೇಂದ್ರ ಮೋದಿಯವರ ಕೊಡುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಟುಡಾ ಸದಸ್ಯರಾದ ಹನಮಂತಪ್ಪ ಎನ್ ಮಾತನಾಡಿ, ನಗರದ ಶಾಸಕರಾದ ಜ್ಯೋತಿಗಣೇಶ್ ಅವರು ಮುಗ್ದ ಮನಸ್ಸಿನ ನಾಯಕರು. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿ ಎಲ್ಲ ವರ್ಗದ ಅಭಿವೃದ್ದಿಯ ಬಗ್ಗೆ ಅತ್ಯಂತ ಹೆಚ್ಚು ಕಾಳಜಿಯನ್ನು ಹೊಂದಿದಾರೆ. ಜ್ಯೋತಿಗಣೇಶ್ ಅವರ ಇಷ್ಟು ವರ್ಷಗಳ ಕಾಲದ ಅಭಿವೃದ್ಧಿಯನ್ನು ಗಮನಿಸಿ ನಗರದ ಬಹುತೇಕ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರುತ್ತಿದ್ದಾ ಎಂದರು.
ಮಾಜಿ ಟುಡಾ ಸದಸ್ಯರಾದ ಜೆ.ಜಗದೀಶ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಬಂದವರಿಗೆ ಸ್ವಾಗತವನ್ನು ಕೋರಿದರು. ನಂತರ ಎಲ್ಲರೂ ಸೇರಿ ನಮ್ಮ ಮುಂದಿನ ಅಭ್ಯರ್ಥಿಯನ್ನು ಬೆಂಬಲಿಸುವುದರ ಮೂಲಕ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪ್ರಯತ್ನಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಹೆಚ್.ಎಸ್ ರವಿಶಂಕರ್ ಹೆಬ್ಬಾಕ, ಮಾಜಿ ಟೂಡಾ ಅಧ್ಯಕ್ಷರಾದ ಬಿ.ಎಸ್ ನಾಗೇಶ್, ಮಹಾನಗರ ಪಾಲಿಕೆ ಸದಸ್ಯರಾದ ಸಿ.ಎನ್ ರವೀಶ್, ಮಂಜುಳಾ ಆದರ್ಶ್, ಜಿಲ್ಲಾ ಉಪಾಧ್ಯಕ್ಷೆ ನಾಗರತ್ನಮ್ಮ, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸದಸ್ಯ ರುದ್ರೇಶ ಎಂ.ವೈ, ಪ್ರಕೋಷ್ಠಗಳ ಜಿಲ್ಲಾ ಸಂಯೋಜನರಾದ ಹೆಚ್.ಎಂ ರವೀಶ್, ಮಾಜಿ ಟೂಡಾ ಸದಸ್ಯರಾದ ಹನುಮಂತಪ್ಪ ಎನ್ ಹಾಗೂ ಜೆ.ಜಗದೀಶ್, ನಗರ ಖಜಾಂಚಿ ಪಿ.ಡಿ ರಾಘವೇಂದ್ರ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಕ್ಷಿತ್ ವಿ ಗಣೇಶ್ ಹಾಗೂ ಮುಖಂಡರು ಉಪಸ್ಥಿತಿಯಿದ್ದರು.

(Visited 2 times, 1 visits today)