ತುಮಕೂರು

ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ಧ ಸಹಕಾರಿ ನಿ. ಸರ್ವಸದಸ್ಯರ ವಾರ್ಷಿಕ ಸಭೆ ಮತ್ತು ಸ್ಲಂ ಜನರ ಜಾಗೃತಿ ಸಮಾವೇಶ ಉದ್ಘಾಟನಾ ಸಮಾರಂಭವನ್ನು ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಹಾಗೂ ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ಧ ಸಹಕಾರಿ ಸಂಘದಿಂದ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟನೆಯನ್ನು ನೆರವೇರಿಸಿ ಆರ್ಶೀವಚನ ನೀಡಿದ ತಪೋವನ ಹಿರೇಮಠದ ಡಾ.ಶಿವಾನಂದ ಶಿವಚಾರ್ಯ ಮಹಾಸ್ವಾಮಿಜಿಯವರು ಸಂಘಮಿತ್ರ ಸ್ಲಂ ಜನರ ಭರವಸೆ ಹೆಸರಿನಲ್ಲೇ ಭವಿಷ್ಯದ ಮುನ್ನೋಟ ಹೊಂದಿರುವ ಸಂಘ ಕೊಳಗೇರಿಗಳನ್ನು ಅಗ್ರಹಾರಗಳನ್ನಾಗಿ ಬೆಳಗುವ ದೀಪವಾಗಲಿ ಸೊನ್ನೆಗೂ ಮೌಲ್ಯವಿದೆ ಹಾಗಾಗಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಕೊಳಗೇರಿಗಳು ವ್ಯವಸ್ಥೆ ಮತ್ತು ಸಮಯದ ಜೊತೆಯಲ್ಲಿ ರಾಜಿ ಮಾಡಿಕೊಳ್ಳದೇ ನಮ್ಮ ಅಭಿವೃದ್ದಿಗೆ ಮುಂದಾದರೆ ಸ್ಲಂ ಜನರಿಗೆ ಸಂವಿಧಾನದ ಸಮಪಾಲು ಸಮಬಾಳು ದಕ್ಕಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಾವು ಎಚ್ಚರದ ಹೋರಾಟವನ್ನು ಕೈಗೊಳ್ಳಬೇಕಾಗಿದೆ. ಅಂಬೇಡ್ಕರ್ ತುಳಿದ ದಾರಿ ಸುಖದ ದಾರಿಯಾಗಿರಲಿಲ್ಲ ಹಾಗಾಗಿ ಅಂಬೇಡ್ಕರ್ ಅರಿವು ಭೀಮನ ದಾರಿಯಿಂದ ಬಾಬಾನಾಗುವ ಹಂತಕ್ಕೆ ತಲುಪಿತು ಆದ್ದರಿಂದ ಸಮಾಜದಲ್ಲಿರುವ ಎಲ್ಲಾ ಬಡವರ ಹಾದಿ ಸುಗಮವಲ್ಲ ಹಿಂದಿನ ಕಾಲದ ಧೌರ್ಜನ್ಯ ವ್ಯವಸ್ಥೆಯಿಂದ ಕನಿಷ್ಠ ವ್ಯಕ್ತಿ ಗರಿಷ್ಠ ಪ್ರಯತ್ನ ಮಾಡಿದರು ಮೇಲೆಳಲು ಸಾಧ್ಯವಾಗುತ್ತಿರಲಿಲ್ಲ ಆದರೆ ಇಂದಿನ ಸಮಾಜ ಆಧುನಿಕತೆಯೊಂದಿಗೆ ವೈಜ್ಞಾನಿಕ ಮತ್ತು ತಂತ್ರಜ್ಞಾನವಿರುವುದರಿಂದ ಗೂಗಲ್ ಮತ್ತು ಯೂಟೂಬ್ ಜನರಿಗೆ ಗುರುದೇವಗಳಾಗುತ್ತಿದ್ದು ಅಕ್ಷರದ ಗುರು ದೇವರು ಮರೆಯಾಗುತ್ತಿದ್ದಾರೆ.
ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ ಸ್ಲಂ ಜನರ ಬಗ್ಗೆ ಸಮಾಜ ಹೊಂದಿರುವ ಭಾವನೆಯಿಂದ ಹೊರಬರಲು ನಾವು ಅಂಬೇಡ್ಕರ್ ಸಂವಿಧಾನದ ಹಾದಿಯಲ್ಲಿ ನಡೆಯಬೇಕು, ಯಾವ ಸಮಾಜ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲವೋ ಅಂತಹ ಸಮಾಜ ಮುಟ್ಟಿಸಿಕೊಳ್ಳಲು ಸಂವಿಧಾನ ಕಾರಣವಾಗಿದೆ. ಸ್ಲಂ ಜನರ ಈ ಬ್ಯಾಂಕ್ ದೊಡ್ಡದಾಗಿ ಬೆಳೆಯಲಿ. ನಾನು ಸಹಾ ಸ್ಲಂ ನಿವಾಸಿ ನಗರಪಾಲಿಕೆಯಿಂದ ಕೊಳಗೇರಿ ಜನರ ಅಭಿವೃದ್ಧಿಗೆ ಬೇಕಾದ ಎಲ್ಲಾ ಸಹಕಾರ ಬೆಂಬಲ ನೀಡಲಾಗುವುದೆಂದರು.
ಮುಖ್ಯ ಅತಿಥಿಗಳಾಗಿ ಕೆ.ದೊರೈರಾಜ್ ಹಿರಿಯ ಚಿಂತಕರು ಕರಪತ್ರ ಬಿಡುಗಡೆಗೊಳಿಸಿದರು, ಸ್ಲಂ ಜನಾಂದೋಲನ ಕರ್ನಾಟಕ, ಎ.ನರಸಿಂಹಮೂರ್ತಿ ನಿರ್ಣಯ ಮಂಡಿಸಿ ಮಾತನಾಡಿದರು.
ಸೌಹಾರ್ಧ ಸಂಘದ ಮುಖ್ಯಪ್ರವರ್ತಕರಾದ ತಿರುಮಲಯ್ಯ ಅಧ್ಯಕ್ಷತೆ ವಹಿಸಿ 2021-22ನೇ ಸಾಲಿನ ಆಯವ್ಯಯ ಮತ್ತು ಜಮಾ ಖರ್ಚನ್ನು ಮಂಡಿಸಿ ಅನುಮೋದನೆ ಪಡೆದರು. ವೇಧಿಕೆಯಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ದೀಪಿಕಾ, ಶಂಕ್ರಯ್ಯ, ಕಣ್ಣನ್, ಜಾಬೀರ್‍ಖಾನ್, ಮಂಗಳಮ್ಮ, ಗಂಗಾ, ಮೋಹನ್, ಮಂಗಳಮ್ಮ ಬಿ, ಉಪಸ್ಥಿತರಿದ್ದರು.
ನಿರೂಪಣೆಯನ್ನು ಅರುಣ್ ಟಿ.ಜಿ ಸ್ವಾಗತವನ್ನು ತಿರುಮಲ,ವಂದನಾರ್ಪಣೆಯನ್ನು ಧನಂಜಯ್, ನೆರವೇರಿಸಿದರು.

(Visited 1 times, 1 visits today)